ನನ್ನ ವಿರುದ್ಧ ಎಷ್ಟು ಪ್ರಕರಣಗಳು ಬೇಕಾದರು ದಾಖಲಿಸಿ; ನಾನು ಹೆದರುವುದಿಲ್ಲ: ರಾಹುಲ್ ಗಾಂಧಿ
ಗುವಾಹಟಿ: “ನನ್ನ ವಿರುದ್ಧ ಎಷ್ಟು ಪ್ರಕರಣಗಳು ಬೇಕಾದರು ದಾಖಲಿಸಿ; ನಾನು ಹೆದರುವುದಿಲ್ಲ” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಜನವರಿ 14 ರಂದು ಮಣಿಪುರದಿಂದ ಮುಂಬೈಗೆ “ಭಾರತ್ ಜೋಡೋ ನ್ಯಾಯ ಯಾತ್ರೆ”ಯ ಎರಡನೇ ಹಂತವನ್ನು ಮಣಿಪುರದಲ್ಲಿ ಪ್ರಾರಂಭಿಸಿದರು. ಈ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಅಸ್ಸಾಂನ ಬಾರ್ಪೇಟಾ ಪ್ರದೇಶದಲ್ಲಿ 11ನೇ ದಿನದ ಯಾತ್ರೆ ಕೈಗೊಂಡಿದ್ದಾರೆ. ಆಗ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ” ದೇಶದಲ್ಲೇ ಭ್ರಷ್ಟ ಮುಖ್ಯಮಂತ್ರಿ ಯಾರು ಎಂದರೆ ಅದು ಅಸ್ಸಾಂ ಮುಖ್ಯಮಂತ್ರಿ” ಎಂದು ಟೀಕಿಸಿದರು.
“ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಯಂತ್ರಿಸುತ್ತಿದ್ದಾರೆ. ಅಮಿತ್ ಶಾ ವಿರುದ್ಧ ಏನಾದರೂ ಹೇಳುವ ಧೈರ್ಯ ಮಾಡಿದರೆ ಅವರನ್ನು ಹೊರಹಾಕುತ್ತಾರೆ. ರಾಹುಲ್‌ಗೆ ಬೆದರಿಸೋಣ ಎಂಬ ಯೋಚನೆ ಎಲ್ಲಿಂದ ಬಂದಿತೋ ಗೊತ್ತಿಲ್ಲ.
ನನ್ನ ವಿರುದ್ಧ ಎಷ್ಟು ಪ್ರಕರಣಗಳು ಬೇಕಾದರು ದಾಖಲಿಸಿ; ನಾನು ಹೆದರುವುದಿಲ್ಲ. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ದೇಶವನ್ನು ಒಡೆಯಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತ ಮಣಿಪುರವನ್ನು ಸುಟ್ಟು ಹಾಕಿದೆ. ಆದರೆ ದೇಶದ ಪ್ರಧಾನಿ ಇದುವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ.
ಮಣಿಪುರದಲ್ಲಿ ನಮ್ಮ “ಭಾರತ ಜೋಡೋ ನ್ಯಾಯ ಯಾತ್ರೆ” ಆರಂಭವಾಗಿದೆ; ಅದು ಮಹಾರಾಷ್ಟ್ರದವರೆಗೂ ಹೋಗುತ್ತದೆ. ಹಿಂಸೆ ಮತ್ತು ದ್ವೇಷದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ” ಎಂದು ಮಾತನಾಡಿದರು.