ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
NCRB Report Archives » Dynamic Leader
December 4, 2024
Home Posts tagged NCRB Report
ದೇಶ

ಪ್ರಧಾನಿ, ಗೃಹ ಸಚಿವರ ತವರು ರಾಜ್ಯ ಗುಜರಾತ್‌ನಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ಮಾಡಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ ಅಂಶಗಳ ಪ್ರಕಾರ, 2016ರಲ್ಲಿ 7,105, 2017ರಲ್ಲಿ 7,712, 2018ರಲ್ಲಿ 9,246, 2019ರಲ್ಲಿ 9,268 ಮತ್ತು 2020ರಲ್ಲಿ 8,290 ಮಹಿಳೆಯರು ನಾಪತ್ತೆಯಾಗಿದ್ದಾರೆ. ಒಟ್ಟು ಸಂಖ್ಯೆ 41,621. ಆಗಿರುತ್ತದೆ. 2021ರಲ್ಲಿ ರಾಜ್ಯ ಸರ್ಕಾರ ವಿಧಾನ ಸಭೆಯಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಒಂದು ವರ್ಷದಲ್ಲಿ (2019-20) ಅಹಮದಾಬಾದ್ ಮತ್ತು ವಡೋದರಾದಲ್ಲಿ 4,722 ಮಹಿಳೆಯರು ನಾಪತ್ತೆಯಾಗಿದ್ದಾರೆ.

“ಕೆಲವು ನಾಪತ್ತೆ ಪ್ರಕರಣಗಳಲ್ಲಿ, ಹುಡುಗಿಯರು ಮತ್ತು ಮಹಿಳೆಯರನ್ನು ಆಗಾಗೆ ಗುಜರಾತ್ ಹೊರತುಪಡಿಸಿ ಇತರ ರಾಜ್ಯಗಳಿಗೆ ಕಳುಹಿಸಲಾಗುತ್ತದೆ ಮತ್ತು ವೇಶ್ಯಾವಾಟಿಕೆಗೆ ಬಲವಂತಪಡಿಸುವುದನ್ನು ನಾನು ಗಮನಿಸಿದ್ದೇನೆ. ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ಪೊಲೀಸ್ ಇಲಾಖೆಯ ವೈಫಲ್ಯವಾಗಿದೆ. ಇಂತಹ ಪ್ರಕರಣಗಳು ಕೊಲೆಗಿಂತ ಗಂಭೀರವಾದದ್ದು” ಎಂದು ಮಾಜಿ ಐಪಿಎಸ್ ಅಧಿಕಾರಿ ಮತ್ತು ಗುಜರಾತ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುಧೀರ್ ಸಿನ್ಹಾ ಹೇಳಿದ್ದಾರೆ.

“ಮಗು ಕಾಣೆಯಾದಾಗ ಪೋಷಕರು ತಮ್ಮ ಮಗುವಿಗಾಗಿ ವರ್ಷಗಟ್ಟಲೆ ಕಾದಿರುತ್ತಾರೆ. ಆದ್ದರಿಂದ ಕೊಲೆ ಪ್ರಕರಣದಂತೆ ಈ ಪ್ರಕರಣವನ್ನೂ ಕಟ್ಟುನಿಟ್ಟಾಗಿ ತನಿಖೆ ನಡೆಸಬೇಕು” ಎಂದು ಹೇಳಿದ ಅವರು, ‘ಕಾಣೆಯಾದವರ ಪ್ರಕರಣಗಳನ್ನು ಪೊಲೀಸರು ಬ್ರಿಟಿಷರ ಶೈಲಿಯಲ್ಲಿ ತನಿಖೆ ನಡೆಸುವುದರಿಂದಲೇ ಅವುಗಳನ್ನು ನಿರ್ಲಕ್ಷಿಸಲಾಗುತ್ತಿದೆ” ಎಂದರು.

ಮಾಜಿ ಹೆಚ್ಚುವರಿ ಪೊಲೀಸ್ ನಿರ್ದೇಶಕ ಡಾ.ರಾಜನ್ ಪ್ರಿಯದರ್ಶಿಯವರು, “ಹೆಣ್ಣು ಮಕ್ಕಳ ನಾಪತ್ತೆಗೆ ಮಾನವ ಕಳ್ಳಸಾಗಾಣಿಕೆಯೇ ಕಾರಣವಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಮಹಿಳೆಯರು ಕಾಣೆಯಾದ ಪ್ರಕರಣಗಳಲ್ಲಿ ಹೆಚ್ಚಿನವು ಕಾನೂನು ವಿರುದ್ಧವಾಗಿ, ಮಾನವ ಕಳ್ಳಸಾಗಣೆ ಗ್ಯಾಂಗ್‌ಗಳಿಂದ ಅಪಹರಿಸಿ, ಬೇರೆ ರಾಜ್ಯಗಳಿಗೆ ಸಾಗಿಸಿ ಮಾರಾಟ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ.

ನಾನು ಖೇಡಾ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಆಗಿದ್ದಾಗ, ಆ ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ, ಬಡ ಹುಡುಗಿಯೊಬ್ಬಳನ್ನು ಅಪಹರಿಸಿ ತನ್ನ ತವರು ರಾಜ್ಯದಲ್ಲಿ ಮಾರಾಟ ಮಾಡಿ ಅಲ್ಲಿ ಆಕೆಗೆ ಉದ್ಯೋಗವನ್ನು ಕೊಡಿಸಿದ್ದ. ನಾವು ಅವಳನ್ನು ಉಳಿಸಿದ್ದೇವೆ, ಆದರೆ ಅನೇಕ ಬಾರಿ ಇದು ಸಂಭವಿಸುವುದಿಲ್ಲ” ಎಂದು ಅವರು ಹೇಳಿದರು.

ಗುಜರಾತ್ ಕಾಂಗ್ರೆಸ್ ವಕ್ತಾರ ಹಿರೇನ್ ಬ್ಯಾಂಕರ್, “ಬಿಜೆಪಿ ನಾಯಕರು ಕೇರಳದಲ್ಲಿ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ, ಆದರೆ ದೇಶದ ಪ್ರಧಾನಿ ಮತ್ತು ಗೃಹ ಸಚಿವರ ತವರು ರಾಜ್ಯವಾದ ಗುಜರಾತ್‌ನಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ” ಎಂದು ಅವರು ಹೇಳಿದ್ದಾರೆ. Over 40k women have gone missing in Gujarat in five years, says NCRB data