ಭಗವಾನ್ ರಾಮ ಬಹುಜನರ ರಾಜ... ಮಾಂಸಾಹಾರಿ - ಎನ್.ಸಿ.ಪಿ. ಶಾಸಕ ಜಿತೇಂದ್ರ ಅವದ್! » Dynamic Leader
October 31, 2024
ದೇಶ

ಭಗವಾನ್ ರಾಮ ಬಹುಜನರ ರಾಜ… ಮಾಂಸಾಹಾರಿ – ಎನ್.ಸಿ.ಪಿ. ಶಾಸಕ ಜಿತೇಂದ್ರ ಅವದ್!

14 ವರ್ಷಗಳಿಂದ ಕಾಡಿನಲ್ಲಿ ವಾಸಿಸುವ ವ್ಯಕ್ತಿ ಸಸ್ಯಾಹಾರಿಯಾಗಲು ಹೇಗೆ ಸಾಧ್ಯ? ಎಂದು ಜಿತೇಂದ್ರ ಅವದ್ ಪ್ರಶ್ನಿಸಿದ್ದಾರೆ!

ಭಗವಾನ್ ರಾಮನಿಂದ ಮಹಾವಿಕಾಸ್ ಅಗಾಡಿ (ಎಂವಿಎ) ಸರ್ಕಾರದವರೆಗೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡೂ ಬಣಗಳು ಬುಧವಾರ ಪರಸ್ಪರ ದೂಷಣೆಗೆ ತಿರುಗಿದವು. ವಿರೋಧ ಪಕ್ಷವಾದ ಎನ್‌ಸಿಪಿ ಶಾಸಕ ಜಿತೇಂದ್ರ ಅವದ್ ಅವರು ಶಿರಸಿಯಲ್ಲಿ ಪಕ್ಷದ ಅಧ್ಯಯನ ಶಿಬಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, “ಶ್ರೀರಾಮನು ಬಹುಜನರ ರಾಜ ಮತ್ತು ಮಾಂಸಾಹಾರಿ” ಎಂದು ಗದ್ದಲವನ್ನು ಸೃಷ್ಟಿಸಿದರು.

“ನಾವು ಇತಿಹಾಸವನ್ನು ಓದಿಬಿಟ್ಟು ರಾಜಕೀಯದಲ್ಲಿ ಎಲ್ಲವನ್ನೂ ಮರೆಯುವುದಿಲ್ಲ. ರಾಮ ನಮ್ಮವರು. ನಾವು ಬಹುಜನರು ಆಹಾರಕ್ಕಾಗಿ ಬೇಟೆಗಾರರು… ರಾಮ ಎಂದಿಗೂ ಸಸ್ಯಾಹಾರಿಯಾಗಿರಲಿಲ್ಲ. ಅವರು ಮಾಂಸಹಾರಿಯಾಗಿದ್ದರು. 14 ವರ್ಷಗಳ ಕಾಲ ಕಾಡಿನಲ್ಲಿ ವಾಸಿಸುವವರು ಸಸ್ಯಾಹಾರಿಯಾಗಲು ಹೇಗೆ ಸಾಧ್ಯ” ಎಂದು ಅವರು ಕೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ತೆರೆಯುವ ಜನವರಿ 22 ರಂದು ಡ್ರೈ ಡೇ ಎಂದು ಘೋಷಿಸುವಂತೆ ಮತ್ತು ಮಾಂಸಾಹಾರದ ಮೇಲೆ ಒಂದು ದಿನದ ನಿಷೇಧವನ್ನು ಹೇರುವಂತೆ ಆಡಳಿತಾರೂಢ ಬಿಜೆಪಿ ಶಾಸಕ ರಾಮ್ ಕದಂ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪತ್ರ ಬರೆದಿರುವ ಸಮಯದಲ್ಲಿ ಅವಧ್ ಅವರ ಹೇಳಿಕೆ ಬಂದಿದೆ.

ಕೋಟ್ಯಾಂತರ ರಾಮ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ತಕ್ಷಣವೇ ಅವಧ್ ಅವರನ್ನು ಗುರಿಯಾಗಿಸಿತು. “ರಾಮ ಮಾಂಸಾಹಾರ ಸೇವಿಸಿದ್ದಕ್ಕೆ ಜಿತೇಂದ್ರ ಅವದ್ ಬಳಿ ಯಾವ ಸಾಕ್ಷ್ಯವಿದೆ? ಅವರು ಅದನ್ನು ನೋಡಿದ್ದಾರೆಯೇ? ದೇವಸ್ಥಾನ ತೆರೆಯುವ ವೇಳೆಗೆ ಕೋಟ್ಯಾಂತರ ರಾಮನ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ” ಎಂದು  ರಾಮ್ ಕದಂ ಕಿಡಿಕಾರಿದ್ದಾರೆ.

ಎನ್‌ಸಿಪಿಯ ರಾಜ್ಯಾಧ್ಯಕ್ಷ ಸುನಿಲ್ ತಾತ್ಕರೆ, “ನನಗೆ ಅವರಷ್ಟು ಬುದ್ಧಿವಂತಿಕೆ ಇಲ್ಲ, ಅದರ ಬಗ್ಗೆ ಮಾತನಾಡದಿರುವುದು ಉತ್ತಮ” ಎಂದು ಅವಧ್ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಸಿರುವ ಅವದ್, “ವಿವಾದಾತ್ಮಕವಾಗಿ ನಾನು ಏನನ್ನೂ ಹೇಳಲಿಲ್ಲ” ನನ್ನ ಮಾತುಗಳು ನಿಜವಾಗಿದ್ದವು. ರಾಮನನ್ನು ಸಸ್ಯಾಹಾರಿಯನ್ನಾಗಿ ಮಾಡಲು ಯೋಜಿತ ಪ್ರಯತ್ನ ನಡೆಯುತ್ತಿದೆ. ಈ ದೇಶದ ಶೇ.80ಕ್ಕೂ ಹೆಚ್ಚು ಜನರು ಮಾಂಸಾಹಾರಿಗಳಾಗಿದ್ದಾರೆ. ಅವರು ಶ್ರೀರಾಮನ ಭಕ್ತರು,’’ ಎಂದು ಹೇಳಿದ್ದಾರೆ.

Related Posts