ಸುರಂಗದೊಳಗೆ ಸಿಲುಕಿದ್ದ 41 ಮಂದಿ ಜೀವಂತವಾಗಿದ್ದಾರೆ; ಬಿಸಿ ಬಿಸಿ ರವಾ ಕಿಚಡಿ ರವಾನೆ! » Dynamic Leader
October 21, 2024
ದೇಶ

ಸುರಂಗದೊಳಗೆ ಸಿಲುಕಿದ್ದ 41 ಮಂದಿ ಜೀವಂತವಾಗಿದ್ದಾರೆ; ಬಿಸಿ ಬಿಸಿ ರವಾ ಕಿಚಡಿ ರವಾನೆ!

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸುರಂಗ ಅಗೆಯುವ ವೇಳೆ ಸಿಲುಕಿದ್ದ 41 ಮಂದಿ ಜೀವಂತವಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂದು (ನ.21) ಅವರಿಗೆ ಟ್ಯೂಬ್ ಮೂಲಕ ಬಿಸಿ ಬಿಸಿ ರವಾ ಕಿಚಡಿಯನ್ನು ದ್ರವ ಆಹಾರವಾಗಿ ನೀಡಲಾಗಿದೆ. ಕಳೆದ 10 ದಿನಗಳಿಂದ ಕಾರ್ಮಿಕರ ಸ್ಥಿತಿ ತಿಳಿಯದ ಹಿನ್ನೆಲೆಯಲ್ಲಿ ಇದೀಗ ಉತ್ತಮ ಮಾಹಿತಿ ಸಿಕ್ಕಿದೆ.

ಈ ಸುದ್ದಿ ಕೇಳಿ ಕಾರ್ಮಿಕರ ಸಂಬಂಧಿಕರು ಸಂತಸಗೊಂಡಿದ್ದಾರೆ. “ಕಳೆದ ಒಂದು ವಾರದಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ” ಎಂದು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಬ್ರಹ್ಮಕಲ್ – ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ – ದಾಂಡಲ್‌ಗಾಂವ್ ನಡುವೆ ಪರ್ವತ ಸುರಂಗ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ.

ಕಳೆದ 12 ರಂದು ಕಾರ್ಮಿಕರು ಸುರಂಗ ಮಾರ್ಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಸುರಂಗದ ಮುಂಭಾಗ ಹಾಗೂ ಕಾರ್ಮಿಕರು ಕೆಲಸ ಮಾಡುತ್ತಿದ್ದ ಪ್ರದೇಶದ ನಡುವಿನ ಭಾಗ ಏಕಾಏಕಿ ಕುಸಿದು ಬಿದ್ದಿತ್ತು. ಇದರಲ್ಲಿ 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. ಒಂದು ವಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಒಳಗೆ ಸಿಲುಕಿರುವವರಿಗೆ ಅಗತ್ಯ ಆಹಾರ ಒದಗಿಸಲು 40 ಮೀಟರ್ ಪೈಪ್ ಲೈನ್ ಹಾಕಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಉನ್ನತ ಅಧಿಕಾರಿಗಳು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಸುರಂಗದೊಳಗೆ ಸಿಲುಕಿಕೊಂಡಿರುವ 41 ಮಂದಿ ಜೀವಂತವಾಗಿದ್ದಾರೆ; ಬಿಸಿ ಬಿಸಿ ರವಾ ಕಿಚಡಿ ರವಾನೆಯಾಗಿದೆ!

Related Posts