ಅಬುಧಾಬಿ: ಅಬುಧಾಬಿಗೆ ಬಂದಿದ್ದ ನಟ ರಜನಿಕಾಂತ್ ‘ಬಾಪ್ಸ್’ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದರು.
ಅಬುಧಾಬಿಗೆ ಬಂದಿದ್ದ ನಟ ರಜನಿಕಾಂತ್ ಕೇರಳ ಮೂಲದ ಲುಲು ಸಮೂಹದ ವ್ಯವಸ್ಥಾಪಕ ನಿರ್ದೇಶಕ ಎಂ.ಎ.ಯೂಸುಫ್ ಅಲಿ ಅವರನ್ನು ಭೇಟಿಯಾದರು. ಅವರ ಬೆಂಬಲದಿಂದ ನಟ ಜನಿಕಾಂತ್ ಅವರಿಗೆ ಅಬುಧಾಬಿ ಸರ್ಕಾರವು ಕಲೆಯ ಸೇವೆಗಾಗಿ ಹತ್ತು ವರ್ಷಗಳ ಗೋಲ್ಡನ್ ವೀಸಾವನ್ನು ನೀಡಿ ಗೌರವಿಸಿತು.
ಈ ಪ್ರವಾಸದ ವೇಳೆ ನಟ ರಜನಿಕಾಂತ್ ಅವರು ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥೆಯ (BAPS) ಹಿಂದೂ ಮಂದಿರವನ್ನು ವೀಕ್ಷಿಸಿದರು.
ದೇವಸ್ಥಾನಕ್ಕೆ ತೆರಳಿದ ಅವರಿಗೆ ಆಡಳಿತ ಮಂಡಳಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮತ್ತು ಅಬುಧಾಬಿಯ ಶೇಖ್ ಝಾಯೆದ್ ಗ್ರ್ಯಾಂಡ್ ಮಸೀದಿಗೂ ನಟ ರಜನಿಕಾಂತ್ ಭೇಟಿ ನೀಡಿದರು.
 
  
 

 
  
 










 
 
