ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Hindu Rashtra Archives » Dynamic Leader
October 23, 2024
Home Posts tagged Hindu Rashtra
ರಾಜಕೀಯ

ನವದೆಹಲಿ: ಒಂದು ದೇಶ; ಒಂದೇ ಚುನಾವಣೆ ಎಂಬುದನ್ನು ಪ್ರಾಯೋಗಿಕ ಪಡಿಸಲು ಸಾಧ್ಯವಿರುವ ಅಂಶಗಳನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಪ್ರಥಮವಾಗಿ ಸಮಾಲೋಚನೆ ನಡೆಸಿತು. ಈ ಸಭೆಯಲ್ಲಿ ಕೇಂದ್ರ ಸಚಿವರು ಭಾಗವಹಿಸಿದ್ದರು.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳಿಗೆ ಬಿಸಿ ಹಾಲು ನೀಡುವ ಕ್ಷೀರಭಾಗ್ಯ ಯೋಜನೆಗೆ ಈಗ ದಶಮಾನೋತ್ಸವದ ಸಂಭ್ರಮ!

ಒಂದು ದೇಶ; ಒಂದೇ ಚುನಾವಣಾ ಜಾರಿಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲು, ಮಾಜಿ ರಾಷ್ಟ್ರಪತಿ ರಾಮನಾಥ್ ಗೋವಿಂದ್ ನೇತೃತ್ವದ ಸಮಿತಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿತು. ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್, ಲೋಕಸಭೆ ಮಾಜಿ ಕಾರ್ಯದರ್ಶಿ ಸುಭಾಷ್ ಸಿ.ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ, ಮಾಜಿ ಮುಖ್ಯ ವಿಜಿಲೆನ್ಸ್ ಆಯುಕ್ತ ಸಂಜಯ್ ಕೊಠಾರಿ ಇದ್ದಾರೆ. ಆದರೆ ಅಧೀರ್ ರಂಜನ್ ಚೌಧರಿ ಈ ಗುಂಪಿನ ಭಾಗವಾಗಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಒಂದು ಕೋಟಿ ಗೋವಿಂದ ನಾಮ ಬರೆಯುವವರಿಗೆ ವಿಐಪಿ ದರ್ಶನ: ತಿರುಪತಿಯಲ್ಲಿ ಆಫರ್!

ಈ ಹಿನ್ನಲೆಯಲ್ಲಿ ಈ ಸಮಿತಿಯ ಮೊದಲ ಸಭೆ ಇಂದು ನಡೆಯಿತು. ರಾಮ್ ನಾಥ್ ಕೋವಿಂದ್ ಅವರ ನಿವಾಸದಲ್ಲಿ ಸಭೆ ನಡೆದಿದ್ದು, ಕೇಂದ್ರ ಸಚಿವರಾದ ಅಮಿತ್ ಶಾ, ಅರ್ಜುನ್ ರಾಮ್ ಮೇವಾಲ್ ಮತ್ತಿತರರು ಉಪಸ್ಥಿತರಿದ್ದರು. ಒಂದು ದೇಶ; ಒಂದೇ ಚುನಾವಣೆ ಪ್ರಕ್ರಿಯೆಯ ಸಾಧಕ-ಬಾಧಕಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ: ಗೇಮ್ ಚೇಂಜರ್ಸ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೇವಲ ನೇಮ್ ಚೇಂಜರ್ಸ್ ಆಗಿದೆ!

 

ದೇಶ

ಭಾರತದ ಪರವಾಗಿ ಚಂದ್ರನ ದಕ್ಷಿಣ ಭಾಗವನ್ನು ಅದ್ಯಯನ ಮಾಡಲು ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ-3 ಕಳೆದ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ದಾಖಲೆ ನಿರ್ಮಿಸಿತು. ಈ ಸಾಧನೆಯನ್ನು ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದ ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಹೊರಬಂದು, ಅಧ್ಯಯನಕ್ಕಾಗಿ ತನ್ನ ಪಯಣವನ್ನು ಚಂದ್ರನ ದಕ್ಷಿಣ ಧ್ರುವದಿಂದ ಪ್ರಾರಂಭಿಸಿ ನಡೆಸುತ್ತಿದೆ.

ಲ್ಯಾಂಡರ್ ಚಂದ್ರನ ಮೇಲೆ ಇಳಿದಾಗ ಪ್ರಧಾನಿ ಮೋದಿ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಗ್ರೀಸ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಅವರು ದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದರು. ಇಲ್ಲಿನ ಇಸ್ರೋ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಚಂದ್ರಯಾನ-3 ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ಅವರೊಂದಿಗೆ ಸಂವಾದ ನಡೆಸಿದರು.

ಆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ಚಂದ್ರಯಾನ-3 ಯೋಜನೆಯಲ್ಲಿ ಮಹಿಳೆಯರ ಸಹಭಾಗಿತ್ವವೂ ಮುಖ್ಯವಾಗಿದೆ. ಹಾಗಾಗಿ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ‘ಶಿವಶಕ್ತಿ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಈ ಶಕ್ತಿಯು ಮಹಿಳೆಯರ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಅದೇ ರೀತಿ, 2019ರಲ್ಲಿ ಚಂದ್ರಯಾನ 2 ಚಂದ್ರನ ಮೇಲೆ ಇಳಿದ ಸ್ಥಳವನ್ನು ‘ತಿರಂಗ’ (ತ್ರಿವರ್ಣ ಧ್ವಜ) ಎಂದು ಕರೆಯಲಾಗುತ್ತದೆ.” ಎಂದರು.

ಇದನ್ನೂ ಓದಿ: ಚಂದ್ರಯಾನ-3 ಯೋಜನೆಗೆ “ಕನ್ನಡ ಚಂದ್ರಯಾನ-3” ಎಂಬ ಹೆಸರನ್ನು ಮರು ನಾಮಕರಣ ಮಾಡಲು ವಾಟಾಲ್ ನಾಗರಾಜ್ ಒತ್ತಾಯ!

104ನೇ ಮನ್ ಕೀ ಬಾತ್ (ಮನಸ್ಸಿನ ಧ್ವನಿ) ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಆಗಸ್ಟ್ 23, ಭಾರತ ಮತ್ತು ಭಾರತದ ಚಂದ್ರಯಾನ ನಿರ್ಣಯದ ಕೆಲವು ಸೂರ್ಯಗಳು ಚಂದ್ರನ ಮೇಲೂ ಉದಯಿಸುತ್ತದೆ ಎಂಬುದನ್ನು ಸಾಬೀತು ಪಡಿಸಿವೆ. ಮಿಷನ್ ಚಂದ್ರಯಾನ ಮೂಲಕ ಎಲ್ಲಾ ಹಂತಗಳಲ್ಲಿ ಭಾರತ ಗೆಲ್ಲಲು ಬಯಸಿದೆ. ಇದು ನವಭಾರತದ ಚೈತನ್ಯದ ಸಂಕೇತವಾಗಿದೆ.” ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಚಕ್ರಪಾಣಿ ಮಹಾರಾಜ್, “ಚಂದ್ರನನ್ನು ಸಂಸತ್ತು ಹಿಂದೂ ರಾಷ್ಟ್ರ (Hindu Rashtra) ಎಂದು ಘೋಷಿಸಬೇಕು” ಎಂದು ವಿನಂತಿಸಿಕೊಂಡಿರುವ ವೀಡಿಯೊ ಒಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ, “ಸಂಸತ್ತು, ಚಂದ್ರನನ್ನು ಹಿಂದೂ ಸನಾತನ ರಾಷ್ಟ್ರ ಎಂದು ಘೋಷಿಸಬೇಕು. ಅಲ್ಲದೆ, `ಶಿವಶಕ್ತಿ ಪಾಯಿಂಟ್’ ಎಂದು ಹೆಸರಿಸಲಾದ ಚಂದ್ರಯಾನ-3 ಬಂದಿಳಿದ ಸ್ಥಳವನ್ನು ಅದರ ರಾಜಧಾನಿಯನ್ನಾಗಿ ಘೋಷಿಸಬೇಕು.

ಇದರೊಂದಿಗೆ ಜಿಹಾದಿ ಮನಸ್ಥಿತಿಯ ಯಾವ ಭಯೋತ್ಪಾದಕನೂ ಅಲ್ಲಿಗೆ ಹೋಗುವಂತಿಲ್ಲ. ಹಾಗಾಗಿ ಭಾರತ ಸರ್ಕಾರವು ಅಲ್ಲಿಗೆ ಯಾವುದೇ ಭಯೋತ್ಪಾದಕರು ಹೋಗದಂತೆ ತ್ವರಿತವಾಗಿ ಕ್ರಮಕೈಗೊಳ್ಳಬೇಕು,” ಎಂದು ಹೇಳಿದ್ದಾರೆ.