ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Prediction Archives » Dynamic Leader
October 23, 2024
Home Posts tagged Prediction
ವಿದೇಶ

ಮಾಸ್ಕೋ: ಬಲ್ಗೇರಿಯಾ ದೇಶಕ್ಕೆ ಸೇರಿದವರು ಬಾಬಾ ವಂಗಾ. ಉತ್ತರ ಮ್ಯಾಸಿಡೋನಿಯಾದಲ್ಲಿ 1911ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತೀವ್ರ ಚಂಡಮಾರುತದಲ್ಲಿ ಸಿಕ್ಕಿಬಿದ್ದ ಅವರು ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದರು. ಅದರಿಂದ ಅವರು ಭವಿಷ್ಯವನ್ನು ಊಹಿಸುವ ಶಕ್ತಿಯನ್ನು ಪಡೆದುಕೊಂಡಿದ್ದರು ಎಂದು ಹೇಳಲಾಗುತ್ತದೆ. ಅವರು 1996ರಲ್ಲಿ ನಿಧನರಾದರು.

ಪ್ರಪಂಚದ ವಿದ್ಯಮಾನಗಳ ಬಗ್ಗೆ ಅವರು ಭವಿಷ್ಯ ನುಡಿದ ಶೇಕಡಾ 85ರಷ್ಟು ನಿಜವಾಗಿದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಚೆರ್ನೋಬಿಲ್ ಪರಮಾಣು ರಿಯಾಕ್ಟರ್ ಅಪಘಾತ, ಇಂಗ್ಲೆಂಡ್‌ನ ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ವಿಸರ್ಜನೆ ಮತ್ತು ಅಮೆರಿಕ ಅವಳಿ ಗೋಪುರಗಳ ಮೇಲಿನ ದಾಳಿಗಳು ನಿಜವಾಗಿವೆ.

ಈ ಹಿನ್ನಲೆಯಲ್ಲಿ, ಮುಂಬರುವ 2024ರಲ್ಲಿ ಅವರು ಏಳು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ ಎಂದು ಸುದ್ದಿ ಸಂಸ್ಥೆ ಡೈಲಿ ಸ್ಟಾರ್ ವರದಿ ಮಾಡಿದೆ. ಅವುಗಳನ್ನು ಈ ಕೆಳಗಿನಂತೆ ನೋಡೋಣ.

2024ರಲ್ಲಿ ಭೂಕಂಪ, ಅಗ್ನಿ ಮತ್ತು ಪ್ರವಾಹದಂತಹ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ಕ್ಯಾನ್ಸರ್‌ಗೆ ಮದ್ದು ಕಂಡು ಹಿಡಿಯಲಾಗುವುದು. ಕ್ವಾಂಟಮ್ ಕಂಪ್ಯೂಟರ್‌ಗಳ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಗಳು ಸಂಭವಿಸುತ್ತವೆ. ರಷ್ಯಾದ ಅಧ್ಯಕ್ಷ ಪುಟಿನ್ ತನ್ನ ದೇಶದವನೊಬ್ಬನಿಂದ ಹತ್ಯೆಯಾಗುತ್ತಾರೆ.

ಯುರೋಪಿನಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗಿರುತ್ತದೆ. ಮತ್ತು ಒಂದು “ಪ್ರಮುಖ ದೇಶ” ಮುಂದಿನ ವರ್ಷ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳು ಮತ್ತು ದಾಳಿಗಳನ್ನು ನಡೆಸುತ್ತದೆ. ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ನಿಗೂಢ ಕಾಯಿಲೆಯಿಂದ ಬಳಲಲಿದ್ದಾರೆ.

ಸೈಬರ್ ದಾಳಿಗಳು ಹೆಚ್ಚಾಗುತ್ತವೆ. ಹ್ಯಾಕರ್‌ಗಳು ಹೆಚ್ಚು ಅತ್ಯಾಧುನಿಕರಾಗುತ್ತಾರೆ ಮತ್ತು ಪವರ್ ಗ್ರಿಡ್‌ಗಳು ಹಾಗೂ ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಸಾಮಾಜಿಕ ಮಾಧ್ಯಮದಲ್ಲಿ ಮುಖ್ಯಾಂಶಗಳಾಗಿ ಹರಿದಾಡುತ್ತವೆ ಎಂಬುದು ಗಮನಾರ್ಹ.