ನರೇಂದ್ರ ಮೋದಿಯ ಅಂಧ ಭಕ್ತೆಯ ಸಾಹಸವನ್ನು ನೋಡಿರೋ! ಇದಕ್ಕೆ ಪೊಲೀಸ್ ಕ್ರಮವಿದೆಯೇ? » Dynamic Leader
October 31, 2024
ರಾಜ್ಯ

ನರೇಂದ್ರ ಮೋದಿಯ ಅಂಧ ಭಕ್ತೆಯ ಸಾಹಸವನ್ನು ನೋಡಿರೋ! ಇದಕ್ಕೆ ಪೊಲೀಸ್ ಕ್ರಮವಿದೆಯೇ?

ಶೋಭಿತಾ ಎಂಬ ಯುವತಿ, ಪ್ರಧಾನಿ ನರೇಂದ್ರ ಮೋದಿಯ ಚಿತ್ರವನ್ನು ತನ್ನ ಬೆನ್ನ ಹಿಂದೆ ಟಾಟೂ ಹಾಕಿಸಿಕೊಂಡ ಅರೆನಗ್ನ ಚಿತ್ರವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು, “ಮೋದಿನ ಬೈದ್ರೆ ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಾಗುತ್ತೇ ಅಂದ್ರೆ ಬೈರಿ, ಮಳೆ ಜಾಸ್ತಿ ಆದ್ರೆ ಜನ ಆಕಾಶನ ಬೈತಾರೆ, ನೋವು ಬಂದ್ರೆ ದೇವರನ್ನ ದೂಷಿಸುತ್ತಾರೆ, ಕೆಲಸದಲ್ಲಿ ವಿಫಲವಾದರೆ ವಿಧಿನ ನಿಂದಿಸ್ತಾರೆ, ಆಸ್ತಿ ಕಡಿಮೆ ನೀಡಿದ್ರ ತಂದೆ ತಾಯಿಗಳನ್ನು ನಿಂದಿಸುಸ್ತಾರೆ. ಮೋದಿಯನ್ನು ನಂಬಿ ಅಷ್ಟೆ ಸಾಕು. ಸುಳ್ಳು ಪ್ರಚಾರಗಳನ್ನು ನಂಬಬೇಡಿ” ಎಂದು ಟ್ವೀಟ್ ಮಾಡಿದ್ದಾಳೆ. ಇದು ವೈರಲ್ ಆಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯ ಮೇಲೆ ನಾಡಿನ ಪ್ರತಿಯೊಬ್ಬರಿಗೂ ಪ್ರೀತಿ, ಗೌರವ, ಅಭಿಮಾನ ಎಲ್ಲವೂ ಇರುತ್ತದೆ. ಆದರೆ, ರಾಜಕೀಯ ಸನ್ನಿವೇಶಗಳು ಬೇರೆ ಬೇರೆಯದಾಗಿರುತ್ತದೆ; ಅಷ್ಟೇ. ಪ್ರಧಾನಿ ನರೇಂದ್ರ ಮೋದಿಯ ಮೇಲೆ ಅಭಿಮಾನ ತೋರಿಸುವುದು ತಪ್ಪಲ್ಲ. ಅದು ಅತಿಯಾಗಬಾರದು. ನಿನ್ನ ಅರೆನಗ್ನ ಪೋಟೋವನ್ನು ನೋಡಿದರೆ ಪ್ರಧಾನಿ ಮೆಚ್ಚುತ್ತಾರೆಯೇ? ಖಂಡಿತ ಇಲ್ಲ. ಇದು ಅವರಿಗೆ ಮಾಡಿದ ಅಪಮಾನ. ನಿನ್ನ ಮೇಲೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದು ಫಾರಿನ್ ಅಲ್ಲ. ಇದು ನಮ್ಮ ಸಂಸ್ಕೃತಿಯೂ ಅಲ್ಲ. ಈ ಪೋಟೋವನ್ನು ನೋಡಿ ನಿಮ್ಮ ತಾಯಿ-ತಂದೆ, ಅಣ್ಣ-ತಮ್ಮಂದಿರಾದರೂ ಮೆಚ್ಚುತ್ತಾರೆಯೇ ಹೇಳು?

ನಿನ್ನ ಅರೆನಗ್ನ ಚಿತ್ರವನ್ನು ಹಾಕಿ ಸುದ್ದಿ ಮಾಡಬೇಕೆಂಬುದು ನಮ್ಮ ಉದ್ದೇಶವಿಲ್ಲ. ಹೆಣ್ಣು ಮಕ್ಕಳನ್ನು ಹಿಯ್ಯಾಳಿಸಿ ನಮಗೆ ಅಭ್ಯಾಸವೂ ಇಲ್ಲ. ಆದರೆ ಇಂತಹ ಅಸಹ್ಯಕರವಾದ ಕೆಲಸವನ್ನು ಮತ್ತೊಮ್ಮೆ ಯಾವ ಮಹಿಳೆಯೂ ಮಾಡಬಾರದು ಎಂಬುದಕ್ಕಾಗಿ ಇದನ್ನು ಸುದ್ದಿ ಮಾಡುತ್ತಿದ್ದೇವೆ. ಬಿಜೆಪಿಯ ಮುಖಂಡರು ಇದನ್ನು ಖಂಡಿಸಬೇಕು. ಇಲ್ಲವೇ ಪ್ರಧಾನಿ ನರೇಂದ್ರ ಮೋದಿಗೆ ಅಪಮಾನ ಮಾಡಿದ ಯುವತಿಯ ಮೇಲೆ ಹಾಗೂ ಟಾಟೂ ಹಾಕಿಸಿದವರ ಮೇಲೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದೇ ನಮ್ಮ ಮನವಿ.

     

Related Posts