ಗಿರೀಶ್ ಕುಮಾರ್, ಯಾದಗಿರಿ
ಯಾದಗಿರಿ: ತುಂಡರಿಸಿ ಬಿದ್ದ ವಿದ್ಯುತ್ ಹೈಟೆನ್ಷನ್ ವೈಯರ್ ತಗುಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಯಾದಗಿರಿಯ ಮಾತಾಮಣಿಕೇಶ್ವರ ನಗರದಲ್ಲಿ ನಡೆದಿದೆ.
ವಡಗೇರಾ ತಾಲೂಕಿನ ಬಬಲಾದ ಗ್ರಾಮದ ನಿವಾಸಿ ಕಾಜಾ ಪಟೇಲ್ (23) ಯಾದಗಿರಿಯ ಮಾತಾಮಣಿಕೇಶ್ವರ ನಗರದಲ್ಲಿ ಸಹೋದರಿ ಮನೆಗೆ ಬಂದಿದ್ದು, ವಾಪಸು ಹೋಗುತ್ತಿರುವ ವೇಳೆ ತುಂಡರಿಸಿ ಬಿದ್ದಿದ್ದ ಹೈಟೆನ್ಷನ್ ವೈಯರ್ ನೋಡದೇ ಬೈಕ್ ನಲ್ಲಿ ಹೋಗ್ತಿದ್ದಾಗ ತಗುಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.