ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
KJ George Archives » Dynamic Leader
October 23, 2024
Home Posts tagged KJ George
ರಾಜ್ಯ

ಬೆಂಗಳೂರು: ಕರ್ನಾಟಕ ಪ್ರಾಂತೀಯ ಕಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ ಅಧ್ಯಕ್ಷರಾದ ಡಾ.ಪೀಟರ್ ಮಚಾಡೊ ಅವರ ನೇತೃತ್ವದ ಧರ್ಮಾಧ್ಯಕ್ಷರ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನಂದಿಸಿ, ಕೆಲವು ಶೈಕ್ಷಣಿಕ ಮತ್ತು ಸಾಮಾಜಿಕ ಬೇಡಿಕೆಗಳನ್ನು ಮುಂದಿಟ್ಟರು. ಈ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್ ಉಪಸ್ಥಿತರಿದ್ದರು.

ನಿಯೋಗದಲ್ಲಿ ಧರ್ಮಾಧ್ಯಕ್ಷರುಗಳಾದ ಡಾ.ಚಿರಾಲ್ಡ್ ಐಸಾಕ್ ಲೋಬೋ, ಡಾ.ಗೀವರ್ಗೀಸ್ ಮಕಾರಿಯೋಸ್, ಡಾ.ಪೀಟರ್ ಪೌಲ್ ಸಲ್ಡಾನಾ, ಡಾ.ಡೆರಿಕ್ ಫೆರ್ನಾಂಡೀಸ್, ಡಾ.ರಾಬರ್ಟ್ ಮಿರಾಂಡ, ಡಾ.ಫ್ರಾನ್ಸಿಸ್ ಸೆರಾವೋ, ಡಾ.ಜೋಸೆಫ್ ಅರುಮಚಡತ್, ಡಾ.ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು ಹಾಜರಿದ್ದರು.

ರಾಜಕೀಯ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಇದುವರೆಗೂ ರಾಜ್ಯದ 1 ಕೋಟಿಗೂ ಅಧಿಕ ಕುಟುಂಬಗಳು ಅರ್ಜಿ ಸಲ್ಲಿಸಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಗೆ ರಾಜ್ಯದ 1 ಕೋಟಿಗೂ ಅಧಿಕ ಕುಟುಂಬಗಳು ಯಶಸ್ವಿಯಾಗಿ ಅರ್ಜಿ ಸಲ್ಲಿಸಿವೆ. ಕನಿಷ್ಠ ನಿಬಂಧನೆಗಳು ಮತ್ತು ಸರಳ ಅರ್ಜಿ ಪ್ರಕ್ರಿಯೆಯ ಮೂಲಕ ಎಲ್ಲಾ ಅರ್ಹ ಕುಟುಂಬಗಳಿಗೆ ಯೋಜನೆಯನ್ನು ತಲುಪಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ.

ಯೋಜನೆಯ ವ್ಯಾಪ್ತಿಗೆ ಒಳಪಡುವವರು ತಪ್ಪದೇ ಅರ್ಜಿ ಸಲ್ಲಿಸಿ, ಇತರರಿಗೂ ಅರ್ಜಿ ಸಲ್ಲಿಸಲು ನೆರವಾಗಿ. ಬೆಲೆಯೇರಿಕೆಯಿಂದ ಸಂಕಷ್ಟದಲ್ಲಿರುವ ಜನರ ಬದುಕಲ್ಲಿ ನೆಮ್ಮದಿಯ ಬೆಳಕು ಮೂಡಲಿ” ಎಂದು ಹೇಳಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಇದು ದೇಶಕ್ಕೆ ಮಾದರಿ ಮಾತ್ರವಲ್ಲ ಪ್ರಜಾಸತ್ತಾತ್ಮಕ ಕ್ರಾಂತಿಯೂ ಹೌದು. ದುಡಿಯುವ ಮಹಿಳೆಗೆ ಅದರಲ್ಲೂ ಅಸಂಘಟಿತ ಮಹಿಳಾ ಉದ್ಯೋಗಿಗಳಿಗೆ ಸಿಕ್ಕಿದ ಅಂಗೀಕಾರ; ಇದು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ; ಸರ್ಕಾರ ಮಹಿಳೆಯರಿಗೆ ನೀಡುವ ಗೌರವ; ಸರ್ಕಾರವೇ ನಿಮಗೆ ನನ್ನ ವಂದನೆಗಳು.

ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯೇ ಅತ್ಯಂತ ಮಹತ್ವವಾದದ್ದು. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಘೋಷಣೆ ಮತ್ತು ಅದಕ್ಕೆ ನೀಡಿದ ಚಾಲನೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪರ ಹೊಸ ಅಲೆ ಶುರುವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಮತ ಚಲಾಯಿಸಿದ ಕೋಟ್ಯಾಂತರ ಕಾರ್ಯಕರ್ತರು ಕೂಡ ಶಕ್ತಿ ಯೋಜನೆಯ ಫಲಾನುಭವಿಯಾಗಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಹೊಗಳುವಂತೆ ಆಗಿದೆ.

ಲಕ್ಷಾಂತರ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಈ ಯೋಜನೆ ವರದಾನವಾಗಿ ಪರಿಣಮಿಸಿದೆ. ನಗರ ಪ್ರದೇಶಗಳಲ್ಲಿ ಮನೆ ಕೆಲಸ, ಹೌಸ್ ಕೀಪಿಂಗ್ ಮತ್ತು ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ದಿನಗೂಲಿ ಕೆಲಸ ಮಾಡುವ ಅದೆಷ್ಟೋ ಮಹಿಳೆಯರು, ಮಾಸಿಕ ಬಸ್ ಪಾಸ್ ಮಾಡಲು ಆಗದ ಪರಿಸ್ಥಿತಿಯನ್ನು ಇಂದಿಗೂ ಎದುರಿಸುತ್ತಿದ್ದಾರೆ. ದಿನನಿತ್ಯದ ಬಸ್ ಪ್ರಯಾಣಕ್ಕೆ ಹಣವಿಲ್ಲದೇ ಒದ್ದಾಡುವ ಮಹಿಳೆಯರನ್ನು ಮತ್ತು ಶಾಲಾ ಮಕ್ಕಳನ್ನು ಸ್ಲಂ ಪ್ರದೇಶಗಳಲ್ಲಿ ಇಂದಿಗೂ ಕಾಣಬಹುದು.

ವಿರೋಧ ಪಕ್ಷದ ಬಿಜೆಪಿ ನಾಯಕರು ‘ಉಚಿತ ಬಸ್ ಪ್ರಯಾಣ ಇರಲಿ; ಮೊದಲು ಬಸ್ ಬಿಡಿ’ ಎಂದು ವ್ಯಂಗ್ಯವಾಡುತ್ತಿದ್ದಾರೆ. ‘ಚಲಾಯಿಸಲು ಬಸ್‌ಗಳೇ ಇಲ್ಲ. ಇದರಲ್ಲಿ ಉಚಿತ ಪ್ರಯಾಣ ಮಾಡುವುದು ಎಲ್ಲಿಂದ’ ಎಂಬುದು ಅವರ ವಾದವಾಗಿದೆ. ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ನೀವು, ಈ ನಾಲ್ಕು ವರ್ಷಗಳಿಂದ ಸಾರಿಗೆ ಇಲಾಖೆಯನ್ನು ಯಾವ ಮಟ್ಟಕ್ಕೆ ಇಳಿಸಿದ್ದಿರಿ ಎಂಬುದಕ್ಕೆ ನೀವೇ ಸಾಕ್ಷಿ.

ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ಕೊಡದೆ; ಸಾರಿಗೆ ನೌಕರರ ಪ್ರತಿಭಟನೆಗಳನ್ನು ಹತ್ತಿಕ್ಕಿ; ಸಾರಿಗೆ ಮಹಿಳಾ ನಿರ್ವಾಹಕರನ್ನು ಬೀದಿಗಿಳಿದು ಹೋರಾಡುವಂತೆ ಮಾಡಿ, ಅವರನ್ನು ಗೋಳಾಡಿಸಿದ ನಿಮ್ಮನ್ನು ಜನ ಯಾಕೆ ತಿರಸ್ಕರಿಸಿದ್ದಾರೆ ಎಂಬುದನ್ನು ಪರಾಮರ್ಶೆ ಮಾಡಿಕೊಂಡು, ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದರೆ, 2024ರ ಸಂಸತ್ ಚುನಾವಣೆಯಲ್ಲಿ ಅನುಕೂಲವಾಗುತ್ತದೆ.

ಕಾಂಗ್ರೆಸ್ ಪಕ್ಷವು ದೇಶದಲ್ಲಿ ಕಳೆದುಕೊಂಡಿದ್ದ ವರ್ಚಸ್ಸನ್ನು ಮರಳಿ ಪಡೆಯುವುದಕ್ಕಾಗಿ ಮತ್ತು 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಬಗ್ಗುಬಡಿಯಲಿಕ್ಕಾಗಿ ಕಾಂಗ್ರೆಸ್ ಸರ್ಕಾರ ಈ ಎಲ್ಲಾ 5 ಗ್ಯಾರಂಟಿಗಳನ್ನು ಜಾರಿ ಮಾಡಿಯೇ ತೀರುತ್ತದೆ. ಅದುಮಾತ್ರವಲ್ಲ, ಈ ಯಶಸ್ಸು ಕಾರ್ಯಕ್ರಮಗಳನ್ನು ಈ ವರ್ಷ ಅಂತ್ಯದಲ್ಲಿ ನಡೆಯಲಿರುವ 4 ವಿಧಾನಸಭಾ ಚುನಾವಣೆಗಳಲ್ಲೂ ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಪಕ್ಷ ಮುಂದಾಗಿದೆ.

ಬಿಜೆಪಿ ರಾಷ್ಟ್ರಮಟ್ಟದಲ್ಲಿ ಬದಲಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ರಾಷ್ಟ್ರಮಟ್ಟದ ಬಿಜೆಪಿ ನಾಯಕರಿಗೆ 2024ರ ಚುನಾವಣೆಯಲ್ಲಿ ಪಕ್ಷವನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರಬೇಂಬ ಪೀಕಲಾಟ. ತಿಂಗಳು ಕಳೆದರು ಇನ್ನು ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಯಾರು ಎಂಬುದನ್ನು ಹೇಳಲು ಅವರಿಗೆ ಸಾದ್ಯವಾಗುತಿಲ್ಲ. ವರಿಷ್ಟರನ್ನು ಭೇಟಿಯಾಗಿ ಇದರ ಬಗ್ಗೆ ಚರ್ಚಿಸುವ ಧೈರ್ಯವೂ ಇಲ್ಲಿನ ನಾಯಕರಿಗೆ ಇಲ್ಲ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಸದನದಲ್ಲಿ ಎದುರಿಸುವ ಸಮರ್ಥ ನಾಯಕರ ಕೊರತೆಯೂ ಬಿಜೆಪಿಯಲ್ಲಿ ಎದ್ದು ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳನ್ನು ವ್ಯಂಗ್ಯ ಮಾಡಿಕೊಂಡು ಓಡಾಡುತ್ತಿದ್ದರೆ, ಕಳೆದ ವಿಧಾನಸಭಾ ಚುನವಣೆಯ ಫಲಿತಾಂಶವೇ 2024ರ ಸಂಸತ್ ಚುನಾವಣೆಯಲ್ಲಿ ಮರುಕಳಿಸುತ್ತದೆ ಎಂಬುದು ಗ್ಯಾರಂಟಿ!