ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಹೈಗ್ರೌಂಡ್ಸ್ ಪೊಲೀಸ್ ಠಾಣೆ Archives » Dynamic Leader
November 22, 2024
Home Posts tagged ಹೈಗ್ರೌಂಡ್ಸ್ ಪೊಲೀಸ್ ಠಾಣೆ
ಬೆಂಗಳೂರು

ಬೆಂಗಳೂರು: ಹೈಗ್ರೌಂಡ್ಸ್ ಪೊಲೀಸ್ ಠಾಣಾ ಸರಹದ್ದಿನ ರೇಸ್ ಕೋರ್ಸ್ ರಸ್ತೆಯ ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಅಕ್ರಮ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಕೆಲವು ವ್ಯಕ್ತಿಗಳು ಟರ್ಫ್ ಕ್ಲಬ್ ಪ್ರವಾಗಿರುವ ಲೀಗಲ್ ಬುಕ್ಕಿಗಳೆಂದು ಹೇಳಿಕೊಂಡು ಬೆಂಗಳೂರು ಟರ್ಫ್ ಕ್ಲಬ್ ಗೆ ಸಮನಾಂತರವಾಗಿ (ಪ್ಯಾರಲಲ್) ಸಾರ್ವಜನಿಕರು ಹಾಗೂ ಪಂಟರುಗಳಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ವಂಚಿಸಿರುತ್ತಾರೆ.

ಅಕ್ರಮ ರೇಸ್ ಬೆಟ್ಟಿಂಗ್ ಎಂಬ ಜೂಜಾಟ ನಡೆಸುತ್ತಿರುವುದು ಮತ್ತು ಕೆಲವು ಪರವಾನಗಿ ಪಡೆದ ಏಜೆಂಟುಗಳು ಸರ್ಕಾರದ ಆದೇಶಗಳನ್ನು ಸ್ಟಾಲ್‌ಗಳಲ್ಲಿ ಪ್ರಕಟಿಸದೇ ಸರಿಯಾಗಿ ಲೆಕ್ಕ ನಿರ್ವಹಣೆ ಮಾಡದೇ ಗಿರಾಕಿಗಳಿಗೆ ಪಡೆದುಕೊಂಡ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡದೇ ಅನಧಿಕೃತ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ತೆರಿಗೆ ವಂಚಿಸಿ ಮೋಸ ಮಾಡಿರುತ್ತಾರೆ.

ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ದಾಳಿ ನಡೆಸಿ, ಅಕ್ರಮ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಒಟ್ಟು 66 ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ 55 ಮೊಬೈಲ್ ಗಳು, ದಾಖಲಾತಿಗಳು ಹಾಗೂ ರೂ.3,45,78,140/- (ಮೂರು ಕೋಟಿ ನಲವತ್ತೈದು ಲಕ್ಷದ ಎಪ್ಪತ್ತೆಂಟು ಸಾವಿರದ ನೂರ ನಲವತ್ತು) ಹಣ ವಶಕ್ಕೆ ಪಡೆದುಕೊಂಡಿರುತ್ತಾರೆ.

ಈ ಕಾರ್ಯಚರಣೆಯಲ್ಲಿ 09 ವ್ಯಕ್ತಿಗಳು ತಲೆ ಮರೆಸಿಕೊಂಡಿರುತ್ತಾರೆ. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ; ತನಿಖೆ ಮುಂದುವರಿಯುತ್ತಿದೆ.  

ಕ್ರೈಂ ರಿಪೋರ್ಟ್ಸ್

ಕೇಂದ್ರ ವಿಭಾಗದ ಪೊಲೀಸ್ ಠಾಣೆಗಳಲ್ಲಿ 106 ಜನ ಆರೋಪಿಗಳನ್ನು ಬಂಧಿಸಿ, 103 ಪ್ರಕರಣಗಳನ್ನು ಪತ್ತೆ ಮಾಡಿ, ಸುಮಾರು 2 ಕೋಟಿ, 69 ಲಕ್ಷ, 76 ಸಾವಿರದ 225 ರೂಗಳ ಬೆಲೆ ಬಾಳುವ ಕಳವು ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಿನ್ನ:
ಶೇಷಾದ್ರಿಪುರಂ, ವೈಯಾಲಿಕಾವಲ್, ಹಲಸೂರು ಗೇಟ್, ಅಶೋಕ ನಗರ, ವಿವೇಕನಗರ ಪೊಲೀಸ್ ಠಾಣೆಗಳಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ 14; ಪತ್ತೆಯಾದ ಪ್ರಕರಣಗಳ ಸಂಖ್ಯೆ 19; ಇವರಿಂದ ವಶಪಡಿಸಿಕೊಳ್ಳಲಾದ ಚಿನ್ನದ ತೂಕ 2 ಕೆಜಿ 110 ಗ್ರಾಂ. ಇದರ ಮೌಲ್ಯ ರೂ. 1,05,24,100/-

ಬೆಳ್ಳಿ:
ಹಲಸೂರು ಗೇಟ್ ಹಾಗೂ ವಿವೇಕನಗರ ಪೊಲೀಸ್ ಠಾಣೆಗಳಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ 03; ಪತ್ತೆಯಾದ ಪ್ರಕರಣಗಳ ಸಂಖ್ಯೆ 01; ಇವರಿಂದ ವಶಪಡಿಸಿಕೊಳ್ಳಲಾದ ಬೆಳ್ಳಿಯ ತೂಕ 105 ಕೆಜಿ 263 ಗ್ರಾಂ. ಇದರ ಮೌಲ್ಯ ರೂ.63,19,135/-

ಕಾರುಗಳು:
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ 02; ಪತ್ತೆಯಾದ ಪ್ರಕರಣಗಳ ಸಂಖ್ಯೆ 01; ಇವರಿಂದ ವಶಪಡಿಸಿಕೊಳ್ಳಲಾದ ಕಾರಿನ ಸಂಖ್ಯೆ 01. ಇದರ ಮೌಲ್ಯ ರೂ.18,00,000/-

ದ್ವೀಚಕ್ರ ವಾಹನ:
ಶೇಷಾದ್ರಿಪುರಂ ಹಾಗೂ ಅಶೋಕ ನಗರ ಪೊಲೀಸ್ ಠಾಣೆಗಳಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ 03; ಪತ್ತೆಯಾದ ಪ್ರಕರಣಗಳ ಸಂಖ್ಯೆ 07; ಇವರಿಂದ ವಶಪಡಿಸಿಕೊಳ್ಳಲಾದ ದ್ವೀಚಕ್ರ ವಾಹನದ ಸಂಖ್ಯೆ 5. ಇದರ ಮೌಲ್ಯ ರೂ.3,30,000/-

ನಗದು ಹಣ:
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ 04; ಪತ್ತೆಯಾದ ಪ್ರಕರಣಗಳ ಸಂಖ್ಯೆ 02; ಇವರಿಂದ ವಶಪಡಿಸಿಕೊಳ್ಳಲಾದ ಹಣ ರೂ.2,12,720/-

ಶಸ್ತ್ರ:
ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ 01; ಪತ್ತೆಯಾದ ಪ್ರಕರಣಗಳ ಸಂಖ್ಯೆ 01; ಇವರಿಂದ ವಶಪಡಿಸಿಕೊಳ್ಳಲಾದ ಪಿಸ್ತೂಲ್‌ಗಳ ಸಂಖ್ಯೆ 03. ಗುಂಡುಗಳ ಸಂಖ್ಯೆ 99. ಇದರ ಮೌಲ್ಯ ರೂ.2,49,000/-

ಮೊಬೈಲ್ ಪೋನ್:
ವಿವೇಕನಗರ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ 03; ಪತ್ತೆಯಾದ ಪ್ರಕರಣಗಳ ಸಂಖ್ಯೆ 02; ಇವರಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ಗಳ ಸಂಖ್ಯೆ 113. ಇದರ ಮೌಲ್ಯ ರೂ.40,00,000/-

NDPS Act:
ಎನ್.ಡಿ.ಪಿ.ಎಸ್ ಆಕ್ಟ್ ಅಡಿಯಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ 76; ಪತ್ತೆಯಾದ ಪ್ರಕರಣಗಳ ಸಂಖ್ಯೆ 70; ಇವರಿಂದ ಒಟ್ಟು 101 ಕೆಜಿ 780 ಗ್ರಾಂ ಗಾಂಜಾ ಮತ್ತು 44.93 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ.35,41,300/-

ಹೆಚ್ಚುವರಿ ಪೊಲೀಸ್ ಆಯುಕ್ತರು, ಪಶ್ಚಿಮ, ಸಂದೀಪ್ ಪಾಟೀಲ್ ಐಪಿಎಸ್, ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು ಶ್ರೀನಿವಾಸಗೌಡ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಕಬ್ಬನ್ ಪಾರ್ಕ್. ಉಪ-ವಿಭಾಗದ ಎಸಿಪಿ ಡಿ.ಎಸ್.ರಾಜೇಂದ್ರ, ಹಲಸೂರು ಗೇಟ್ ಉಪ-ವಿಭಾಗದ ಎಸಿಪಿ ನಾರಾಯಣಸ್ವಾಮಿ ಮತ್ತು ಶೇಷಾದ್ರಿಪುರಂ ಉಪ-ವಿಭಾಗದ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಪೊಲೀಸ್‌ ಇನ್ಸ್‌ಪೆಕ್ಟರ್ ರವರುಗಳು ಮಾಡಿರುವ ಈ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರವರು ಶ್ಲಾಘಿಸಿದ್ದಾರೆ.