ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Human Milk Archives » Dynamic Leader
October 23, 2024
Home Posts tagged Human Milk
ರಾಜ್ಯ

“ದಾನಿಗಳ ಎದೆಹಾಲನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಇದನ್ನು ಮಕ್ಕಳಿಗೆ ಮಾತ್ರ ನೀಡಬೇಕು” – FSSAI

ಭಾರತದ ಅತ್ಯುನ್ನತ ಆಹಾರ ನಿಯಂತ್ರಣ ಪ್ರಾಧಿಕಾರವಾದ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಎದೆ ಹಾಲನ್ನು ಸಂಸ್ಕರಿಸಲು ಅಥವಾ ಮಾರಾಟ ಮಾಡಲು ಮಾನ್ಯತೆ ನೀಡಿರುವುದಿಲ್ಲೆವೆಂದು, ಅದಕ್ಕಾಗಿ ಪರವಾನಗಿಗಳನ್ನು ನೀಡುವುದನ್ನು ತಪ್ಪಿಸುವಂತೆ ರಾಜ್ಯ ಪರವಾನಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಕುರಿತು ಪ್ರಕಟಿಸಿರುವ ಹೇಳಿಕೆಯಲ್ಲಿ, “ಎದೆ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕಾಗಿ ವಿವಿಧ ನೋಂದಾಯಿತ ಸಂಘ ಸಂಸ್ಥೆಗಳಿಂದ ಹಲವು ಅನುಮೋದನೆ ನಮೂನೆಗಳನ್ನು ಸ್ವೀಕರಿಸಲಾಗಿದೆ.

ಸಾರ್ವಜನಿಕ ಆರೋಗ್ಯ ಹಾಲುಣಿಸುವ ಕೇಂದ್ರಗಳ (LMC) ಮಾರ್ಗಸೂಚಿಗಳ ಪ್ರಕಾರ, ದಾನಿಗಳ ಎದೆ ಹಾಲನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಇದನ್ನು ಮಕ್ಕಳಿಗೆ ಮಾತ್ರ ನೀಡಬೇಕು. ಕಳೆದ 10 ವರ್ಷಗಳಲ್ಲಿ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಂದ ಪಡೆದ ಮಾನವ ಎದೆ ಹಾಲನ್ನು ಮಾರಾಟ ಉದ್ದೇಶಗಳಿಗಾಗಿ ಪುಡಿ (Powder) ರೂಪದಲ್ಲಿ ಸಂಸ್ಕರಿಸಲು ಹಲವಾರು ಕಂಪನಿಗಳು ಹುಟ್ಟಿಕೊಂಡಿವೆ.

ಎದೆಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಲಹೆ ನೀಡಲಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ತಾಯಿಯ ಹಾಲನ್ನು ಬಳಸುವುದು ಕಾನೂನುಬಾಹಿರವಾಗಿದೆ. FSSAI, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ಮತ್ತು ಅದರ ಸಂಬಂಧಿತ ನಿಯಮಗಳ ಅಡಿಯಲ್ಲಿ ಯಾವುದೇ ಉಲ್ಲಂಘನೆಯು ದಂಡದ ಕ್ರಮಕ್ಕೆ ಕಾರಣವಾಗುತ್ತದೆ.

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ರಿಟಿಷ್ ಮೂಲದ ನಿಯೋಲಾಕ್ಟ (Neolacta) ಕಂಪನಿ, ಕೇಂದ್ರ ಆಯುಷ್ ಸಚಿವಾಲಯದಿಂದ ಪರವಾನಗಿ ಪಡೆದು ಎದೆಹಾಲಿನ ವಾಣಿಜ್ಯೀಕರಣದಲ್ಲಿ ತೊಡಗಿರುವುದು ಬಹಿರಂಗವಾಗಿದೆ. BPNI ನೀಡಿದ ದೂರಿನ ನಂತರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿದೆ. ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.