ಕನಕಪುರ ತಾಲೂಕನ್ನು ಬೆಂಗಳೂರು ನಗರದೊಂದಿಗೆ ಸೇರಿಸಲು ಡಿ.ಕೆ.ಶಿವಕುಮಾರ್ ಭರವಸೆ! » Dynamic Leader
October 31, 2024
ಬೆಂಗಳೂರು ರಾಜಕೀಯ

ಕನಕಪುರ ತಾಲೂಕನ್ನು ಬೆಂಗಳೂರು ನಗರದೊಂದಿಗೆ ಸೇರಿಸಲು ಡಿ.ಕೆ.ಶಿವಕುಮಾರ್ ಭರವಸೆ!

ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರದ ಶಿವನಹಳ್ಳಿಯ ವೀರಭದ್ರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಭೂಮಿ ಪೂಜೆ ಮತ್ತು ಶಿಲಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಿಮ್ಮ ಆಸ್ತಿಗಳನ್ನ ಹೆಚ್ಚು ಮಾಡುವ ಶಕ್ತಿಯನ್ನು ಭಗವಂತ ನನಗೆ ಕೊಟ್ಟಿದ್ದಾನೆ. ಯಾರು ಸಹ ನಿಮ್ಮ ಆಸ್ತಿಗಳನ್ನು ಮಾರಿಕೊಳ್ಳಬೇಡಿ. ನಾವು ಬೆಂಗಳೂರು ಗ್ರಾಮಾಂತರ ಅಲ್ಲ… ರಾಮನಗರ ಅಲ್ಲ… ಬೆಂಗಳೂರು ನಗರದವರು ಎಂದು ಹೇಳುವ ಮೂಲಕ ಕನಕಪುರ ತಾಲೂಕನ್ನು ಬೆಂಗಳೂರು ನಗರದೊಂದಿಗೆ ಸೇರಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

ನಿಮ್ಮ ಜೋಬಿಗೆ ನಾನು ದುಡ್ಡು ಹಾಕಲು ಆಗೋದಿಲ್ಲ. ಪ್ರತಿಯೊಬ್ಬರಿಗೂ ಮನೆ ಕೊಡಿಸಲು ಆಗೋದಿಲ್ಲ. ಆದರೆ ನಿಮ್ಮ ಆಸ್ತಿಯ ಮೌಲ್ಯವು ಒಂದು ಇದ್ದರೆ ಅದನ್ನು 10ರಷ್ಟು ಹೆಚ್ಚು ಮಾಡಬಹುದು. ಅಷ್ಟು ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ಆ ಕೆಲಸವನ್ನು ನಾನು ಮಾಡಿದ್ದೇನೆ. ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನನ್ನಿಂದ ಏನೂ ಕೊಡಲು ಆಗೋದಿಲ್ಲ, ಆಸ್ತಿಯನ್ನು ಮಾತ್ರ ನೀಡಲು ಸಾಧ್ಯ ಎಂದರು.

ನೀವು ರಾಮನಗರದವರು ಅಲ್ಲ, ಬೆಂಗಳೂರು ಜಿಲ್ಲೆಯವರು; ಇದನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಳ್ಳಿ. ಸುಮ್ಮನೆ ನಮ್ಮನ್ನು ರಾಮನಗರ ಅಂತ ಹೇಳುವ ಮೂಲಕ ನಮ್ಮನ್ನು ಮೂಲೆ ಗುಂಪು ಮಾಡಿದ್ದಾರೆ. ಸುಮ್ಮನೆ ಯಾರೋ ಹೆಸರು ಮಾಡಿಕೊಳ್ಳಬೇಕು ಎಂಬುದಕ್ಕಾಗಿ ಇದನ್ನು ಮಾಡಿದ್ದಾರೆ. ದೇವಸ್ಥಾನದಲ್ಲಿ ನಿಂತು ಇದನ್ನು ಹೇಳುತ್ತಿದ್ದೇನೆ. ನಾನೇನು ಮಾಡಬೇಕೋ ಅದನ್ನು ಮಾಡ್ತೀನಿ, ಮುಂದಿನ ದಿನಗಳಲ್ಲಿ ಅಡಿಗಳಲ್ಲಿ ಇಲ್ಲಿ ಭೂಮಿ ವ್ಯವಹಾರ ನಡೆಯುತ್ತದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ: ತನ್ನ ನಿಲುವನ್ನು ಬದಲಿಸಿಕೊಂಡ ಚೀನಾ!

Related Posts