ಧರ್ಮದ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್!
ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸನಾತನ ಧರ್ಮವನ್ನು ಎತ್ತಿ ಹಿಡಿಯುವ ಸಮಯ ಬಂದಿದೆ. ಸತತ ಆಕ್ರಮಣಗಳಿಂದ ಉತ್ತರ ಭಾರತದಲ್ಲಿ ವೈದಿಕ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂದು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ.
ವೇದಗಳು ಜ್ಞಾನದ ಸಂಪತ್ತನ್ನು ಒಳಗೊಂಡಿವೆ. ಧರ್ಮದ ಜ್ಞಾನವನ್ನು ಜಗತ್ತಿಗೆ ತಿಳಿಸಬೇಕು. ಸತ್ಯವೇ ಧರ್ಮದ ಆಧಾರ. ಇಂದು ಇಡೀ ಜಗತ್ತು ವೇದಗಳ ಬಗ್ಗೆ ಯೋಚಿಸುತ್ತಿದೆ.
ನಮ್ಮ ಆಧ್ಯಾತ್ಮಿಕತೆಯನ್ನು ರಕ್ಷಿಸಲು ನಾವು ಕೆಲಸ ಮಾಡಬೇಕು. ದೇಶ ಪ್ರಗತಿಯಲ್ಲಿದೆ. ಧರ್ಮದ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ದೇವಾಲಯಗಳನ್ನು ರಕ್ಷಿಸುವ ಮತ್ತು ಧಾರ್ಮಿಕ ಸಂಸ್ಥೆಗಳ ಮೂಲಕ ಧರ್ಮ ಪ್ರಚಾರ ಮಾಡುವ ಅಗತ್ಯವಿದೆ. ಎಂದು ಹೇಳಿದರು.