ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Washing Machine Archives » Dynamic Leader
October 23, 2024
Home Posts tagged Washing Machine
ಲೇಖನ

ಡಿ.ಸಿ.ಪ್ರಕಾಶ್ ಸಂಪಾದಕರು

‘ಮೋದಿ ಕುಟುಂಬ, ಮೋದಿ ಕುಟುಂಬ’ ಎಂಬ ಘೋಷವಾಕ್ಯವನ್ನು ಮೋದಿ ಹೊರತುಪಡಿಸಿ ಉಳಿದೆಲ್ಲ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮೋದಿಯವರ ಕುಟುಂಬದಲ್ಲಿ ಭ್ರಷ್ಟರನ್ನು ಮುಕ್ತಗೊಳಿಸುವುದು ಬಹಿರಂಗವಾದಂತೆ ಇದೀಗ ಲೈಂಗಿಕ ದೌರ್ಜನ್ಯ ಎಸಗಿದ ದುಷ್ಕರ್ಮಿಗಳು ಕೂಡಾ ಸ್ವಚ್ಛಂದವಾಗಿ ಓಡಾಡುತ್ತಿರುವುದು ಬಹಿರಂಗವಾಗಿದೆ! ಬಿಜೆಪಿ ಕೇವಲ ಪಕ್ಷಮಾತ್ರವಲ್ಲ, ಅಪರಾಧಗಳನ್ನು ತೊಳೆಯುವ (Washing Machine) ಯಂತ್ರವೂ ಹೌದು ಎಂದು ಕಾಂಗ್ರೆಸ್ ವ್ಯಂಗ್ಯವಾಡುತ್ತಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಜಿಂದಾಲ್, ಸುವೇಂದು ಅಧಿಕಾರಿ ಮುಂತಾದ ಅಸಂಖ್ಯಾತರ ಮೇಲಿದ್ದ ಅಪರಾಧಗಳನ್ನು ಬಿಜೆಪಿ ಹೇಗೆ ತೆಗೆದುಹಾಕಿತು ಎಂಬುದನ್ನು ಇಂಡಿಯನ್ ಎಕ್ಸ್‌ಪ್ರೆಸ್ (Indian Express) ಗ್ರೂಪ್‌ನ ಮಾಹಿತಿ ದೃಢಪಡಿಸಿದೆ. ಅದರಲ್ಲಿ, ವಿರೋಧ ಪಕ್ಷದಿಂದ ಬಿಜೆಪಿಗೆ ಬಲವಂತವಾಗಿ ಎಳೆದ 25 ಜನರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ 3 ಪ್ರಕರಣಗಳನ್ನು ಶಿಕ್ಷೆಯಿಲ್ಲದೆ ಮುಚ್ಚಲಾಯಿತು ಮತ್ತು 20 ಪ್ರಕರಣಗಳನ್ನು ಕೇಂದ್ರ ಬಿಜೆಪಿ ಸರ್ಕಾರವು ಸ್ಥಗಿತಗೊಳಿಸಿದೆ ಎಂದು ಸ್ಪಷ್ಟಪಡಿಸಿದೆ.

ಈ ಹಿನ್ನಲೆಯಲ್ಲಿ, ಬಿಜೆಪಿ ಅಭ್ಯರ್ಥಿಗಳು, ಎನ್‌ಡಿಎ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹಾಗೂ ಕೇಂದ್ರ ಬಿಜೆಪಿಯಿಂದ ನೇಮಕಗೊಂಡಿರುವ ರಾಜ್ಯಪಾಲರ ದೌರ್ಜನ್ಯಗಳಿಂದ ಬಿಜೆಪಿ ಭ್ರಷ್ಟಾಚಾರ ಮಾತ್ರವಲ್ಲ ಲೈಂಗಿಕ ಅಪರಾಧಿಗಳ ಡೇರೆಯೂ ಆಗಿದೆ ಎಂಬ ಮಾಹಿತಿ ಬಯಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ವಿಷಯ ತಿಳಿದಿದ್ದರೂ ಮೋದಿ ಅವರ ಪರ ಮತ ಸಂಗ್ರಹಿಸಿದರು.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬ್ರಿಜ್ ಭೂಷಣ್ ಪುತ್ರ ಕರಣ್ ಭೂಷಣ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಕರಣ್ ಭೂಷಣ್ ಮಾತ್ರವಲ್ಲ, ಬಿಜೆಪಿಯ ಸುಮಾರು 44 ಹಾಲಿ ಸಂಸದರ ಮೇಲೂ ಮಹಿಳೆಯರ ವಿರುದ್ಧ ಪ್ರಕರಣಗಳಿವೆ.

ಬಿಜೆಪಿ ಕಾರ್ಯಕಾರಿಣಿಗಳಷ್ಟೇ ಅಲ್ಲ, ಕೇಂದ್ರ ಬಿಜೆಪಿ ಸರ್ಕಾರದಿಂದ ನಾಮನಿರ್ದೇಶನಗೊಂಡ ರಾಜ್ಯಪಾಲರುಗಳು ಕೂಡ ಲೈಂಗಿಕ ಅಪರಾಧಿಗಳಾಗಿದ್ದಾರೆ ಎಂಬುದಕ್ಕೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ರಾಜಭವನದ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೇ ಸಾಕ್ಷಿಯಾಗಿದೆ. ಈ ಹಿನ್ನಲೆಯಲ್ಲಿ, ಬಿಜೆಪಿಯಿಂದ ಲೈಂಗಿಕ ವ್ಯಸನಿಗಳು ಅಧಿಕಾರದಲ್ಲಿದ್ದರೆ, ದೇಶದಲ್ಲೂ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಾಗುತ್ತವೆ ಎಂಬ ಅಂಶಕ್ಕೆ ಅನುಗುಣವಾಗಿ,

2022ರ ರಾಷ್ಟ್ರೀಯ ಅಪರಾಧ ಸೂಚ್ಯಂಕದ ಪ್ರಕಾರ, *2014ಕ್ಕೆ ಹೋಲಿಸಿದರೆ 2022ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಸುಮಾರು 31%ರಷ್ಟು ಹೆಚ್ಚಾಗಿದೆ. ಅಂದರೆ 2022ರಲ್ಲಿ ಕೇಂದ್ರ ಸಚಿವಾಲಯದ ಮಾಹಿತಿ ಪ್ರಕಾರ ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದಂತೆ 4,45,256 ಪ್ರಕರಣಗಳು ದಾಖಲಾಗಿವೆ* ಎಂದು ತಿಳಿದು ಬಂದಿದೆ.

ಆದಾಗ್ಯೂ, ಇದನ್ನೆಲ್ಲ ನೋಡುತ್ತಿರುವ ಮೋದಿಯವರು ಇಂಥದ್ದೇನೂ ಆಗದಂತೆ ಮೌನವಾಗಿ ಇದ್ದಾರೆ. ಆದರೆ, ಅವರು ಮೌನ ಮುರಿಯುತ್ತಿರುವುದು ಕೇವಲ ಮುಸ್ಲಿಮರನ್ನು ದೂಷಿಸಲು ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಹೊರಿಸಲು ಮಾತ್ರವೇ. ಇದು ಪ್ರಜಾಪ್ರಭುತ್ವಕ್ಕೆ ಮತ್ತೊಂದು ಅಪಾಯವಾಗಿದೆ.

ಈ ಹಿನ್ನಲೆಯಲ್ಲಿ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿರುವ ಬಿಜೆಪಿಗೆ ಅಪಾಯ ಎಂಬಂತೆ ‘ಇಂಡಿಯಾ’ ಮೈತ್ರಿಕೂಟ ಬಲಗೊಳ್ಳುತ್ತಿರುವುದು ಬಿಜೆಪಿಗೆ ಭಾರೀ ಹಿನ್ನಡೆ ತಂದಿದೆ. ಹೀಗಾಗಿ, ಅತಾಶೆಯಲ್ಲಿರುವ ಬಿಜೆಪಿ ಸೋಲಿನ ಭಯದಿಂದ, ನಾವು ಏನು ಮಾತನಾಡುತ್ತಿದ್ದೇವೆ ಎಂದು ತಿಳಿಯದೆ, ನಾವು ಯಾವ ರೀತಿಯ ಪೋಸ್ಟ್ ಮಾಡುತ್ತಿದ್ದೇವೆ ಎಂದು ಅರ್ಥೈಸಿಕೊಳ್ಳದೇ

ಮುಸ್ಲಿಮರನ್ನು ಶತ್ರುಗಳಂತೆ ಕಾಣುವ ಆರೆಸ್ಸೆಸ್-ಬಿಜೆಪಿ ಧಾರ್ಮಿಕ ಭಿನ್ನಾಭಿಪ್ರಾಯ ಸೃಷ್ಟಿಸುವ ದ್ವೇಷಪೂರಿತ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಹಾಕುವುದು, ಮತ ಕಳೆದುಕೊಳ್ಳುವ ಭೀತಿಯಿಂದ ಮತ್ತೆ ಪೋಸ್ಟ್‌ಗಳನ್ನು ಅಳಿಸಿ ಹಾಕುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ 400 ಸೀಟು ವಶಪಡಿಸಿಕೊಳ್ಳುವ ಬಿಜೆಪಿಯ ಹಿಂದಿನ ಘೋಷಣೆ ಮಾಯವಾಗಿದೆ.