ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
International News Archives » Dynamic Leader
November 21, 2024
Home Posts tagged International News
ದೇಶ ವಿದೇಶ

ಕೊಲಂಬೊ: ಶ್ರೀಲಂಕಾದ ಸೇನಾ ವೈದ್ಯರ ತಂಡವೊಂದು, ವಿಶ್ವದ ಅತಿ ಭಾರವಾದ ಕಿಡ್ನಿ ಕಲ್ಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. 2004ರಲ್ಲಿ ಭಾರತೀಯ ವೈದ್ಯರು ಹೊರತೆಗೆದ ಮೂತ್ರಪಿಂಡದ ಕಲ್ಲೇ ಅತಿ ದೊಡ್ಡದೆಂಬ ದಾಖಲೆ ಆಗಿತ್ತು. ಇದೀಗ ಆ ದಾಖಲೆ ಮುರಿದಿದೆ.

ಈ ತಿಂಗಳ ಆರಂಭದಲ್ಲಿ ಕೊಲಂಬೊ ಮಿಲಿಟರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಂದ ತೆಗೆಯಲಾಗಿದ್ದ ಕಲ್ಲು, 13.372 ಸೆಂ.ಮೀ ಉದ್ದ ಮತ್ತು 801 ಗ್ರಾಂ ತೂಕವಿತ್ತು ಎಂದು ಸೇನೆ ತಿಳಿಸಿದೆ. ಗಿನ್ನೆಸ್ ವಿಶ್ವ ದಾಖಲೆಗಳ ಪಟ್ಟಿಯಲ್ಲಿ, ಇದುವರೆಗೆ ತೆಗೆದ ಕಲ್ಲುಗಳಲ್ಲಿ, 2004ರಲ್ಲಿ ಭಾರತದಲ್ಲಿ ತೆಗೆದ 13 ಸೆಂ.ಮೀ ಉದ್ದದ ಕಲ್ಲೇ ದೊಡ್ಡದಾಗಿತ್ತು. ಅದೇ ರೀತಿ, 2008ರಲ್ಲಿ ಪಾಕಿಸ್ತಾನದಲ್ಲಿ ತೆಗೆದ 620 ಗ್ರಾಂ ಕಲ್ಲನ್ನು ಅತ್ಯಂತ ಭಾರವಾದ ಕಲ್ಲು ಎಂದು ಪಟ್ಟಿ ಮಾಡಲಾಗಿದೆ.

ಶ್ರೀಲಂಕಾದ ಪ್ರಸ್ತುತ ದಾಖಲೆಯನ್ನು ದೃಢಪಡಿಸಿರುವ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ, ಶ್ರೀಲಂಕಾದ ಕ್ಯಾನಿಸ್ಟಸ್ ಕೂಂಗೆಯವರ ಮೂತ್ರಪಿಂಡದಿಂದ 13.372 ಸೆಂಟಿಮೀಟರ್ (5.264 ಇಂಚು) ಅಳತೆಯ ಮೂತ್ರಪಿಂಡದ ಕಲ್ಲನ್ನು ಕಳೆದ 1ರಂದು ಹೊರತೆಗೆಯಲಾಗಿದೆ ಎಂದು ವರದಿ ಮಾಡಿದೆ. ಸೇನಾ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುದರ್ಶನ್ ನೇತೃತ್ವದಲ್ಲಿ, ಡಾ.ಪತಿರತ್ನ ಹಾಗೂ ಡಾ.ತಮಶಾ ಪ್ರೇಮತಿಲಕ ಶಸ್ತ್ರ ಚಿಕಿತ್ಸೆ ನಡೆಸಿದ್ದರು.

SRI LANKAN ARMY DOCTORS REMOVE WORLD’S LARGEST KIDNEY STONE, SET WORLD RECORD
A group of Sri Lankan Army doctors have set a Guinness World Record by removing the world’s largest kidney stone, surpassing the previous record registered by Indian doctors in 2004. The stone, removed early this month at the Colombo Army Hospital, is 13.372 centimeters long and weighs 801 grams, a statement by the Army said on Tuesday.

ವಿದೇಶ

ಭಾರತ್ ಜೋಡೋ ಪಯಣ ಮುಗಿಸಿದರೂ ರಾಹುಲ್ ಪಯಣ ವಿಶ್ರಮಿಸಲಿಲ್ಲ. ಕೆಲವು ವಾರಗಳ ಹಿಂದೆ ಅವರು ದೆಹಲಿ-ಚಂಡೀಗಢದಲ್ಲಿ ರಾತ್ರಿ ಸರಕು ಟ್ರಕ್‌ನಲ್ಲಿ ಪ್ರಯಾಣಿಸಿ, ಚಾಲಕನ ಕಷ್ಟದ ಬಗ್ಗೆ ಕೇಳಿದ್ದರು. ಪ್ರಸ್ತುತ ಅವರು ಅಮೆರಿಕಾದ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.

ರಾಹುಲ್ ಗಾಂಧಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅದರ ಒಂದು ಭಾಗವಾಗಿ, ವಾಷಿಂಗ್ಟನ್‌ನಿಂದ ನ್ಯೂಯಾರ್ಕ್ ನಗರಕ್ಕೆ ‘ಅಮೆರಿಕನ್ ಟ್ರಕ್ ಯಾತ್ರಾ’ ಹೆಸರಿನಲ್ಲಿ 190 ಕಿಲೋ ಮೀಟರ್, ಭಾರತೀಯರೊಬ್ಬರು ಚಾಲಕಾರಾಗಿರುವ ಅತ್ಯಾಧುನಿಕ ಟ್ರಕ್‌ನಲ್ಲಿ ಪ್ರಯಾಣಿಸಿದ್ದಾರೆ.

“ಸಮುದಾಯದಲ್ಲಿನ ವೈವಿಧ್ಯಮಯ ಜನರ ಧ್ವನಿಗಳನ್ನು ಕೇಳುವ ಪ್ರಯಾಣವು ಅಮೆರಿಕಾದಲ್ಲೂ ಮುಂದುವರೆದಿದೆ. ಭಾರತದ ದೆಹಲಿಯಿಂದ ಚಂಡೀಗಢಕ್ಕೆ ಹೋದ ನನ್ನ ಟ್ರಕ್ ಪ್ರಯಾಣದಂತೆ, ಈ ಬಾರಿ ಅಮೆರಿಕಾದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್‌ಗಳ ದೈನಂದಿನ ಜೀವನವನ್ನು ನಾನು ತಿಳಿದುಕೊಂಡೆ.

ಅವರೊಂದಿಗಿನ ಸಂಭಾಷಣೆ ಹೃದಯಸ್ಪರ್ಶಿಯಾಗಿತ್ತು. ಚಾಲಕನ ಸೌಕರ್ಯಗಳಿಗೆ ಒತ್ತು ನೀಡುವ ವ್ಯವಸ್ಥೆ, ಅವರು ಗಳಿಸುವ ನ್ಯಾಯಯುತ ವೇತನವನ್ನು ನೋಡಿ ನನಗೆ ಸಂತೋಷವಾಯಿತು. ಭಾರತದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಟ್ರಕ್ ಚಾಲಕರು ಸಹ ಯೋಗ್ಯವಾದ ಜೀವನಕ್ಕೆ ಅರ್ಹರಾಗಿದ್ದಾರೆ. ಅವರನ್ನು ಮುಂದೆ ಕೊಂಡೊಯ್ಯುವ ಯೋಜನೆ, ನಮ್ಮ ಇಡೀ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕವಾದ ಶ್ರೇಣೀಕೃತ ಪರಿಣಾಮವನ್ನು ಬೀರುತ್ತದೆ” ಎಂದು ಹೇಳಿದ್ದಾರೆ.

ಟ್ರಕ್ ಚಾಲಕನೊಂದಿಗೆ ಮಾತನಾಡುತ್ತಲೇ ಸಾಗಿದ ರಾಹುಲ್ ಗಾಂಧಿಯೊಂದಿಗೆ ಮಾತನಾಡಿದ ಆ ಚಾಲಕ, “ಇಲ್ಲಿ ನನಗೆ ಮಾಸಿಕ ರೂ.6 ರಿಂದ 8 ಲಕ್ಷದವರೆಗೆ ವೇತನ ಸಿಗುತ್ತಿದೆ; ನಾನು ಸ್ವಂತವಾಗಿ ಟ್ರಕ್ ಹೊಂದಿದ್ದೇನೆ” ಎಂದು ಹೇಳಿದರು. “ಭಾರತದಲ್ಲಿ ಟ್ರಕ್ ಮಾಲೀಕರು ಬೇರೆಯವರಾಗಿರುತ್ತಾರೆ; ಚಾಲಕರೇ ಬೇರೆಯಾಗಿರುತ್ತಾರೆ. ಚಾಲಕರು ಅತೀ ಬಡವರಾಗಿರುತ್ತಾರೆ. ಅವರು ಆಸ್ತಿ ಇಲ್ಲದೆ ಸಾಲ ಪಡೆಯಲು ಸಾಧ್ಯವಿಲ್ಲ. ಅನೇಕ ಜನರು ಅಲ್ಲಿ ಆಸ್ತಿ ಹೊಂದಿರುವುದಿಲ್ಲ. ಹಾಗಾಗಿ ಅವರು ಚಾಲಕರಾಗಿ ಮುಂದುವರಿಯುತ್ತಾರೆ. ಭಾರತದಲ್ಲಿರುವಂತೆ ಆರ್‌ಟಿಒ ಕಿರುಕುಳ ಇಲ್ಲಿ ಇರುವುದಿಲ್ಲ” ಎಂದು ಹೇಳಿದರು. Rahul Gandhi takes truck ride from Washington to New York

ದೇಶ

27 ವರ್ಷಗಳ ನಂತರ ಮತ್ತೆ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯಲಿದೆ. ಮಿಸ್ ವರ್ಲ್ಡ್ ಎಂದು ಹೇಳುವ ವಿಶ್ವ ಸುಂದರಿ ಸ್ಪರ್ಧೆಯು ಎಂದಿನಂತೆ ಪ್ರತಿ ವರ್ಷವ ನಡೆಯುತ್ತದೆ. ಕೊನೆಯದಾಗಿ ವಿಶ್ವ ಸುಂದರಿ ಸ್ಪರ್ಧೆಯನ್ನು 1996ರಲ್ಲಿ ಕರ್ನಾಟಕದ ರಾಜದಾನಿ ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಹಿನ್ನಲೆಯಲ್ಲಿ, 2023ರ ವಿಶ್ವ ಸುಂದರಿಯನ್ನು ಆಯ್ಕೆ ಮಾಡುವ ಅಂತಿಮ ಸ್ಪರ್ಧೆ, ನವೆಂಬರ್‌ ತಿಂಗಳಲ್ಲಿ ನಮ್ಮ ದೇಶದಲ್ಲಿ ನಡೆಯಲಿದೆ.

ಇದು 71ನೇ ವಿಶ್ವ ಸುಂದರಿ ಸ್ಪರ್ಧೆ. ಈ ಬಗ್ಗೆ ಮಾತನಾಡಿದ ವಿಶ್ವ ಸುಂದರಿ ಸ್ಪರ್ಧೆಯ ಅಧ್ಯಕ್ಷೆ ಜೂಲಿಯಾ ಮೊರ್ಲಿ, “ವಿಶ್ವ ಸುಂದರಿ ಸ್ಪರ್ಧೆಯನ್ನು ಮತ್ತೆ ಭಾರತದಲ್ಲಿ ನಡೆಸಲಾಗುವುದು ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಒಂದು ತಿಂಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ 130 ದೇಶಗಳ ಸುಂದರಿಯರು ಭಾಗವಹಿಸಲಿದ್ದಾರೆ” ಎಂದರು.

ಪ್ರಸ್ತುತ ಯುರೋಪಿಯನ್ ದೇಶವಾದ ಪೋಲೆಂಡ್‌ನ ಕರೋಲಿನಾ ವಿಶ್ವ ಸುಂದರಿಯಾಗಿದ್ದಾರೆ. ಅವರು ಈಗ ಭಾರತಕ್ಕೆ ಬಂದಿದ್ದಾರೆ. ಅವರು ಮಾತನಾಡುತ್ತಾ, “ಭಾರತವು ವಿಶ್ವದ ಅತ್ಯುತ್ತಮ ಆತಿಥ್ಯ ಸಂಸ್ಕೃತಿಯನ್ನು ಹೊಂದಿದೆ ದೇಷವಾಗಿದೆ. ಇದು ನನ್ನ ತಾಯಿ ಮನೆ ಅನ್ನಿಸುತ್ತದೆ. ಇಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿರುವುದು ಸಂತಸ ತಂದಿದೆ” ಎಂದು ಹೇಳಿದ್ದಾರೆ. Miss World Organization on June 8 announced that India will host the highly anticipated 71st Miss World 2023 pageant after a gap of nearly three decades.

ವಿದೇಶ

ಪ್ಯೊಂಗ್ಯಾಂಗ್: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತರ ಕೊರಿಯಾದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಶೇ.40 ರಷ್ಟು ಹೆಚ್ಚಾಗಿರುವ ಕಾರಣ, ಅಲ್ಲಿ ಆತ್ಮಹತ್ಯೆಯನ್ನು ನಿಷೇಧಿಸಿ ಅಧ್ಯಕ್ಷ ಕಿಮ್ ಜಾಂಗ್ ಉನ್ ರಹಸ್ಯ ಆದೇಶ ನೀಡಿದ್ದಾರೆ. ಆತ್ಮಹತ್ಯೆ ಎಂದರೆ ಒಬ್ಬರು ಸ್ವಯಂಪ್ರೇರಿತವಾಗಿ ಮಾಡಿಕೊಳ್ಳುವ ಕೊಲೆಯಾಗಿದೆ. ದ್ವೇಷ, ಕೋಪ, ಒತ್ತಡ, ಭಯ, ಬಡತನ ಮುಂತಾದ ಹಲವು ಕಾರಣಗಳಿಂದ ಆತ್ಮಹತ್ಯೆ ನಡೆಯುತ್ತದೆ. ಇದನ್ನು ಅಪರಾಧವೆಂದು ಪರಿಗಣಿಸಲಾಗಿದ್ದರೂ, ಆ ಆಲೋಚನೆಯಿಂದ ಚೇತರಿಸಿಕೊಳ್ಳಲು ಹಲವು ಮಾರ್ಗಗಳಿವೆ.

ಈ ಸ್ಥಿತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತರ ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಶೇ.40ರಷ್ಟು ಹೆಚ್ಚಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಆ ದೇಶದ ಅಧ್ಯಕ್ಷ ಕಿಮ್ ಜಾಂಗ್ ಉನ್ ದೇಶದಲ್ಲಿ ಆತ್ಮಹತ್ಯೆ ನಿಷೇಧಿಸಿ ರಹಸ್ಯ ಆದೇಶವನ್ನು ಹೊರಡಿಸಿದ್ದಾರೆ. ಮತ್ತು ಇದನ್ನು ‘ಆತ್ಮಹತ್ಯೆ ಸಮಾಜವಾದದ ವಿರುದ್ದ ದೇಶದ್ರೋಹ’ ಎಂದು ಲೇಬಲ್ ಮಾಡಲಾಗಿದೆ. ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಿಮ್ ಸ್ಥಳೀಯ ಸರ್ಕಾರಗಳಿಗೆ ಆದೇಶ ನೀಡಿದ್ದಾರೆ ಎಂದು ರೇಡಿಯೊ ಫ್ರೀ ಏಷ್ಯಾದ ವರದಿ ಹೇಳಿದೆ.

North Korea’s Kim Jong Un passes ‘secret order’ banning suicide:
North Korean leader Kim Jong-un has reportedly passed a secret order to ban suicide in the country, labelling it as a “treason against socialism”. A report by Radio Free Asia claimed that Kim has ordered local governments to take preventative measures.

ವಿದೇಶ

ಇಟಲಿ ಸಂಸತ್ತಿನಲ್ಲಿ ಮಹಿಳಾ ಸಂಸದೆಯೊಬ್ಬರು ಅಳುತ್ತಿದ್ದ 2 ತಿಂಗಳ ಮಗುವಿಗೆ ಹಾಲುಣಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಟಲಿ ಸಂಸತ್ತು ಇತ್ತೀಚೆಗೆ ಮಹಿಳಾ ಸಂಸದರು ತಮ್ಮ ಮಕ್ಕಳನ್ನು ಸಂಸತ್ತಿಗೆ ಕರೆತರಲು ಮತ್ತು ಒಂದು ವರ್ಷದವರೆಗೆ ತಮ್ಮ ಶಿಶುಗಳಿಗೆ ಹಾಲುಣಿಸಲು ಅನುಮತಿಸುವ ನಿಯಮಗಳಿಗೆ ತಿದ್ದುಪಡಿ ತಂದು ಜಾರಿಗೊಳಿಸಿತು. ಇಟಲಿ ಸಂಸತ್ತಿನ ಸದಸ್ಯೆಯಾಗಿರುವ 36 ವರ್ಷದ ಗಿಲ್ಡಾ ಸ್ಪೋರ್ಟಿಯೆಲ್ಲೊ ತನ್ನ 2 ತಿಂಗಳ ಗಂಡು ಮಗುವಿನೊಂದಿಗೆ ಸಂಸತ್ತಿಗೆ ಬಂದಿದ್ದರು. ನಂತರ ಮಗು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿತು.

ಇದನ್ನು ಕೇಳಿ ಸಂಸತ್ತು ಮೌನವಾಯಿತು. ಮಗು ಹಸಿವಿನಿಂದ ಅಳುತ್ತಿದೆ ಎಂದು ತಿಳಿದ ಗಿಲ್ಡಾ ಸ್ಪೋರ್ಟಿಯೆಲ್ಲೊ ಮಗುವನ್ನು ಶಾಂತಗೊಳಿಸಿ ಹಾಲುಣಿಸಲು ಆರಂಭಿಸಿದಳು. ಆಗ ಸಭೆಯ ಎಲ್ಲಾ ಸದಸ್ಯರು ಚಪ್ಪಾಳೆ ತಟ್ಟಿ ಹಾರೈಸಿದರು. ಇದರೊಂದಿಗೆ ಇಟಲಿ ಸಂಸತ್ತಿನಲ್ಲಿ ಮಗುವಿಗೆ ಹಾಲುಣಿಸಿದ ಮೊದಲ ಮಹಿಳಾ ಸಂಸದೆ ಎಂಬ ಗೌರವಕ್ಕೆ ಪಾತ್ರರಾದರು. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Gilda Sportiello becomes first Italian MP to breastfeed baby in Parliament.

ವಿದೇಶ

ದುಬೈ: ಇರಾನ್‌ನ ಪರಮಾಣು ಕಾರ್ಯಕ್ರಮದಿಂದಾಗಿ, ಅಮೆರಿಕ ಮತ್ತು ಆ ದೇಶದ ನಡುವೆ, ಈಗಾಗಲೇ ಸಂಘರ್ಷ ನಡೆಯುತ್ತಿರುವ ಹಿನ್ನಲೆಯಲ್ಲಿ, ಶಬ್ದದ ವೇಗಕ್ಕಿಂತ 15 ಪಟ್ಟು ಹೆಚ್ಚು ಚಲಿಸುವ ಸಾಮರ್ಥ್ಯ ಹೊಂದಿದ ಹೈಪರ್ಸಾನಿಕ್ ಕ್ಷಿಪಣಿಯನ್ನು ಇರಾನ್ ಅಭಿವೃದ್ಧಿಪಡಿಸಿದೆ ಎಂಬ ಘೋಷಣೆಯು ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಹೈಪರ್ಸಾನಿಕ್ ಕ್ಷಿಪಣಿ

ಪಶ್ಚಿಮ ಏಷ್ಯಾ ರಾಷ್ಟ್ರವಾದ ಇರಾನ್ ಮತ್ತು ಅಮೆರಿಕ ನಡುವೆ, ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಉದ್ವಿಗ್ನತೆಗಳು ಬಹಳ ಹಿಂದಿನಿಂದಲೂ ನಡೆಯುತ್ತಿವೆ. ಈ ಹಿನ್ನಲೆಯಲ್ಲಿ, ವಾಯು ರಕ್ಷಣೆಯನ್ನು ಬಲಪಡಿಸುವ ದೃಷ್ಟಿಯಿಂದ, ಶಬ್ದಕ್ಕಿಂತ 15 ಪಟ್ಟು ಹೆಚ್ಚು ವೇಗವಾಗಿ ಚಲಿಸುವ ಹೈಪರ್ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಇರಾನ್ ನಿನ್ನೆ ಘೋಷಿಸಿದೆ.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ

ಈ ಬಗ್ಗೆ ಹೇಳಿರುವ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, “ನಾವು ದೊಡ್ಡ ಪ್ರತಿಬಂಧಕವನ್ನು ರಚಿಸಿದ್ದೇವೆ ಎಂದು ಭಾವಿಸುತ್ತೇವೆ. ಇದು ಪ್ರಾದೇಶಿಕ ದೇಶಗಳ ಶಾಶ್ವತ ಭದ್ರತೆ ಮತ್ತು ಶಾಂತಿಗೆ ಆಧಾರವಾಗಲಿದೆ” ಎಂದರು. ಇರಾನ್‌ನ ಅರೆಸೇನಾ ಪಡೆಯ ಬಾಹ್ಯಾಕಾಶ ಯೋಜನೆಯ ಮುಖ್ಯಸ್ಥ ಜನರಲ್ ಅಮೀರ್ ಅಲಿ ಹಾಜಿಜಾದೆ ಅವರು ನಿನ್ನೆ ಹೈಪರ್ಸಾನಿಕ್ ಕ್ಷಿಪಣಿಯ ಮಾದರಿಯನ್ನು ಅನಾವರಣಗೊಳಿಸಿದರು.

ಜನರಲ್ ಅಮೀರ್ ಅಲಿ ಹಾಜಿಜಾದೆ

ಈ ಕುರಿತು ಮಾತನಾಡಿದ ಅವರು, “ಈ ಕ್ಷಿಪಣಿಯು 1,400 ಕಿ.ಮೀ. ವರೆಗೆ ಹೋಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಕ್ಷಿಪಣಿಯೊಂದಿಗೆ ಸ್ಪರ್ಧಿಸುವ ಅಥವಾ ಎದುರಿಸುವ ಯಾವುದೇ ವ್ಯವಸ್ಥೆ ಇಲ್ಲ” ಎಂದರು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಪಶ್ಚಿಮ ಏಷ್ಯಾದ ಸೌದಿ ಅರೇಬಿಯಾಕ್ಕೆ ಹೋಗಲಿರುವ ಹಿನ್ನಲೆಯಲ್ಲಿ, ಕ್ಷಿಪಣಿ ಕುರಿತು ಇರಾನ್ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್

ಏತನ್ಮಧ್ಯೆ, ಸೌದಿ ಅರೇಬಿಯಾದಲ್ಲಿ, ಏಳು ವರ್ಷಗಳ ನಂತರ, ನಿನ್ನೆ ಇರಾನ್ ತನ್ನ ರಾಯಭಾರ ಕಚೇರಿಯನ್ನು ತೆರೆದಿರುವುದು ಗಮನಾರ್ಹ.