ಬಿಜೆಪಿ ಮತ್ತೆ ಗೆದ್ದರೆ Paytm ಬದಲಿಗೆ PayPM: ಪ್ರಶಾಂತ್ ಭೂಷಣ್
ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ಎಕ್ಸ್ ಪೇಜ್ ನಲ್ಲಿ ಪ್ರಧಾನಿ ಮೋದಿ ಪ್ರಚಾರದಲ್ಲಿ ಮಾತನಾಡುತ್ತಿರುವ ಹಾಗೆ ಬಿಂಬಿಸಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕಾರಣಿಗಳು ಬಿಜೆಪಿ ಸೇರಿದ ಮೇಲೆ ಅವರ ವಿರುದ್ಧದ ಪ್ರಕರಣಗಳನ್ನು ಮುಚ್ಚಿ ಹಾಕುವುದನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ಟೀಕಿಸುತ್ತಿದೆ. ಮುಂದುವರಿದು, ಮೋದಿ ವಾಷಿಂಗ್ ಪೌಡರ್ ಮತ್ತು ಬಿಜೆಪಿ ವಾಷಿಂಗ್ ಮೆಷಿನ್ ಅನ್ನು ಕಾಂಗ್ರೆಸ್ ಪಕ್ಷ ಪರಿಚಯಿಸಿ ಟೀಕಿಸಿದೆ.
ವಾಷಿಂಗ್ ಮೆಷಿನ್ ಬೆಲೆ 8,552 ಕೋಟಿ ರೂಪಾಯಿ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ, ಇದು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಪಡೆದ ಮೊತ್ತವಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ಎಕ್ಸ್ ಪೇಜ್ ನಲ್ಲಿ ಪ್ರಧಾನಿ ಮೋದಿ ಪ್ರಚಾರದಲ್ಲಿ ಮಾತನಾಡುತ್ತಿರುವ ಹಾಗೆ ಬಿಂಬಿಸಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಅದರಲ್ಲಿ “ಈಗ ವಾಷಿಂಗ್ ಮಷಿನ್‌ಗಳನ್ನು ಮತ್ತು ಚುನಾವಣಾ ಬಾಂಡ್‌ಗಳನ್ನು ತಂದಿದ್ದೇವೆ. ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ಪೇಟಿಎಂ (Paytm) ತರುವುದಿಲ್ಲ. ನೇರವಾಗಿ ಪ್ರಧಾನಿಗೆ ಹಣ ಸಂದಾಯ ಆಗುವ ಪೇಪಿಎಂ (PayPM) ಯೋಜನೆಯನ್ನು ತರುತ್ತೇವೆ” ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.