ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
RBI Dividend Archives » Dynamic Leader
October 23, 2024
Home Posts tagged RBI Dividend
ದೇಶ

ಡಿ.ಸಿ.ಪ್ರಕಾಶ್

2022-23ನೇ ಸಾಲಿಗೆ ಕೇಂದ್ರ ಸರ್ಕಾರಕ್ಕೆ ರೂ.87,416 ಕೋಟಿ ಡಿವಿಡೆಂಡ್ ನೀಡಲು ಆರ್‌ಬಿಐ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದಂದಿನಿಂದ ಆರ್‌ಬಿಐಗೆ ಆದಾಯ ಹರಿದು ಬರುತ್ತಿದೆ.

ಜನರು ಬ್ಯಾಂಕ್‌ಗಳಿಂದ ಹಣ ಸಂಪಾದಿಸಲಿ ಅಥವಾ ಇಲ್ಲದಿರಲಿ, ಬ್ಯಾಂಕ್‌ಗಳು ಮಾತ್ರ ಜನರಿಂದ ಉತ್ತಮ ಹಣವನ್ನು ಗಳಿಸುತ್ತವೆ. ಇದಲ್ಲದೆ, ರಿಸರ್ವ್ ಬ್ಯಾಂಕ್‌ನ ಆದಾಯವು ಕೂಡ ಏರುತ್ತಲೇ ಇದೆ. ಅದು ಹೇಗೆ ಎಂದು ನೀವು ಕೇಳಬಹುದು?

ಭಾರತೀಯ ರಿಸರ್ವ್ ಬ್ಯಾಂಕಿನ ಆಡಳಿತ ಮಂಡಳಿಯು 2022-23ನೇ ಸಾಲಿಗೆ ಕೇಂದ್ರ ಸರ್ಕಾರಕ್ಕೆ ರೂ.87,416 ಕೋಟಿ ಲಾಭಾಂಶವನ್ನು ಅನುಮೋದಿಸಿದಾಗಿನಿಂದ ರಿಸರ್ವ್ ಬ್ಯಾಂಕಿನ ಆದಾಯವು ಹರಿದುಬರುತ್ತಿದೆ ಎಂದು ಹೇಳಲಾಗುತ್ತದೆ!

ಆರ್‌ಬಿಐ ಸಾಮಾನ್ಯವಾಗಿ ತನ್ನ ಲಾಭವನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಲಾಭಾಂಶವಾಗಿ ನೀಡುತ್ತದೆ. ಈ ಮೂಲಕ 2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ರೂ.87,416 ಕೋಟಿ ಡಿವಿಡೆಂಡ್ ನೀಡಲು ರಿಸರ್ವ್ ಬ್ಯಾಂಕ್ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್‌ನಿಂದ ಕೇವಲ 48,000 ಕೋಟಿ ರೂಪಾಯಿ ಲಾಭಾಂಶವನ್ನು ಪಡೆಯಬಹುದೆಂದು ನಿರೀಕ್ಷಿಸಿತ್ತು. ಆದರೆ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಸುಮಾರು ದುಪ್ಪಟ್ಟು ಮೊತ್ತವನ್ನು ನೀಡಲಿದೆ.

ನರೇಂದ್ರ ಮೋದಿಯವರ ಮತ್ತೊಂದು ನೋಟು ನಿಷೇಧ! ಸಿದ್ದರಾಮಯ್ಯ

ಚಾಲ್ತಿಯಲ್ಲಿರುವ ಜಾಗತಿಕ ಮತ್ತು ರಾಜಕೀಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಆರ್‌ಬಿಐ ಸಹ ಅನುಮೋದನೆ ಪಡೆದಿರುವ ಲಾಭಾಂಶವನ್ನು ಈ ವರ್ಷ ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು ಎಂದು ಹೇಳಿದೆ.

ಕಳೆದ 2012-13ನೇ ಸಾಲಿನಲ್ಲಿ ಆರ್‌ಬಿಐ ಕೇವಲ ರೂ.33,000 ಡಿವಿಡೆಂಡ್ ನೀಡಿತ್ತು. ಆದರೆ 2019ರಲ್ಲಿ ಆರ್‌ಬಿಐ ರೂ.1,76,000 ಕೋಟಿಯನ್ನು ಡಿವಿಡೆಂಡ್‌ ರೂಪದಲ್ಲಿ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಅದರ ನಂತರ, 2021ರಲ್ಲಿ ರೂ.1,00,000 ಕೋಟಿಯವರೆಗೆ ಲಾಭಾಂಶವನ್ನು ನೀಡಿತು ಎಂಬುದು ಗಮನಾರ್ಹ.

ಆರ್‌ಬಿಐ ಲಾಭಾಂಶವನ್ನು ಹೆಚ್ಚಿಸಿರುವ ಅದೇ ಸಂದರ್ಭದಲ್ಲಿ, ಭವಿಷ್ಯದ ತುರ್ತು ವೆಚ್ಚಗಳನ್ನು ಪೂರೈಸಲು ಅಗತ್ಯವಿರುವ ನಿಧಿಯ ಮಟ್ಟವನ್ನೂ ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ. ದರವು ಮೊದಲು ಶೇ5.50 ಇತ್ತು; ಈಗ ಅದನ್ನು ಶೇಕಡಾ 6ಕ್ಕೆ ಹೆಚ್ಚಿಸಲಾಗಿದೆ.

ಇಷ್ಟು ಆದಾಯ ಹೇಗೆ ಬಂದವು?
ಆರ್‌ಬಿಐ, ಕೇಂದ್ರ ಸರ್ಕಾರಕ್ಕೆ ಇಷ್ಟೊಂದು ಡಿವಿಡೆಂಡ್ ಆದಾಯವನ್ನು ನೀಡಲು, ಅದಕ್ಕೆ ಇಷ್ಟೊಂದು ಆದಾಯ ಹೇಗೆ ಬರುತ್ತದೆ ಎಂದು ನೀವು ಕೇಳಬಹುದು?

ಆರ್‌ಬಿಐಗೆ ದೇಶದ ವಿವಿಧ ಬ್ಯಾಂಕ್‌ಗಳ ಮೂಲಕ ಆದಾಯ ಸಿಗುವುದು ಒಂದು ವಿಧ. ಆದಾಯದ ಮತ್ತೊಂದು ಪ್ರಮುಖ ರೂಪವೆಂದರೆ, ಡಾಲರ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು. ಭಾರತೀಯ ರೂಪಾಯಿ ಎದುರು ಅಮೆರಿಕ ಡಾಲರ್ ಬೆಲೆಯು ರೂ.82ರಷ್ಟಿದೆ. ಅಂದರೆ 82 ರೂಪಾಯಿ ಕೊಟ್ಟರೆ ಒಂದು ಅಮೆರಿಕ ಡಾಲರ್ ನಿಮಗೆ ಸಿಗುತ್ತದೆ.

ಹೊಸ 2000 ರೂಪಾಯಿ ನೋಟು ಮತ್ತೆ ಬಿಡುಗಡೆ ಆಗಲಿದೆಯೇ?

ಆದರೆ ಆರ್‌ಬಿಐ ಹೊಂದಿರುವ ಒಂದು ಅಮೆರಿಕನ್ ಡಾಲರ್‌ನ ಸರಾಸರಿ ಮೌಲ್ಯವು 62 ರಿಂದ 65 ರೂಪಾಯಿಗಳಾಗಿರುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಆರ್‌ಬಿಐ ಒಂದು ಡಾಲರ್ ಮಾರಿದರೆ ಅದಕ್ಕೆ ರೂ.17 ರಿಂದ ರೂ.20 ರವರೆಗೆ ಲಾಭ ಸಿಗಬಹುದು! ಈ ಡಾಲರ್‌ಗಳನ್ನು ಆಗಾಗ ಖರೀದಿಸಿ ಮಾರಾಟ ಮಾಡುವುದರಿಂದ ಆರ್‌ಬಿಐ ಸ್ವಲ್ಪ ಲಾಭವನ್ನೂ ಗಳಿಸುತ್ತದೆ. ಡಾಲರ್ ಮೌಲ್ಯವನ್ನು ತುಂಬಾ ಕಡಿಮೆ ಅಥವಾ ಹೆಚ್ಚು ಹೋಗದಂತೆ ನಿಯಂತ್ರಿಸಲೂ ಮಾಡಬಹುದು!

ನಮ್ಮ ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಹಣದುಬ್ಬರವನ್ನು ಸರಿಯಾಗಿ ನಿಯಂತ್ರಿಸುವ ಕೆಲಸವನ್ನು ಮಾಡುತ್ತಾ, ಕರೆನ್ಸಿಗಳನ್ನು ಸರಿಯಾದ ರೀತಿಯಲ್ಲಿ ಖರೀದಿಸಿ ಮತ್ತು ಮಾರಾಟ ಮಾಡುವ ಕೆಲಸವನ್ನೂ ಮಾಡಿ, ಭಾರಿ ಲಾಭವನ್ನು ಗಳಿಸಿ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಇದರಿಂದ ಆರ್‌ಬಿಐಗೆ ಹೆಚ್ಚು ಆದಾಯ ಸಿಗುತ್ತದೆ.