ಗುಜರಾತ್‌ನಲ್ಲಿ ನವರಾತ್ರಿ ಆಚರಣೆ: 24 ಗಂಟೆಗಳಲ್ಲಿ ಗರ್ಬಾ ನೃತ್ಯ ಮಾಡಿದ 10 ಮಂದಿ ಹೃದಯಾಘಾತದಿಂದ ಸಾವು! » Dynamic Leader
November 21, 2024
ದೇಶ

ಗುಜರಾತ್‌ನಲ್ಲಿ ನವರಾತ್ರಿ ಆಚರಣೆ: 24 ಗಂಟೆಗಳಲ್ಲಿ ಗರ್ಬಾ ನೃತ್ಯ ಮಾಡಿದ 10 ಮಂದಿ ಹೃದಯಾಘಾತದಿಂದ ಸಾವು!

ಅಹಮದಾಬಾದ್: ನವರಾತ್ರಿ ಉತ್ಸವದ ಸಮಯದಲ್ಲಿ ದೈವತ್ವದ ಸ್ತ್ರೀ ರೂಪವಾದ ದುರ್ಗಾ ದೇವಿಯನ್ನು ಕೇಂದ್ರೀಕ್ರಿಸಿ, 9 ಶಕ್ತಿ  ರೂಪದ ದೇವತೆಗಳನ್ನು ಆರಾಧಿಸುವ ಸಲುವಾಗಿ ಗರ್ಬಾ ಹಾಡುಗಳನ್ನು ಹಾಡಲಾಗುತ್ತದೆ. ಗಾರ್ಬಾ ನೃತ್ಯವನ್ನು ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಪುರುಷರು ಮತ್ತು ಮಹಿಳೆಯರು ಮುಂಜಾನೆ ತನಕ ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡುತ್ತಾರೆ.

ಈ ಹಿನ್ನಲೆಯಲ್ಲಿ ಗುಜರಾತ್‌ನಲ್ಲಿ ನವರಾತ್ರಿ ಆಚರಣೆ ವೇಳೆ ಕಳೆದ 24 ಗಂಟೆಗಳಲ್ಲಿ ಗರ್ಬಾ ನೃತ್ಯ ಮಾಡಿದ 10 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಯುವಕರು ಮತ್ತು ಮಧ್ಯವಯಸ್ಕರು ಎಂದು ವೈದ್ಯರು ಹೇಳಿದ್ದಾರೆ. ಬರೋಡಾದ 13 ವರ್ಷದ ಬಾಲಕ ಗರ್ಬಾ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಅದೇ ರೀತಿ ಅಹಮದಾಬಾದ್‌ನ 24 ವರ್ಷದ ಯುವಕ ಕೂಡ ಗರ್ಬಾ ನೃತ್ಯ ಮಾಡುವಾಗ ಸಾವನ್ನಪ್ಪಿದ್ದಾನೆ. ಅದೇ ರೀತಿ ಗುಜರಾತ್‌ನಲ್ಲಿ ಇನ್ನೂ 8 ಸಾವುಗಳು ವರದಿಯಾಗಿವೆ.

ಇದನ್ನೂ ಓದಿ: ಡೋಂಗೀ ಸಮಾಜವಾದಿ, ಪುಲ್ ಟೈಂ ಮೀರುಸಾದಿಕವಾದಿಗೆ ವೆಸ್ಟ್ ಎಂಡ್ ಸೋಂಕು ಮತ್ತೆ ತಗುಲಿದೆ!

ನವರಾತ್ರಿಯ ಮೊದಲ 6 ದಿನಗಳಲ್ಲಿ ಗರ್ಬಾ ನೃತ್ಯ ಪ್ರದರ್ಶಿಸಿದ 609 ಮಂದಿಗೆ ಉಸಿರುಗಟ್ಟಿದೆ. ಅದೇ ರೀತಿ ಸಂಜೆ 6 ರಿಂದ ಬೆಳಗಿನ ಜಾವ 2 ರವರೆಗೆ 108 ಆ್ಯಂಬುಲೆನ್ಸ್‌ಗೆ ಹೃದಯಾಘಾತಕ್ಕೆ ಸಂಬಂಧಿಸಿದಂತೆ 521 ಕರೆಗಳು ಬಂದಿವೆ. ಅದರಂತೆ, ಗರ್ಬಾ ನೃತ್ಯ ನಡೆಯುವ ಸ್ಥಳಗಳ ಸಮೀಪದ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಿದ್ಧವಾಗಿರಬೇಕು ಎಂದು ಗುಜರಾತ್ ಸರ್ಕಾರ ಸೂಚನೆ ನೀಡಿದೆ.

ಅಲ್ಲದೆ, ಗಾರ್ಬಾ ನೃತ್ಯ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಲ್ಲಿಸುವ ಮೂಲಕ ಗರ್ಬಾ ಸಂಘಟಕರು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೊರೋನಾ ನಂತರ ವಿವಿಧ ಘಟನೆಗಳಲ್ಲಿ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕಕಾರಿಯಾಗಿದೆ.

Related Posts