ಲಡ್ಡು ಪಾಲಿಟಿಕ್ಸ್: ಒಂದೇ ಕಲ್ಲಿಗೆ 2 ಹಕ್ಕಿ.. ತಿರುಪತಿ ಲಡ್ಡು ವಿಚಾರದಲ್ಲಿ ಜಗನ್ ಸೋಲಿಸಿದ ಚಂದ್ರಬಾಬು ನಾಯ್ಡು! » Dynamic Leader
December 2, 2024
ದೇಶ

ಲಡ್ಡು ಪಾಲಿಟಿಕ್ಸ್: ಒಂದೇ ಕಲ್ಲಿಗೆ 2 ಹಕ್ಕಿ.. ತಿರುಪತಿ ಲಡ್ಡು ವಿಚಾರದಲ್ಲಿ ಜಗನ್ ಸೋಲಿಸಿದ ಚಂದ್ರಬಾಬು ನಾಯ್ಡು!

ಅಮರಾವತಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಿದ್ದಾರೆ.

ವಿಶ್ವವಿಖ್ಯಾತ ತಿರುಪತಿ ವೆಂಕಟಾಚಲಪತಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ತಿರುಪತಿಗೆ ಬರುವ ಎಲ್ಲ ಭಕ್ತರು ತಪ್ಪದೆ ನಿತ್ಯ ಇಲ್ಲಿ ವಿತರಿಸುವ ಪ್ರಸಾದ ಲಡ್ಡುಗಳನ್ನು ಖರೀದಿಸುತ್ತಾರೆ. ಇಲ್ಲಿ ಭಕ್ತರಿಗೆ ಪ್ರತಿದಿನ ಮೂರು ಲಕ್ಷ ಲಡ್ಡುಗಳನ್ನು ವಿತರಿಸಲಾಗುತ್ತದೆ.

ತಿರುಪತಿ ಲಡ್ಡು ಪ್ರಸಾದಕ್ಕೆ ಭಕ್ತರಲ್ಲಿನ ಬೇಡಿಕೆಯಿಂದಾಗಿ ಇಲ್ಲಿ ನಕಲಿ ಮಾರುಕಟ್ಟೆಗಳ ಹಾವಳಿ ಕೂಡ ಜೋರಾಗಿದೆ. ಇಂತಹ ಸನ್ನಿವೇಶದಲ್ಲೇ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಘಾತಕಾರಿ ಆರೋಪವೊಂದನ್ನು ಹೊರಹಾಕಿದರು.

ಹಿಂದಿನ ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿ, ಭಕ್ತರು ಪವಿತ್ರವೆಂದು ಪರಿಗಣಿಸುವ ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬನ್ನು ಸೇರಿಸಲಾಗಿತ್ತು ಎಂಬುದು ಅವರ ಆರೋಪವಾಗಿತ್ತು.

ಅವರು ಆರೋಪ ಮಾಡಿದ ಮರುದಿನವೇ ತಿರುಪತಿ ಲಡ್ಡು ಕುರಿತ ಪ್ರಯೋಗಾಲಯದ ವರದಿ ಕೂಡ ಬಿಡುಗಡೆಯಾದವು. ಅದರಲ್ಲಿ ತಿರುಪತಿ ಲಡ್ಡುನಲ್ಲಿ ಮೀನಿನ ಎಣ್ಣೆ ಮತ್ತು ಪ್ರಾಣಿಗಳ ಕೊಬ್ಬಿನ ಕುರುಹುಗಳಿವೆ ಎಂದು ವರದಿಯಾಗಿತ್ತು. ಹಿಂದಿನ ‘ಆಡಳಿತದಲ್ಲಿ ಈ ರೀತಿ ಅನ್ಯಾಯ ಮಾಡಿದರು; ಅದನ್ನು ಗುಣಮಟ್ಟಕ್ಕೆ ಬದಲಿಸಿ ಲಡ್ಡು ತಯಾರಿಕೆಗೆ ತುಪ್ಪವನ್ನೇ ಬಳಸಬೇಕು ಎಂದು ಆದೇಶಿಸಲಾಗಿದೆ’ ಎಂದರು ಚಂದ್ರಬಾಬು ನಾಯ್ಡು.

ಇಂತಹ ಅಚ್ಚರಿಯ ಆರೋಪದಿಂದ ಚಂದ್ರಬಾಬು ನಾಯ್ಡುಗೆ ಎರಡು ರೀತಿಯ ಲಾಭವಾಗಿದೆ. ಮೊದಲನೆಯದು, ಜಗನ್ಮೋಹನ ರೆಡ್ಡಿ ವಿರುದ್ಧ ಭಕ್ತರಲ್ಲಿ ಸಾಕಷ್ಟು ಅಸಮಾಧಾನವನ್ನು ಮೂಡಿಸುವುದು; ಎರಡನೆಯದು, ಈ ವಿಚಾರವಾಗಿ ಚುನಾವಣೆಯಲ್ಲಿ ಸೋತ ಜಗನ್ ಮತ್ತೆ ಆಂಧ್ರ ರಾಜಕೀಯದಲ್ಲಿ ಮಧ್ಯಪ್ರವೇಶಿಸಲಾಗದಷ್ಟು ಸಮಸ್ಯೆಯನ್ನು ಸೃಷ್ಟಿಸುವುದು. ಇದನ್ನೇ ಹೇಳುವುದು “ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲಡ್ಡು ಪಾಲಿಟಿಕ್ಸ್” ಎಂದು.

Related Posts