ಚೀನಾಗೆ ಸಹಾಯ ಮಾಡವ ಕೇರಳ ಸರ್ಕಾರ: ಭಗವಂತ್ ಖೂಬಾ ಆರೋಪ!
ಪಾಲಕ್ಕಾಡ್: ಭಾರತದ ಶತ್ರು ಚೀನಾ ದೇಶಕ್ಕೆ ಆರ್ಥಿಕ ಅವಕಾಶವನ್ನು ಒದಗಿಸುವುದು ಕೇರಳ ಸರ್ಕಾರದ ನೀತಿಯಾಗಿದೆ. ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬ ಆರೋಪಿಸಿದ್ದಾರೆ.
ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಆಡಳಿತ ನಡೆಯುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರದ ಒಂಬತ್ತನೇ ವಾರ್ಷಿಕೋತ್ಸವದ ಅಂಗವಾಗಿ. ನಿನ್ನೆ ಕೇರಳದ ಪಾಲಕ್ಕಾಡ್‌ಗೆ ಬಂದಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬ ಸಭೆಯನ್ನು ಉದ್ದೇಶಿಸಿ ಮಾತನಾಡಿದರು:
“ಕೇರಳ ರಾಜ್ಯ ಸರ್ಕಾರದ ‘ಕೆ-ಪೋನ್’ ಎಂಬ ಹೈಸ್ಪೀಡ್ ಇಂಟರ್ನೆಟ್ ಸೇವಾ ಯೋಜನೆಗಾಗಿ, ಚೀನಾದಿಂದ ಕೇಬಲ್ ಖರೀದಿಸಿದ್ದಾರೆ. ನಮ್ಮ ದೇಶದಲ್ಲಿ ಸಿಗುವುದಕ್ಕಿಂತ ಐದಾರು ಪಟ್ಟು ಹೆಚ್ಚು ಬೆಲೆ ಕೊಟ್ಟು ಅದನ್ನು ಖರೀದಿಸಿದ್ದಾರೆ.
ಸ್ವಾವಲಂಬಿ ಭಾರತದ ಪರಿಕಲ್ಪನೆಯೊಂದಿಗೆ ಪ್ರಧಾನಿ ಮುನ್ನಡೆಯುತ್ತಿರುವಾಗ, ಕೇರಳ ಸರ್ಕಾರ ಚೀನಾ ದೇಶಕ್ಕೆ ಸಹಾಯ ಮಾಡುತ್ತಿದೆ.
ನರೇಂದ್ರ ಮೋದಿ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ, ಭಾರತವು ವಿಶ್ವದ ಅಗ್ರ ಐದು ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ” ಎಂದು ಹೇಳಿದರು.