ಬಕ್ರೀದ್ ಆಚರಣೆ ವೇಳೆ ವಿದ್ಯಾರ್ಥಿಗಳು ಟೋಪಿ ಧರಿಸಿ ನೃತ್ಯ: ಶಾಲಾ ಮುಖ್ಯೋಪಾಧ್ಯಾಯರ ವಜಾ
ಕಛ್: ಬಿಜೆಪಿ ಆಡಳಿತಾರೂಢ ಗುಜರಾತ್ ರಾಜ್ಯದ ಕಛ್ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಬಕ್ರೀದ್ ಆಚರಿಸಲು ಸಣ್ಣ ಪ್ರಮಾಣದ ಹಬ್ಬವನ್ನು ನಡೆಸಲಾಯಿತು. ಈ ಸಮಾರಂಭದಲ್ಲಿ ಮುಸ್ಲಿಂ ವಿದ್ಯಾರ್ಥಿಗಳೊಂದಿಗೆ ಇತರ ವಿದ್ಯಾರ್ಥಿಗಳು ಟೋಪಿ ಧರಿಸಿ ನೃತ್ಯ ಮಾಡಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಉತ್ತಮ ಧಾರ್ಮಿಕ ಸೌಹಾರ್ದತೆಗೆ ಉದಾಹರಣೆ ಎಂದು ಪ್ರಶಂಸೆ ವ್ಯಕ್ತವಾಗಿತ್ತು.
ಆದರೆ ಗುಜರಾತ್‌ನಲ್ಲಿ 23 ವರ್ಷಗಳಿಂದ ಧಾರ್ಮಿಕ ದ್ವೇಷದ ಆಧಾರದ ಮೇಲೆ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಇದನ್ನು ಸಹಿಸಲಾಗದೆ ಶಾಲೆಯವರು ಬಕ್ರೀದ್ ಆಚರಣೆ ಮಾಡಿ ಮುಸ್ಲಿಮೇತರ ವಿದ್ಯಾರ್ಥಿಗಳನ್ನು ‘ಟೋಪಿ’ ಧರಿಸುವಂತೆ ಮಾಡಿದ್ದು ಘೋರ ಅಪರಾಧವೆಂದು ಹೇಳಿ, ಆ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಜಿಲ್ಲಾ ಪ್ರಧಾನ ಶಿಕ್ಷಣಾಧಿಕಾರಿ ಸಂಜಯ್ ಪರ್ಮಾರ್ ಮೂಲಕ ವಜಾಗೊಳಿಸಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕಛ್ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ಸಂಜಯ್ ಪರ್ಮಾರ್, ‘ಮುಸ್ಲಿಮರು ಧರಿಸುವ ‘ಇಸ್ಲಾಮಿಕ್ ಟೋಪಿ’ ಧರಿಸಲು ಹಿಂದೂ ವಿದ್ಯಾರ್ಥಿಗಳಿಗೆ ಹೇಳುವುದು ಕೀಳು ಮಟ್ಟದ ಕೃತ್ಯ’ ಎಂದು ಮುಂದೇನು ಹೇಳದೆ ಸುದ್ದಿಗಾರರಿಂದ ಜಾರಿಕೊಂಡರು.