ಬೆಂಗಳೂರು: ವಿಶಾಲ್ ಪಾಟೀಲ್ ಎಂಬುವವನು ತಾನು ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಎಂದು ಸರ್ಕಾರಿ ನೌಕರರುಗಳಿಗೆ ಕರೆ ಮಾಡಿ, ನಿಮ್ಮ ವಿರುದ್ದ ಆದಾಯಕ್ಕೂ ಮೀರಿದ ಆಸ್ತಿಗಳಿಗೆ ಸಂಬಂಧಪಟ್ಟ ಮಾಹಿತಿಗಳುಳ್ಳ ಕೇಸಿನ ಕಡತ ನನ್ನ ಬಳಿ ಇದೆ ಎಂದು ಬೆದರಿಕೆ ಹಾಕಿ, ಕೇಸನ್ನು ಮುಕ್ತಾಯ ಮಾಡಲು ಹಣ ನೀಡಬೇಕು ಇಲ್ಲದಿದ್ದರೆ, ನಿಮ್ಮ ವಿರುದ್ದ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುತ್ತೇನೆಂದು ಸುಳ್ಳು ಹೇಳಿ ಹಣಕ್ಕೆ ಒತ್ತಾಯ ಮಾಡುತ್ತಿದ್ದ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯೋನ್ಮುಖರಾದ ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತನು ಸರ್ಕಾರಿ ನೌಕರರ ಬಳಿ ಹೋಗಿ ಹೆದರಿಸಿ, ಹಣವನ್ನು ಪಡೆದುಕೊಂಡು ಬರುತ್ತಿದ್ದಾಗಿ, ತನಿಖಾ ಸಮಯದಲ್ಲಿ ಕಂಡು ಬಂದಿರುತ್ತದೆ. ಲೋಕಾಯುಕ್ತ ಡಿವೈಎಸ್‌ಪಿ ಎಂದು ಕರೆ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯು ತಲೆ ಮಾರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿರುತ್ತದೆ.
ಇದನ್ನೂ ಓದಿ: ಜಾತಿ ತಾರತಮ್ಯದ ವಿರುದ್ಧ ಕಾನೂನು ರೂಪಿಸಿದ ಕ್ಯಾಲಿಫೋರ್ನಿಯಾ; ಕರಾಳ ದಿನವೆಂದ ಅಮೆರಿಕಾ ಹಿಂದೂ ಒಕ್ಕೂಟ!
ಈ ಯಶಸ್ವಿ ಕಾರ್ಯಚರಣೆಯನ್ನು ಶ್ರೀನಿವಾಸಗೌಡ ಆರ್, ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ಅವರ ಮಾರ್ಗದರ್ಶನದಲ್ಲಿ ಸಿ.ಬಾಲಕೃಷ್ಣ, ಸಹಾಯಕ ಪೊಲೀಸ್ ಆಯುಕ್ತರು, ಕಬ್ಬನ್ ಪಾರ್ಕ್ ಉಪ ವಿಭಾಗ ರವರ ನೇತೃತ್ವದಲ್ಲಿ ಎಸ್.ಪಿ.ಕುಮಾರಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿರವರ ತಂಡ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತದೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.