ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಸ್ಟಾಲ್‌ಗಳ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ: ಸುಮಾರು ಮೂರುವರೆ ಕೋಟಿ ಹಣ ವಶ! » Dynamic Leader
October 21, 2024
ಬೆಂಗಳೂರು

ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಸ್ಟಾಲ್‌ಗಳ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ: ಸುಮಾರು ಮೂರುವರೆ ಕೋಟಿ ಹಣ ವಶ!

ಬೆಂಗಳೂರು: ಹೈಗ್ರೌಂಡ್ಸ್ ಪೊಲೀಸ್ ಠಾಣಾ ಸರಹದ್ದಿನ ರೇಸ್ ಕೋರ್ಸ್ ರಸ್ತೆಯ ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಅಕ್ರಮ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಕೆಲವು ವ್ಯಕ್ತಿಗಳು ಟರ್ಫ್ ಕ್ಲಬ್ ಪ್ರವಾಗಿರುವ ಲೀಗಲ್ ಬುಕ್ಕಿಗಳೆಂದು ಹೇಳಿಕೊಂಡು ಬೆಂಗಳೂರು ಟರ್ಫ್ ಕ್ಲಬ್ ಗೆ ಸಮನಾಂತರವಾಗಿ (ಪ್ಯಾರಲಲ್) ಸಾರ್ವಜನಿಕರು ಹಾಗೂ ಪಂಟರುಗಳಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ವಂಚಿಸಿರುತ್ತಾರೆ.

ಅಕ್ರಮ ರೇಸ್ ಬೆಟ್ಟಿಂಗ್ ಎಂಬ ಜೂಜಾಟ ನಡೆಸುತ್ತಿರುವುದು ಮತ್ತು ಕೆಲವು ಪರವಾನಗಿ ಪಡೆದ ಏಜೆಂಟುಗಳು ಸರ್ಕಾರದ ಆದೇಶಗಳನ್ನು ಸ್ಟಾಲ್‌ಗಳಲ್ಲಿ ಪ್ರಕಟಿಸದೇ ಸರಿಯಾಗಿ ಲೆಕ್ಕ ನಿರ್ವಹಣೆ ಮಾಡದೇ ಗಿರಾಕಿಗಳಿಗೆ ಪಡೆದುಕೊಂಡ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡದೇ ಅನಧಿಕೃತ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ತೆರಿಗೆ ವಂಚಿಸಿ ಮೋಸ ಮಾಡಿರುತ್ತಾರೆ.

ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ದಾಳಿ ನಡೆಸಿ, ಅಕ್ರಮ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಒಟ್ಟು 66 ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ 55 ಮೊಬೈಲ್ ಗಳು, ದಾಖಲಾತಿಗಳು ಹಾಗೂ ರೂ.3,45,78,140/- (ಮೂರು ಕೋಟಿ ನಲವತ್ತೈದು ಲಕ್ಷದ ಎಪ್ಪತ್ತೆಂಟು ಸಾವಿರದ ನೂರ ನಲವತ್ತು) ಹಣ ವಶಕ್ಕೆ ಪಡೆದುಕೊಂಡಿರುತ್ತಾರೆ.

ಈ ಕಾರ್ಯಚರಣೆಯಲ್ಲಿ 09 ವ್ಯಕ್ತಿಗಳು ತಲೆ ಮರೆಸಿಕೊಂಡಿರುತ್ತಾರೆ. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ; ತನಿಖೆ ಮುಂದುವರಿಯುತ್ತಿದೆ.  

Related Posts