ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Palestine Archives » Dynamic Leader
November 23, 2024
Home Posts tagged Palestine
ವಿದೇಶ

“ಪ್ರಸ್ತುತ ಜಾಗತಿಕ ವಾಸ್ತವದೊಂದಿಗೆ ನಾವು ಯುದ್ಧವನ್ನು ನಿರ್ವಹಿಸಲು ಸಾಧ್ಯವಿಲ್ಲ. ಗಾಜಾಕ್ಕೆ ಬರುತ್ತಿರುವ ಮಾನವೀಯ ನೆರವು ಇಸ್ರೇಲ್‌ಗೆ ಅಪಾಯವನ್ನು ತಂದೊಡ್ಡುತ್ತದೆ.” – ಇಸ್ರೇಲ್ ಹಣಕಾಸು ಮಂತ್ರಿ.

ಇಸ್ರೇಲ್ – ಹಮಾಸ್ ನಡುವೆ ಒಂದು ವರ್ಷದಿಂದ ಯುದ್ಧ ನಡೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಮತ್ತು 71 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 39,623 ಜನರು ಸಾವನ್ನಪ್ಪಿದ್ದಾರೆ. 91,469 ಜನರು ಗಾಯಗೊಂಡಿದ್ದಾರೆ ಎಂದು ಅಧಿಕೃತವಾಗಿ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ, ಇಸ್ರೇಲ್‌ನ ಹಣಕಾಸು ಮಂತ್ರಿ ಮತ್ತು ಬಲಪಂಥೀಯ ಬೆಂಬಲಿಗರಾದ ಬೆಜಲೆಲ್ ಸ್ಮೊಟ್ರಿಚ್ (Bezalel Smotrich) ಅವರು ಯಾದ್ ಬಿನ್ಯಾಮಿನ್‌ (Yad Binyamin)ನಲ್ಲಿ ಇಸ್ರೇಲ್ ಹಯೋಮ್ ಔಟ್‌ಲೆಟ್ (Hayom Outlet) ಆಯೋಜಿಸಿದ್ದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಇಸ್ರೇಲ್‌ ಹಣಕಾಸು ಮಂತ್ರಿ ಬೆಜಲೆಲ್ ಸ್ಮೊಟ್ರಿಚ್

“2005ರಲ್ಲಿ ಇಸ್ರೇಲ್ ಗಾಜಾದಿಂದ ಹೊರನಡೆಯದಿದ್ದರೆ, ಅಕ್ಟೋಬರ್ 7ರ ದಾಳಿ ನಡೆಯುತ್ತಿರಲಿಲ್ಲ. ಪ್ರಸ್ತುತ ಜಾಗತಿಕ ವಾಸ್ತವದೊಂದಿಗೆ ನಾವು ಯುದ್ಧವನ್ನು ನಿರ್ವಹಿಸಲು ಸಾಧ್ಯವಿಲ್ಲ. ಗಾಜಾಕ್ಕೆ ಬರುತ್ತಿರುವ ಮಾನವೀಯ ನೆರವು ಇಸ್ರೇಲ್‌ಗೆ ಅಪಾಯವನ್ನು ತಂದೊಡ್ಡುತ್ತದೆ.

ನಮ್ಮ ಒತ್ತೆಯಾಳುಗಳನ್ನು ಹಿಂತಿರುಗಿಸುವವರೆಗೆ ಗಾಜಾದ 2 ಮಿಲಿಯನ್ ನಾಗರಿಕರು ಹಸಿವಿನಿಂದ ಸಾವನ್ನಪ್ಪಿದರೂ ಸಹ, ಗಾಜಾ ಪಟ್ಟಿಗೆ ಮಾನವೀಯ ನೆರವನ್ನು ತಡೆಹಿಡಿಯುವುದು ನೈತಿಕವಾಗಿ ಸಮರ್ಥನೆಯಾಗಿದೆ. ಆದರೆ ಅಂತಾರಾಷ್ಟ್ರೀಯ ಸಮುದಾಯ ಅದಕ್ಕೆ ಅವಕಾಶ ನೀಡುವುದಿಲ್ಲ.

ಅದಕ್ಕಾಗಿಯೇ ನಾವು ಗಾಜಾಕ್ಕೆ ಸಹಾಯವನ್ನು ಅನುಮತಿಸುತ್ತಿದ್ದೇವೆ. ನಾವು ಇಂದು ಒಂದು ನಿರ್ದಿಷ್ಟ ವಾಸ್ತವದಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಈ ಯುದ್ಧಕ್ಕೆ ಅಂತಾರಾಷ್ಟ್ರೀಯ ಮನ್ನಣೆಯ ಅಗತ್ಯವಿದೆ.” ಎಂದು ಹೇಳಿದ್ದಾರೆ.

ವಿದೇಶ

ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಅವರನ್ನು ಗಾಜಾ ಗಡಿಗೆ ಬಂದು ಇಸ್ರೇಲ್ ಮಾಡಿರುವ ವಿನಾಶವನ್ನು ನೋಡುವಂತೆ ಹಮಾಸ್‌ನ ಹಿರಿಯ ನಾಯಕರೊಬ್ಬರು ಆಹ್ವಾನಿಸಿದ್ದಾರೆ.

“ಗಾಜಾ ಗಡಿಗೆ ಬಂದು, ಗಾಜಾದ ಜನರ ವಿರುದ್ಧ ನಡೆದ ವಿಧ್ವಂಸಕ ಕೃತ್ಯಗಳನ್ನು ಪ್ರತ್ಯಕ್ಷವಾಗಿ ನೋಡಿ ತಿಳಿದುಕೊಳ್ಳುವಂತೆ ನಾವು ಅವರಿಗೆ ಕರೆ ನೀಡುತ್ತೇವೆ. 50 ದಿನಗಳಲ್ಲಿ, ಗಾಜಾದ ರಕ್ಷಣೆಯಿಲ್ಲದ ಮನೆಗಳ ಮೇಲೆ ಇಸ್ರೇಲ್ 40,000 ಟನ್ ಸ್ಫೋಟಕಗಳನ್ನು ಬೀಳಿಸಿದೆ. ಮತ್ತು ಅಮೆರಿಕ, ಇಸ್ರೇಲ್ ನೊಂದಿಗೆ ಸಂಬಂಧಗಳನ್ನು ವಿಸ್ತರಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಕುರಿತು ಮರುಪರಿಶೀಲನೆ ಮಾಡಬೇಕು” ಎಂದು ಹಮಾಸ್‌ನ ಹಿರಿಯ ನಾಯಕ ಒಸಾಮಾ ಹಮ್ದಾನ್ ಹೇಳಿದ್ದಾರೆ.

ಈ ಹಿಂದೆ ಇಸ್ರೇಲ್‌ಗೆ ಭೇಟಿ ನೀಡಿದ್ದ ಎಲಾನ್ ಮಸ್ಕ್, ಹಮಾಸ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದರು. ಮತ್ತು ಎಲಾನ್ ಮಸ್ಕ್ ಅವರು ದ್ವೇಷ ಹರಡುವುದನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು.

ವಿದೇಶ

ಬೀಜಿಂಗ್: ಚೀನಾದ ಬೈದು (Baidu) ಮತ್ತು ಅಲಿಬಾಬಾ (Alibaba) ಆನ್‌ಲೈನ್ ನಕ್ಷೆಗಳಿಂದ ಇಸ್ರೇಲ್ ಹೆಸರನ್ನು ತೆಗೆದುಹಾಕಲಾಗಿದೆ. ಪ್ಯಾಲೆಸ್ತೀನ್ ಗೆ ಬೆಂಬಲ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇಸ್ರೇಲ್ ಮತ್ತು ಹಮಾಸ್ ನಡುವೆ 20 ದಿನಗಳಿಗೂ ಹೆಚ್ಚು ಕಾಲ ಸಂಘರ್ಷ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಚೀನಾದ ಪ್ರಮುಖ ತಂತ್ರಜ್ಞಾನ ಕಂಪನಿಗಳಾದ ಅಲಿಬಾಬಾ ಮತ್ತು ಬೈದು ತಮ್ಮ ಆನ್‌ಲೈನ್ ನಕ್ಷೆಗಳಿಂದ ಇಸ್ರೇಲ್ ಹೆಸರನ್ನು ತೆಗೆದುಹಾಕಿವೆ. ಚೀನಾದ ಪ್ಯಾಲೆಸ್ತೀನ್ ಪರ ನಿಲುವನ್ನು ಬೆಂಬಲಿಸುವ ಸಲುವಾಗಿ ಚೀನಾದ ಕಂಪನಿಗಳು ಈ ಕ್ರಮವನ್ನು ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತದೆ.

ಆದಾಗ್ಯೂ, ಬೈದುವಿನ ಚೈನೀಸ್ ಭಾಷೆಯ ಆನ್‌ಲೈನ್ ನಕ್ಷೆಯಲ್ಲಿ ಅಂತರಾಷ್ಟ್ರೀಯವಾಗಿ ಸೂಚಿಸಲಾದ ಅಳತೆಗಳ ಪ್ರಕಾರ ಇಸ್ರೇಲ್‌ನ ಗಡಿಗಳನ್ನು ಗುರುತಿಸಲಾಗಿದ್ದರೂ ಆ ಪ್ರದೇಶದಲ್ಲಿ ಇಸ್ರೇಲ್ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಅಲಿಬಾಬಾ ಮತ್ತು ಬೈದು ಕಂಪನಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಯಾರನ್ನೂ ಬೆಂಬಲಿಸದ ಚೀನಾ ಪ್ಯಾಲೆಸ್ತೀನ್ ಗೆ ಪ್ರತ್ಯೇಕ ರಾಜ್ಯ ನೀಡುವುದೇ ಪರಿಹಾರ ಎಂದು ಹೇಳಿದ್ದು ಗಮನಾರ್ಹ.