• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ರಾಜಕೀಯ

ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಬಿಜೆಪಿಯಿಂದ ಮಾಜಿ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ?

by Dynamic Leader
05/04/2023
in ರಾಜಕೀಯ
0
0
SHARES
0
VIEWS
Share on FacebookShare on Twitter

ವಿಜಯಪುರ: (ಹಗರಬೊಮ್ಮನಳ್ಳಿ) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ರಣಕಹಳೆ ಊದಿದೆ. ಪ್ರಚಾರ ಜೋರಾಗಿಯೇ ನಡೆಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಎಎಪಿ ಹಾಗೂ ಗಾಲಿ ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸರ್ಕಾರಿ ನೌಕರರು ಅನೇಕರು ರಾಜಕಾರಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾದ ಲಕ್ಷ್ಮಿ ನಾರಾಯಣ ಬಿಜೆಪಿ ಸೇರಿದ್ದು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಲಕ್ಷ್ಮೀ ನಾರಾಯಣ ವಿಜಯನಗರದ ಬಿಜೆಪಿ ಕಚೇರಿಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. 2023ರ ಚುನಾವಣೆಯಲ್ಲಿ ಅವರು ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಲಕ್ಷ್ಮೀ ನಾರಾಯಣ ಹಲವು ದಿನಗಳಿಂದ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಸಂಘಟನೆ, ಕಾರ್ಯಕರ್ತರ ಭೇಟಿಯಲ್ಲಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೂಡಾ ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಿವೃತ್ತರಾದ ಬಳಿಕ ಅವರನ್ನು ವಿಶೇಷ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಬಿಬಿಎಂಪಿ ಆಯುಕ್ತರಾಗಿ, ಕರ್ನಾಟಕ ಗೃಹ ಮಂಡಳಿ, ಸಮಾಜ ಕಲ್ಯಾಣ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ.

ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಬಯಸಿರುವ ಇವರಿಗೆ, ಈ ಕ್ಷೇತ್ರದಲ್ಲಿ ಜಾತಿ ಕಾರ್ಡ್ ಪ್ಲೆಯಾಗದಿರುವುದು ವರದಾನವಾಗಿದ್ದು, ಹಲವು ಇಲಾಖೆಯಲ್ಲಿ ಕೆಸಲ ಮಾಡಿದ ಇವರು ಗೆದ್ದು ಬಂದರೆ ಕ್ಷೇತ್ರದ ಅಭಿವೃದ್ಧಿ ನಾಗಲೋಟಕ್ಕೆ ಸಾಗುವುದು ಎಂಬ ಅಭಿಪ್ರಾಯ ಕ್ಷೇತ್ರದ ಜನತೆಯದಾಗಿದೆ. ಹಾಗಾಂತ ಇಲ್ಲಿ ಟಿಕೆಟಿಗಾಗಿ ಬಿಜೆಪಿಯಲ್ಲಿ ಪೈಪೋಟಿ ಏರ್ಪಡದಿರುವುದು ಕೂಡ ಪಕ್ಷಕ್ಕೆ ವರದಾನವಾಗಲಿದೆ.

2018ರ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರಾದ ಭೀಮಾ ನಾಯ್ಕ್ ವಿರುದ್ಧ ಕೆ.ನೇಮಿರಾಜ್ ನಾಯಕ್ ಬಿಜೆಪಿ ಅಭ್ಯರ್ಥಿಯಾಗಿ 71105 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಳೆದೆರಡು ಬಾರಿ ಶಾಸಕರಾದ ಭೀಮಾ ನಾಯ್ಕ್ ರವರಿಗೆ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಹಾಲಿ ನಗರ ಸಭೆ ಸದಸ್ಯರ ವಿರೋಧವಿದೆ ಎಂದು ಹೇಳಲಾಗುತ್ತಿದ್ದು, ತಾವು ಖರೀದಿ ಮಾಡಿರುವ ಜಾಗದಲ್ಲಿ ಕುರುಬರಿಗೆ ಅನ್ಯಾಯವಾಗಿದೆ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಇಲ್ಲಿ ಜೆಡಿಎಸ್ ಕೂಡ ಪ್ರಬಲವಾಗಿ ಸ್ಪರ್ಧೆಯೊಡ್ಡಲಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇಲ್ಲಿ ಮೂರನೇ ಬಾರಿಗೆ ಆಯ್ಕೆಯಾಗುವ ಭೀಮಾ ನಾಯ್ಕ್ ರವರಿಗೆ ಬಿಜೆಪಿ ಕಬ್ಬಿಣದ ಕಡಲೆಕಾಯಿಯಾಗುವುದಂತೂ ಅಲ್ಲಗಳೆಯುವಂತಿಲ್ಲ.

Tags: BJpBS YediyurappaHagari BommanahalliKarnataka Assembly Election 2023Karnataka BJPM.Lakshmi Narayana IASMinister Anand SinghVijayapuraಎಂ.ಲಕ್ಷ್ಮೀ ನಾರಾಯಣಕರ್ನಾಟಕ ಬಿಜೆಪಿಕರ್ನಾಟಕ ವಿಧಾನಸಭೆ ಚುನಾವಣೆ 2023ಬಿ.ಎಸ್.ಯಡಿಯೂರಪ್ಪಬಿಜೆಪಿವಿಜಯಪುರಸಚಿವ ಆನಂದ್ ಸಿಂಗ್ಹಗರಿಬೊಮ್ಮನಹಳ್ಳಿ
Previous Post

ಕರ್ನಾಟಕ ರಾಜ್ಯದ ಗಡಿ ಒಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ಮಹಾರಾಷ್ಟ್ರ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಗರಂ!

Next Post

WhatsApp ಸಂಪೂರ್ಣ ಬದಲಾಗಲಿದೆ; ನವೀಕರಣ ಏನೆಂಬುದು ನಿಮಗೆ ತಿಳಿದಿದೆಯೇ?

Dynamic Leader

Next Post

WhatsApp ಸಂಪೂರ್ಣ ಬದಲಾಗಲಿದೆ; ನವೀಕರಣ ಏನೆಂಬುದು ನಿಮಗೆ ತಿಳಿದಿದೆಯೇ?

Stay Connected test

  • 23.9k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
ಚಂದ್ರಬಾಬು ನಾಯ್ಡು

ಚಲಾವಣೆಯಲ್ಲಿರುವ 500 ರೂಪಾಯಿ ನೋಟುಗಳನ್ನು ಹಿಂಪಡೆಯಬೇಕು: ಚಂದ್ರಬಾಬು ನಾಯ್ಡು ಒತ್ತಾಯ!

28/05/2025

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

12/04/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
ಕನ್ನಡ ನಟ ಶಿವರಾಜ್ಕುಮಾರ್ ಅವರನ್ನು ನೋಡಿ, 'ನಿಮ್ಮ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ' ಎಂದು ಹೇಳಿದ್ದು, ಇದು ಭಾರಿ ವಿವಾದಕ್ಕೆ ಕಾರಣವಾಯಿತು.

ಥಗ್ ಲೈಫ್ – ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್!

13/06/2025
ಥೈಲ್ಯಾಂಡ್ನಿಂದ ಭಾರತಕ್ಕೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ನಂತರ ತುರ್ತು ಭೂಸ್ಪರ್ಶ ಮಾಡಲಾಯಿತು.

ದೆಹಲಿಗೆ ಬಂದಿಳಿದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಲ್ಯಾಂಡಿಂಗ್!

13/06/2025
ನಾಡಿನ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಜಾರಿಗೆ ತಂದ ಶಕ್ತಿ ಯೋಜನೆಯು ಯಶಸ್ವಿಯಾಗಿ 2 ವರುಷ ಪೂರೈಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಕ್ತಿ ಯೋಜನೆಯು ಯಶಸ್ವಿಯಾಗಿ 2 ವರುಷ ಪೂರೈಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

12/06/2025
ನನ್ನನ್ನು ಎರಡು ದೆವ್ವಗಳು ಕರೆಯುತ್ತಿವೆ, ನಾನು ಅದರೊಂದಿಗೆ ಹೋಗುತ್ತಿದ್ದೇನೆ" ಎಂದು ಡೆತ್ನೋಟ್ನಲ್ಲಿ ಬರೆಯಲಾಗಿದೆ.

“ದೆವ್ವಗಳು ಕರೆಯುತ್ತಿವೆ, ನಾನು ಹೋಗುತ್ತಿದ್ದೇನೆ” – ಪತ್ರ ಬರೆದಿಟ್ಟು ಯುವಕ ಆತ್ಮಹತ್ಯೆ?

12/06/2025

Recent News

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಕನ್ನಡ ನಟ ಶಿವರಾಜ್ಕುಮಾರ್ ಅವರನ್ನು ನೋಡಿ, 'ನಿಮ್ಮ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ' ಎಂದು ಹೇಳಿದ್ದು, ಇದು ಭಾರಿ ವಿವಾದಕ್ಕೆ ಕಾರಣವಾಯಿತು.

ಥಗ್ ಲೈಫ್ – ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್!

13/06/2025
ಥೈಲ್ಯಾಂಡ್ನಿಂದ ಭಾರತಕ್ಕೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ನಂತರ ತುರ್ತು ಭೂಸ್ಪರ್ಶ ಮಾಡಲಾಯಿತು.

ದೆಹಲಿಗೆ ಬಂದಿಳಿದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಲ್ಯಾಂಡಿಂಗ್!

13/06/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS