ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
P.Chidambaram Archives » Dynamic Leader
October 23, 2024
Home Posts tagged P.Chidambaram
ದೇಶ

ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದೆ. ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪು ಚುನಾವಣೆಯಲ್ಲಿ ಪಾರದರ್ಶಕತೆ, ಮಾಹಿತಿ ಹಕ್ಕು ಮತ್ತು ಸಮಾನತೆ ಮುಂತಾದವುಗಳಿಗೆ ಸಿಕ್ಕಿದ ಜಯವಾಗಿದೆ.

ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವ ಚುನಾವಣಾ ಬಾಂಡ್ ಯೋಜನೆ ಅಸಿಂಧು ಎಂದು ಸುಪ್ರೀಂ ಕೋರ್ಟ್ ನಿನ್ನೆ ತೀರ್ಪು ನೀಡಿದೆ. ದೇಣಿಗೆಗಳ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡುವಂತೆಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ.

ಹೀಗಾಗಿ ಕಾರ್ಪೊರೇಟ್ ಕಂಪನಿಗಳು ಮತ್ತು ದೊಡ್ಡ ಉದ್ಯಮಿಗಳಿಂದ ಪ್ರತಿ ಪಕ್ಷಗಳು ಎಷ್ಟು ಹಣ ಪಡೆದಿವೆ ಎಂಬ ವಿವರವನ್ನು ಮಾರ್ಚ್ 31 ರೊಳಗೆ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ.

ಈ ಹಿನ್ನಲೆಯಲ್ಲಿ, ಸುಪ್ರೀಂ ಕೋರ್ಟ್ನ ಈ ತೀರ್ಪನ್ನು ಮಾಜಿ ಹಣಕಾಸು ಸಚಿವ ಹಾಗೂ ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಸ್ವಾಗತಿಸಿದ್ದಾರೆ. ಮತ್ತು ಈ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದಾರೆ.

‘ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದೆ. ಮತ್ತು  ಸುಪ್ರೀಂ ಕೋರ್ಟ್‌ನ ತೀರ್ಪು ಚುನಾವಣೆಯಲ್ಲಿ ಪಾರದರ್ಶಕತೆ, ಮಾಹಿತಿ ಹಕ್ಕು ಮತ್ತು ಸಮಾನತೆ ಮುಂತಾದವುಗಳಿಗೆ ಸಿಕ್ಕಿದ ಜಯವಾಗಿದೆ’ ಎಂದು ಹೇಳಿದ್ದಾರೆ.

‘ಪ್ರಸ್ತುತ ದೊಡ್ಡ ಕಾರ್ಪೊರೇಟ್‌ಗಳಿಂದ ಮತ್ತು ದೊಡ್ಡ ದೊಡ್ಡ ಬಂಡವಾಳಶಾಹಿಗಳಿಂದ ಬಿಜೆಪಿ ಪಡೆದ ದೇಣಿಗೆಯಲ್ಲಿ ಶೇಕಡಾ 90ರಷ್ಟು ಬಹಿರಂಗಗೊಳ್ಳಲಿದೆ.

ಹಣ ಕೊಟ್ಟವರು ಯಾರು? ಅವರು ಹಣ ಪಾವತಿಸಿದಾಗ, ಅದಕ್ಕೆ ಪ್ರತಿಯಾಗಿ ಪಕ್ಷ ಅವರಿಗೆ ನೀಡಿದ್ದು ಏನು? ಎಂಬುದನ್ನು ಜಗತ್ತೇ ತಿಳಿಯಲಿದೆ. ರಾಜಕೀಯ ಪಕ್ಷಗಳಿಗೆ ಹಣ ಏಕೆ ಕೊಡಲಾಯಿತು ಎಂದು ಜನ ಪ್ರಶ್ನಿಸುತ್ತಾರೆ. ಆಗ ಜನರು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ’ ಎಂದು ಚಿದಂಬರಂ ಹೇಳಿದ್ದಾರೆ.  

ದೇಶ

ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯದಿಂದಾಗಿ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಪಿ.ಚಿದಂಬರಂ ಹೇಳಿದ್ದಾರೆ.

ಮಣಿಪುರದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಕಳೆದ 2 ತಿಂಗಳಿಂದ ಸಂಘರ್ಷ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ, ಇತ್ತೀಚೆಗೆ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಅತ್ಯಾಚಾರ ನಡೆಸಿದ ವಿಡಿಯೋವೊಂದು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮಣಿಪುರದ ಪರಿಸ್ಥಿತಿಯನ್ನು ಖಂಡಿಸಿದೆ. ಪ್ರಧಾನಿ ವಿವರಣೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್ತಿನ ಕಲಾಪವನ್ನು ಸ್ಥಗಿತಗೊಳಿಸಿವೆ.

ಈ ಹಿನ್ನಲೆಯಲ್ಲಿ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಪಿ.ಚಿದಂಬರಂ ಹೇಳಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, ಮಣಿಪುರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನ ಆರೋಪಗಳು ದೆಹಲಿಯ PMO (ಪ್ರಧಾನಿ ಕಚೇರಿ) ಮತ್ತು ಇಂಫಾಲ್‌ನಲ್ಲಿರುವ CMO (ಮುಖ್ಯಮಂತ್ರಿ ಕಚೇರಿ) ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಇದನ್ನೂ ಓದಿ: ಆ್ಯಂಟಿ ಕಮ್ಯುನಲ್ ವಿಂಗ್‌ಗೆ ಶಕ್ತಿ ತುಂಬಿ ಸಕ್ರಿಯಗೊಳಿಸಿ; ಕರ್ನಾಟಕ ಮುಸ್ಲಿಮ್ ಯೂನಿಟಿಯ ಖಾಸಿಂ ಸಾಬ್ ಆಗ್ರಹ!

ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರಿಗೆ ಸಾಂವಿಧಾನಿಕ ತತ್ವಗಳ ಬಗ್ಗೆ ತಿಳುವಳಿಕೆ ಇದ್ದರೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ರಾಜಧರ್ಮವನ್ನು ಪಾಲಿಸುವವರು ಮಾತ್ರ  ಅದನ್ನು ಬೋಧಿಸಲು ಸಾಧ್ಯ. ಅವಮಾನಕ್ಕೊಳಗಾದ ಮಹಿಳೆಯರ ಬಳಿ “ಕೀ ಇಲ್ಲ” ಎಂದು ಹೇಳಿದ ಪೊಲೀಸ್ ಜೀಪ್ ಡ್ರೈವರ್ ನಂತಾಗಿದೆ ಕೇಂದ್ರ ಸರ್ಕಾರ!

ಕೇಂದ್ರ ಸರ್ಕಾರವು ಸಾಂವಿಧಾನಿಕ ಜವಾಬ್ದಾರಿಯ ಯಂತ್ರವನ್ನು ಆಫ್ ಮಾಡಿ ಕೀಲಿಯನ್ನು ಎಸೆದಿದೆ (ಲೇಖನ 355 ಮತ್ತು 356) ಎಂದು ಪಿ.ಚಿದಂಬರಂ ಪೋಸ್ಟ್ ಮಾಡಿದ್ದಾರೆ.

ದೇಶ ರಾಜಕೀಯ ವಿದೇಶ

ಭಾರತದ ಪ್ರಜಾಪ್ರಭುತ್ವವು ಭಾಗಶಃ ಸ್ವತಂತ್ರವಾಗಿದೆ ಎಂದು ಅಮೆರಿಕದ ಫ್ರೀಡಂ ಹೌಸ್ ಎಂಬ ಪ್ರಜಾಪ್ರಭುತ್ವ ಸಂಶೋಧನಾ ಸಂಸ್ಥೆ ಅಂದಾಜು ಮಾಡಿದೆ.  ಸ್ವೀಡನ್‌ನ ವಿ-ಡೆಮ್ ಇದನ್ನು ‘ಚುನಾಯಿತ ಸರ್ವಾಧಿಕಾರ’ ಎಂದು ವ್ಯಾಖ್ಯಾನಿಸಿದೆ. (ಈ ಸಂಸ್ಥೆಯು ದೇಶಗಳ ಸರ್ಕಾರಗಳ ಸ್ವರೂಪವನ್ನು ಪರಿಶೀಲಿಸುತ್ತದೆ ಮತ್ತು ಮೌಲ್ಯಮಾಪನ ಮಾಡುತ್ತದೆ) ಲಂಡನ್ ನಿಂದ ಪ್ರಕಟವಾಗುವ ಎಕನಾಮಿಸ್ಟ್ ನಿಯತಕಾಲಿಕದ ಸಂಶೋಧನಾ ಸಂಸ್ಥೆಯ ಪ್ರಕಾರ ಭಾರತ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 53ನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳುತ್ತಿದೆ. ಈ ಪ್ರಜಾಸತ್ತಾತ್ಮಕ ಪತನದಲ್ಲಿ ಭಾರತದ ಸಂಸತ್ತಿನ ಉಭಯ ಸದನಗಳ ಸದಸ್ಯರ ಪಾತ್ರವೂ ಅಡಗಿದೆ. ಭಾರತೀಯ ಸಂಸತ್ತು ಹೇಗೆ ದುರ್ಬಲವಾಯಿತು ಎಂಬುದರ ಕಿರು ಪಟ್ಟಿಯನ್ನು ನಾನು ನಿಮಗೆ ನೀಡುತ್ತೇನೆ.

ಜನರಿಗೆ ಬೇಕಾಗಿರುವುದು ಏನು?
ರಾಜ್ಯಸಭೆಯ ನಿಯಮ ಸಂಖ್ಯೆ 267ರ ಅಡಿಯಲ್ಲಿ, (ಸಂಸತ್ತಿಗೂ ಇದೇ ರೀತಿಯ ನಿಯಮವಿದೆ) ಜನರ ಮೇಲೆ ಪರಿಣಾಮ ಬೀರುವ ಅಥವಾ ಜನರು ತಿಳಿದುಕೊಳ್ಳಬೇಕಾದ ಮತ್ತು ತಕ್ಷಣವೇ ಚರ್ಚಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲು, ವಿರೋಧ ಪಕ್ಷಗಳ ಸದಸ್ಯರು ಹಲವಾರು ಔಪಚಾರಿಕ ಮನವಿಗಳನ್ನು ಸಲ್ಲಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಉಭಯ ಸದನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಇಂತಹ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಭಾರತದ ಭೂಪ್ರದೇಶಲ್ಲಿ ಚೀನಾ ಸೇನೆಯ ಒಳನುಗ್ಗುವಿಕೆ ಮತ್ತು ಅದಾನಿ ಸಮೂಹ ಕುರಿತು ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಪ್ರಕಟಿಸಿದ ವರದಿಯ ಬಗ್ಗೆ ಚರ್ಚಿಸಲು ಅವರು ಒತ್ತಾಯಿ ಮಾಡಿದರು. ಆದರೆ, ಪ್ರತಿಯೊಂದು ಮನವಿಯನ್ನೂ ಸ್ಪೀಕರ್ ತಿರಸ್ಕರಿಸಿದ್ದಾರೆ. ‘ಯಾವುದನ್ನು ಚರ್ಚಿಸಬೇಕು ಎಂದು ಅಧಿಕೃತ ಅಧ್ಯಯನ ಸಮಿತಿ ಮುಂಚಿತವಾಗಿ ನಿರ್ಧರಿಸಿದ್ದನ್ನು ಹೊರತುಪಡಿಸಿ, ಸಾರ್ವಜನಿಕ ಪರವಾಗಿ ಚರ್ಚಿಸಲು ತುರ್ತು ಏನೂ ಇಲ್ಲ. ಭಾರತೀಯ ಜನರು ಸುರಕ್ಷಿತವಾಗಿ ಮತ್ತು ತೃಪ್ತರಾಗಿದ್ದಾರೆ’ ಎಂದು ತಿಳೀಸಿ, ಸಂಸತ್ತಿನಲ್ಲಿ ತುರ್ತು ಚರ್ಚೆಯ ಅಗತ್ಯವಿರುವ ಯಾವುದಕ್ಕೂ ಅವರು ತಲೆಕೆಡಿಸಿಕೊಳ್ಳಲಿಲ್ಲ.

ರಾಷ್ಟ್ರಪತಿ ಶೈಲಿಯಲ್ಲಿ ಪ್ರಧಾನಿ!
ಪ್ರಧಾನಿ ಲೋಕಸಭೆಯ ಸದಸ್ಯರಾಗಿದ್ದರೆ ಅವರನ್ನು ಸದನದ ‘ನಾಯಕರು’ ಎಂದು ಕರೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ 17ನೇ ಲೋಕಸಭೆಯ ನಾಯಕರು. ಆದರೆ ಅವರು ಸದನಗಳಿಗೆ ಬರುವುದೇ ಅಪರೂಪವಾಗಿದೆ. ಅಧ್ಯಕ್ಷರ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗಳಿಗೆ ವಾರ್ಷಿಕವಾಗಿ ಪ್ರತಿಕ್ರಿಯಿಸುತ್ತಾರೆ. ಈ ಎರಡು ಸಂದರ್ಭಗಳನ್ನು ಬಿಟ್ಟರೆ ಮೋದಿ ಅವರು ಸದನದಲ್ಲಿ ದೊಡ್ಡದಾಗಿ ಮಾತನಾಡಿದ್ದು ನನಗೆ ನೆನಪಿಲ್ಲ. ಸಂಸತ್ತಿನಲ್ಲಿ ಕೇಳುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸುವುದೂ ಇಲ್ಲ. ಯಾರಾದರು ಒಬ್ಬ ಸಚಿವರು ಅವರ ಪರವಾಗಿ ಸದನದಲ್ಲಿ ಉತ್ತರಿಸುತ್ತಾರೆ. (ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರಧಾನ ಮಂತ್ರಿಯೇ ಪ್ರತಿ ಬುಧವಾರ ಉತ್ತರಿಸುವ ಪ್ರಶ್ನೆ-ಉತ್ತರ ಸಮಯ ವಿಧಾನ, ಭಾರತದಲ್ಲಿಯೂ ಇರಬೇಕಿತ್ತು ಎಂದು ನಾನು ಭಾವಿಸುತ್ತೇನೆ) ಹಿಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಡಾ.ಮನಮೋಹನ್ ಸಿಂಗ್ ಅಥವಾ ಅಟಲ್ ಬಿಹಾರಿ ವಾಜಪೇಯಿ ಅವರ ವಿಧಾನಕ್ಕಿಂತ ಮೋದಿಯವರ ವಿಧಾನ ವಿಭಿನ್ನವಾಗಿದೆ. ಪ್ರಧಾನಿ ರಾಷ್ಟ್ರಪತಿಯಂತೆ ವರ್ತಿಸುತ್ತಾರೆ. ಪ್ರಧಾನಿಯವರು ಹೀಗೆಯೇ ರಾಷ್ಟ್ರಪತಿಯಾಗಿ ಮುಂದುವರಿದರೆ, ಎಲ್ಲದರಲ್ಲೂ ರಾಷ್ಟ್ರಪತಿಯಂತೆ ವರ್ತಿಸಲು ಆರಂಭಿಸಿದರೆ ಭಾರತ ಸಂಸದೀಯ ಪ್ರಜಾಪ್ರಭುತ್ವವಾಗಿ ಹೆಚ್ಚು ದಿನ ಉಳಿಯುವುದಿಲ್ಲ.

ಸಾಂದರ್ಭಿಕ ಚಿತ್ರ

ಸದನ ಕೆಲಸ ಮಾಡಬಾರದೇ?
ಬ್ರಿಟನ್‌ನ ಲೋಕಸಭೆಯು ವರ್ಷದಲ್ಲಿ 135 ದಿನಗಳ ಕಾಲ ಸಭೆ ಸೇರುತ್ತದೆ. ಭಾರತದಲ್ಲಿ 2021ರಲ್ಲಿ ಲೋಕಸಭೆಯು 59 ದಿನಗಳವರೆಗೆ ಮತ್ತು ರಾಜ್ಯಸಭೆಯು 58 ದಿನಗಳವರೆಗೆ ಮಾತ್ರ ಸಭೆ ಸೇರಿತ್ತು. 2022ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ಕೇವಲ 56 ದಿನಗಳ ಕಾಲ ನಡೆದವು. ಸದನದಲ್ಲಿ ಗದ್ದಲ ಉಂಟಾಗಿ ಬಹುತೇಕ ದಿನಗಳು ಕಲಾಪ ನಡೆಯದೆ ಮುಂದೂಡಲ್ಪಟ್ಟವು. ದಿವಂಗತ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು ಒಮ್ಮೆ “ಸದಗಳಲ್ಲಿ ಏನೂ ನಡೆಯದಂತೆ ಅಡ್ಡಿಪಡಿಸುವುದು ಮತ್ತು ಅದನ್ನು ತಡೆಯುವುದು ಸಂಸದೀಯ ಕಾರ್ಯವಿಧಾನದಲ್ಲಿ ಕಾನೂನುಬದ್ಧ ತಂತ್ರವಾಗಿದೆ” ಎಂದು ಹೇಳಿದ್ದರು. 2010ರ ಚಳಿಗಾಲದ ಅಧಿವೇಶನದ ಉದ್ದಕ್ಕೂ, ಒಂದು ಸಚಿವರ ರಾಜೀನಾಮೆಗೆ ಆಗ್ರಹಿಸಿ, ಸಂಸದೀಯ ಜಂಟಿ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ, ವಿರೋಧ ಪಕ್ಷಗಳು ಅಡ್ಡಿಪಡಿಸಿದ್ದರಿಂದ ಯಾವುದೇ ಕ್ರಮವಿಲ್ಲದೆ ಅಧಿವೇಶನವು ಮುಕ್ತಾಯಗೊಂಡಿತು. ಆ ಅಧಿವೇಶನದಲ್ಲಿ ಲೋಕಸಭೆಯು ತನ್ನ ನಿಗದಿತ ಸಮಯದ 6% ಮತ್ತು ರಾಜ್ಯಸಭೆ 2% ಮಾತ್ರ ಕಾರ್ಯನಿರ್ವಹಿಸಿತು.

ಇತ್ತೀಚಿನ ದಿನಗಳಲ್ಲಿ ಈ ತಂತ್ರವನ್ನು ಮತ್ತಷ್ಟು ಸುಧಾರಿಸಲಾಗಿದೆ ಮತ್ತು ಬಲಪಡಿಸಲಾಗಿದೆ. ಪ್ರಸಕ್ತ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಆಡಳಿತ ಪಕ್ಷವೇ ಕಲಾಪ ನಡೆಯದಂತೆ ತಡೆದು ಪ್ರತಿ ದಿನವೂ ಅವಾಂತರವನ್ನು ಸೃಷ್ಟಿಸುತ್ತಿದೆ. ಕೆಲವೇ ದಿನಗಳು ಚರ್ಚೆಗಳಾಗಿ ಹೆಚ್ಚಿನ ದಿನಗಳಲ್ಲಿ ಗದ್ದಲ-ಮುಂದೂಡಿಕೆಗಳು ಆದರೆ, ಸಂಸತ್ ಅಧಿವೇಶನವೇ ಅನಗತ್ಯವಾಗಿಬಿಡುತ್ತದೆ. ಸರ್ಕಾರ ಮಾಂಡಿಸುವ ವಿಧೇಯಕಗಳು ಚರ್ಚೆಯಿಲ್ಲದೆ ಅಂಗೀಕಾರ ಪಡೆದುಕೊಳ್ಳುತ್ತವೆ. ಈ ಹಿಂದೆಯೂ ಕೆಲವೊಮ್ಮೆ ಈ ರೀತಿಯಾಗಿದೆ. ಇನ್ನು ಮುಂದೆ ಸಂಸತ್ತಿನ ಸಭೆಗಳು ಕೆಲವೇ ದಿನಗಳು ಸೇರಿ, ಗದ್ದಲ, ಆರೋಪ-ಪ್ರತ್ಯಾರೋಪದ ಮಧ್ಯೆಯೇ ವಿಧೇಯಕಗಳ ಮೇಲೆ  ಚರ್ಚೆಯಾಗದೆ ಮತದಾನವನ್ನು ಮಾಡಿ ತಮ್ಮ ಕರ್ತವ್ಯವನ್ನು ಮುಗಿಸಿಕೊಳ್ಳುತ್ತದೆ.

ಚರ್ಚೆಗಳಿಲ್ಲದ ಸಂಸತ್ತು:
ಸಂಸತ್ತಿನ ಉಭಯ ಸದನಗಳು ಜನರ ಸಮಸ್ಯೆಗಳನ್ನು ಚರ್ಚಿಸಲಿಕಾಗಿಯೇ ಇರುವುದು. ಭಾರತದ ಸಂಸತ್ತಿನಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ. 1962ರ ಚೀನಾದ ಆಕ್ರಮಣದಲ್ಲಿ ಭಾರತದ ಅವಮಾನಕರ ಸೋಲಿನ ಬಗ್ಗೆ ಸಂಸತ್ತು ಚರ್ಚೆ ನಡೆಸಿತು. ಹರಿದಾಸ್ ಮುಂದ್ರಾ ಕಂಪನಿಯಲ್ಲಿ ಎಲ್.ಐ.ಸಿ ಹೂಡಿಕೆ ಮಾಡಿದ ಬಗ್ಗೆ ಸಂಸತ್ತ್ ಚರ್ಚೆ ಮಾಡಿದೆ. ಬೋಫೋರ್ಸ್ ಫಿರಂಗಿಗಳ ಆಮದಿಗೆ ಕಮಿಷನ್ ಪಡೆಯಲಾಗಿದೆ ಎಂಬ ಆರೋಪದ ಮೇಲೆ ಸದನದಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆಯೂ ಚರ್ಚೆ ನಡೆದಿರುತ್ತದೆ.

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಈ ಎಲ್ಲಾ ಚರ್ಚೆಗಳು ಮತದಾನವಿಲ್ಲದೆ ಅಂತಿಮಗೊಂಡ ವಿಷಯಗಳಾಗಿವೇ. ಹಾಗಾಗಿ ಸರ್ಕಾರ ಚರ್ಚೆಗೆ ಹೆದರುವ ಅಗತ್ಯವಿಲ್ಲ. ಅಲ್ಲದೆ ಈ ಸರ್ಕಾರಕ್ಕೆ ಸಂಸತ್ತಿನಲ್ಲಿ ಬಹುಮತದ ಬೆಂಬಲವಿದೆ. ಹಾಗಾಗಿ ಚರ್ಚೆಯ ನಂತರ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯ ಪಡುವ ಅಗತ್ಯವಿಲ್ಲ. ಆದರೆ ಈ ಸರ್ಕಾರ ಯಾವ ವಿಚಾರಕ್ಕಾಗಿ ಅಂಜುತ್ತಿದೆ ಎಂದರೆ, ವಿರೋಧ ಪಕ್ಷಗಳು ಸರ್ಕಾರಕ್ಕೆ ಮುಜುಗರ ತರುವ ವಿಷಯಗಳ ಬಗ್ಗೆ ಸದನದಲ್ಲಿ ಮಾತನಾಡುತ್ತವೆ ಎಂದೇ ಅಂಜಿಕೊಂಡಿದೆ. ಭಾರತವು ಚರ್ಚೆಗಳಿಲ್ಲದ ಸಂಸತ್ತು ಎಂಬ ಯುಗವನ್ನು ಪ್ರವೇಶಿಸಿದೆಯೇ? ‘ಹೌದು’ ಎಂದೇ ಹೆದರುತ್ತಿದ್ದೇನೆ; ನನ್ನ ಭಯ ನಿಜವಾಗಿದ್ದರೆ, ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವಕ್ಕಾಗಿ ನಾವು ಶೀಘ್ರದಲ್ಲೇ ‘ವಿದಾಯ ಸಮಾರಂಭ’ವನ್ನು ನಡೆಸಬೇಕಾಗಿದೆ.

ಸಾಂದರ್ಭಿಕ ಚಿತ್ರ

ಕಾದಿರುವ ಬೆದರಿಕೆ:
ಹೊಸ ಅಧಿವೇಶನಕ್ಕಾಗಿ ಸಂಸತ್ತಿನ ಸಭೆ ಸೇರುವುದಾಗಿ ಕಲ್ಪಿಸಿಕೊಳ್ಳಿ; ಉಭಯ ಸದನಗಳ ಎಲ್ಲಾ ಸದಸ್ಯರು ಒಂದು ದೊಡ್ಡ ಸಭಾಂಗಣದಲ್ಲಿ ಒಟ್ಟುಗೂಡಿರುವುದಾಗಿ ಊಹಿಸಿಕೊಳ್ಳಿ; ಭಾರತದ ಗಣರಾಜ್ಯದ ಅಧ್ಯಕ್ಷರು ಅದರ ಎಲ್ಲಾ ಸದಸ್ಯರಿಂದ ಚುನಾಯಿತರಾಗಿದ್ದಾರೆ ಎಂದು ಕಲ್ಪಿಸಿಕೊಳ್ಳಿ; ಆ ಅಭ್ಯರ್ಥಿಯ ವಿರುದ್ಧ ಯಾರೂ ಮತ ಚಲಾಯಿಸಲು ಆಗುವುದಿಲ್ಲ ಮತ್ತು ಮತದಾನದಿಂದ ಯಾರೊಬ್ಬರೂ ದೂರವಿರಲು ಸಾದ್ಯವಿಲ್ಲ. How is Indian democracy falling?

ವಾಸ್ತವವಾಗಿ ಅಲ್ಲಿ ಒಬ್ಬರೇ ಅಭ್ಯರ್ಥಿ ಇರುತ್ತಾರೆ. ದೇಶದ ಸಮಸ್ತ ಜನತೆ ಈ ಚುನಾವಣಾ ಫಲಿತಾಂಶವನ್ನು ‘ಜನತಂತ್ರದ ವಿಜಯ’ ಎಂದು ಸಂಭ್ರಮಿಸುತ್ತಾರೆ. ಇದು ಭಾರತದಲ್ಲಿ ಸಾದ್ಯವೇ? ಖಂಡಿತ ಸಾದ್ಯವಿದೆ! ಕಾರಣ ನಾವು ಈಗ ನಿರಂತರವಾಗಿ, ಏಕರೂಪವಾಗಿ; ಒಂದು ಪಕ್ಷದ ಆಡಳಿತದತ್ತ ಸಾಗುತ್ತಿದ್ದೇವೆ. 15 ರಾಜ್ಯಗಳು ಒಂದೇ ರಾಜಕೀಯ ಪಕ್ಷದಿಂದ ಆಳ್ವಿಕೆ ನಡೆಸುತ್ತಿರುವ ಹಿನ್ನಲೆಯಲ್ಲಿ, ಆ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಒಟ್ಟಾಗಿ ಲೋಕಸಭೆಯಲ್ಲಿ 362 ಮತ್ತು ರಾಜ್ಯಸಭೆಯಲ್ಲಿ 163 ಸದಸ್ಯರನ್ನು ಹೊಂದಿರುವುದರಿಂದ, ಭಾರತವನ್ನು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಸ್ಥಾನಮಾನದಿಂದ ‘ಪ್ರಜೆಗಳ ಗಣರಾಜ್ಯ’ ಎಂದು ಬದಲಾಯಿಸುವುದನ್ನು ಯಾರೂ ತಡೆಯಲು ಸಾದ್ಯವಿಲ್ಲ.How is Indian democracy falling?

ಈ ಅಪಾಯವು ಸ್ವಲ್ಪ ದೂರದಲ್ಲಿದೆ. ಆದರೆ, ಅದು ನಡೆಯುವುದಿಲ್ಲ ಎಂದು ನಿರಾಕರಣೆ ಮಾಡಲಾಗದು. ಭಾರತ ಹೀಗೆ ಪ್ರಜೆಗಳ ಗಣರಾಜ್ಯವಾಗಿ ಬದಲಾದಾಗ, ಭಾರತದ ಪ್ರಜಾಸತ್ತಾತ್ಮಕ ಗಣರಾಜ್ಯವು ಕೊನೆಯದಾಗಿ ಅದು ವಿಶ್ರಾಂತಿ ತೆಗೆದುಕೊಳ್ಳಬೇಕಾದ ಸ್ಥಳಕ್ಕೆ ಹೋಗಿ ಸೇರಿರುತ್ತದೆ! How is Indian democracy falling?

ಕೃಪೆ: arunchol.com
ಕನ್ನಡಕ್ಕೆ: ಡಿ.ಸಿ.ಪ್ರಕಾಶ್, ಸಂಪಾದಕರು,
ಡೈನಾಮಿಕ್ ಲೀಡರ್

ದೇಶ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ 2023ರ ಕೇಂದ್ರ ಬಜೆಟ್‌ ಬಗ್ಗೆ ವಿರೋಧ ಪಕ್ಷಗಳ ನಾಯಕರ ಅಭಿಪ್ರಾಯವೇನು? ಅವರು ಏನು ಹೇಳುತ್ತಾರೆ? ನೋಡೋಣ!

ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು, ಎಐಸಿಸಿ
‘ಮುಂಬರುವ 3 ಮತ್ತು 4ನೇ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಈ ಬಜೆಟ್ ನೀಡಿದೆ. ಈ ಬಜೆಟ್‌ನಲ್ಲಿ ಬಡವರಿಗೆ ಏನೂ ಇಲ್ಲ. ಹಣದುಬ್ಬರ ನಿಯಂತ್ರಣಕ್ಕೆ ಯಾವುದೇ ಕ್ರಮಗಳಿಲ್ಲ. ಅದೇ ರೀತಿ ಈ ಬಜೆಟ್‌ನಲ್ಲಿ ಉದ್ಯೋಗ ಹೆಚ್ಚಳ, ಖಾಲಿ ಇರುವ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುವ ಬಗ್ಗೆ ಅಥವಾ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ’.

ಪಿ.ಚಿದಂಬರಂ ಮಾಜಿ ಕೇಂದ್ರ ಹಣಕಾಸು ಸಚಿವರು
‘ಇದು ಅಹಿತವಾದ ಹಣಕಾಸು ಸಚಿವರಿಂದ ಓದಲ್ಪಟ್ಟ ಬಂಡವಾಳಶಾಹಿ ಬಜೆಟ್. ಬಡವರು ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಘೋಷಿಸಲಾದ ಎಲ್ಲಾ ಸಬ್ಸಿಡಿಗಳನ್ನು ಈಗ ಕಡಿಮೆ ಮಾಡಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಘೋಷಣೆಯಾಗಿಲ್ಲ. ಜಿಎಸ್‌ಟಿ ಆದಾಯ ತೆರಿಗೆ ರಿಯಾಯಿತಿ ಇಲ್ಲದೇ ಬಜೆಟ್ ಮಂಡನೆ ಮಾಡಲಾಗಿದೆ. ಕೊರೊನಾ ಪೀಡಿತ ಜನರಿಗೆ ಪರಿಹಾರ ನೀಡಲು ಮುಂದಾಗಲಿಲ್ಲ. ಹಣದುಬ್ಬರವನ್ನು ನಿಯಂತ್ರಿಸಲು ಅಥವಾ ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಯಾವುದೇ ಕ್ರಮವಿಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಪುನಶ್ಚೇತನಗೊಳಿಸಲು ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಬಡವರು ಎಂಬ ಪದ ಬಜೆಟ್‌ನಲ್ಲಿ ಎರಡು ಬಾರಿ ಕಾಣಿಸಿಕೊಂಡಿದೆ. ದೇಶದಲ್ಲಿ ಬಡವರು ಇದ್ದಾರೆ ಎಂಬುದು ಈಗ ಹಣಕಾಸು ಸಚಿವರಿಗೆ ಅರಿವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆಯನ್ನು ಸರಿಪಡಿಸಲು ಯಾವುದೇ ಯೋಜನೆ ಘೋಷಿಸಿಲ್ಲ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಿಗೆ ಹಣ ಹಂಚಿಕೆಯನ್ನು ಕಡಿತಗೊಳಿಸಲಾಗಿದೆ. ಸಂಕ್ಷಿಪ್ತ ಪಠ್ಯವನ್ನು ಹೊರತುಪಡಿಸಿ ಬಡ್ಡಿರಹಿತ ಸಾಲವನ್ನು ಸೂಚಿಸಲು ಅದರಲ್ಲಿ ಏನೂ ಇಲ್ಲ’.

ಪಿ.ಚಿದಂಬರಂ, ಮಾಜಿ ಕೇಂದ್ರ ಹಣಕಾಸು ಸಚಿವ

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
‘ಈ ಬಜೆಟ್ ದೂರದೃಷ್ಟಿಯದ್ದಲ್ಲ. ಇದೊಂದು ಅವಕಾಶವಾದಿ ಬಜೆಟ್‌. ಇದು ಜನವಿರೋಧಿ, ಬಡವರ ವಿರೋಧಿ ಬಜೆಟ್. ಈ ಬಜೆಟ್ ಒಂದು ವರ್ಗಕ್ಕೆ ಮಾತ್ರ ಲಾಭವಾಗಲಿದೆ. ದೇಶದ ನಿರುದ್ಯೋಗ ಸಮಸ್ಯೆಗೆ ಈ ಬಜೆಟ್‌ನಲ್ಲಿ ಪರಿಹಾರವಿಲ್ಲ. ಮುಂಬರುವ 2024ರ ಸಂಸತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಸಿದ್ಧಪಡಿಸಲಾಗಿದೆ’.

ಎಂ.ಕೆ.ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ
‘ಜನರ ಹಿತವನ್ನು ಮರೆತಿರುವ ಹಣಕಾಸು ವರದಿ. 2023ನೇ ಸಾಲಿನ ಈ ಹಣಕಾಸು ವರದಿಯು ಕೇಂದ್ರ ಬಿಜೆಪಿ ಸರಕಾರದ ನಿಯಮಿತ ಹಣಕಾಸು ವರದಿಯಾಗಿದ್ದು, ವೈಯಕ್ತಿಕ ಆದಾಯ ತೆರಿಗೆ ದರ, ರೈತರ ಕಲ್ಯಾಣ ಯೋಜನೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ರೈತರಿಗೆ ಯಾವುದೇ ಕಲ್ಯಾಣ ಯೋಜನೆಗಳಿಲ್ಲ’.

ಕೆ.ಚಂದ್ರಶೇಖರ್ ರಾವ್, ಮುಖ್ಯಮಂತ್ರಿ, ತೆಲಂಗಾಣ.

ಚಂದ್ರಶೇಖರ ರಾವ್ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ
‘ಕೇಂದ್ರ ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್ ‘ಗೋಲ್ಮಾಲ್ ಬಜೆಟ್’. ಈ ಬಜೆಟ್ ಜನಸಾಮಾನ್ಯರನ್ನು ತೀವ್ರ ಹತಾಶೆಗೆ ದೂಡಿದೆ. ರೈತರು ಮತ್ತು ಸಾಮಾನ್ಯ ಜನರೊಂದಿಗೆ, ಎಸ್‌ಸಿ/ಎಸ್‌ಟಿ, ಬಿ.ಸಿ. ಹಾಗೂ ಅಲ್ಪಸಂಖ್ಯಾತರಿಗೆ ತೀವ್ರ ನಿರಾಸೆಯನ್ನು ಮೂಡಿಸಿದೆ. ಬಡವರು, ಕಾರ್ಮಿಕರು ಮತ್ತು ನೌಕರರು ನಿರಾಶೆಗೊಂಡಿದ್ದಾರೆ. ಈ ಬಜೆಟ್ ದೇಶದ ಕೃಷಿ ಮತ್ತು ಕೈಮಗ್ಗ ಕ್ಷೇತ್ರಕ್ಕೆ ದೊಡ್ಡ ಶೂನ್ಯವಾಗಿದೆ. ಈ ಬಜೆಟ್ ಸಣ್ಣ ವ್ಯಾಪಾರಿಗಳಿಗೂ ನಿರಾಸೆ ಮೂಡಿಸಿದೆ. ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿಯನ್ನು ಬಜೆಟ್ ನಿರ್ಲಕ್ಷಿಸಿದೆ’.

ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ
‘ಈ ಬಾರಿಯ ಬಜೆಟ್‌ನಲ್ಲಿ ಹಣದುಬ್ಬರಕ್ಕೆ ಪರಿಹಾರ ಸಿಕ್ಕಿಲ್ಲ. ಇದಕ್ಕೆ ವಿರುದ್ಧವಾಗಿ ಈ ಬಜೆಟ್ ಹಣದುಬ್ಬರವನ್ನು ಹೆಚ್ಚಿಸುತ್ತದೆ. ನಿರುದ್ಯೋಗ ನಿವಾರಣೆಗೆ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ. ಶಿಕ್ಷಣದ ಬಜೆಟ್ ಶೇ.2.64ರಿಂದ ಶೇ.2.5ಕ್ಕೆ ಇಳಿಸಿರುವುದು ದುರದೃಷ್ಟಕರ. ಆರೋಗ್ಯ ಬಜೆಟ್ ಅನ್ನು 2.2% ರಿಂದ 1.98% ಕ್ಕೆ ಇಳಿಸುವುದು ಸಹ ಹಾನಿಕಾರಕವಾಗಿದೆ’.