ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಲಡ್ಡು Archives » Dynamic Leader
November 22, 2024
Home Posts tagged ಲಡ್ಡು
ದೇಶ

ಡಿ.ಸಿ.ಪ್ರಕಾಶ್

ತಿರುಪತಿ ವೆಂಕಟಾಚಲಪತಿ ದೇವಸ್ಥಾನದಲ್ಲಿ ಮಾರಾಟ ಮಾಡುವ ಜಗತ್ ಪ್ರಸಿದ್ಧ ಪ್ರಸಾದವಾದ ಲಡ್ಟುವನ್ನು ಗೋಮಾಂಸದ ಕೊಬ್ಬನ್ನು ತುಪ್ಪದೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ಹಸುವನ್ನು ಪವಿತ್ರ ಪ್ರಾಣಿ ಎಂದು ಪರಿಗಣಿಸಲಾಗಿರುವುದರಿಂದ ಪ್ರಸಾದದಲ್ಲಿ ಗೋಮಾಂಸದ ಕೊಬ್ಬನ್ನು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಆದರೆ ಆಹಾರಗಳಲ್ಲಿ ದನದ ಕೊಬ್ಬನ್ನು ಬೆರೆಸಿದ ತುಪ್ಪವನ್ನು ಬಳಸುವುದು ಹೊಸದೇನಲ್ಲ.

ಗೋಮಾಂಸದಿಂದ ಕೊಬ್ಬನ್ನು ಹೇಗೆ ತಯಾರಿಸಲಾಗುತ್ತದೆ?
ಕಟುವಾದ ಗೋಮಾಂಸದಲ್ಲಿ ಅಧಿಕ ಕೊಬ್ಬು ಇರುವ ಅಂಗಾಂಶಗಳನ್ನು ಕತ್ತರಿಸಿ, ಕುದಿಯುವ ನೀರಿನಲ್ಲಿ ಬೇಯಿಸಿ, ಅದರಲ್ಲಿನ ಕಲ್ಮಶವನ್ನು ತೆಗೆದುಹಾಕಿ, ಅದನ್ನು ಸಂಸ್ಕರಿಸಿದಾಗ ಗೋಮಾಂಸದ ಕೊಬ್ಬು ಬೆಣ್ಣೆಯಂತಹ ರೂಪದಲ್ಲಿ ಸಿಗುತ್ತದೆ.

ಹಸುವಿನ ಮೂತ್ರಪಿಂಡವನ್ನು ಸುತ್ತುವರೆದಿರುವ ಮಾಂಸದಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರುವುದರಿಂದ ಅದರಿಂದಲೇ ಹೆಚ್ಚಾಗಿ ಕೊಬ್ಬನ್ನು ತಯಾರಿಸಲು ಗೋಮಾಂಸವನ್ನು ಪಡೆಯಲಾಗುತ್ತದೆ. ಈ ಕೊಬ್ಬು ಸೇವಿಸಲು ಯೋಗ್ಯವಾದದ್ದು. ಈ ಕೊಬ್ಬನ್ನು ಅಧಿಕ ತಾಪಮಾನದಲ್ಲಿ ಹುರಿದು, ರೋಸ್ಟ್ ಮಾಡಲಾದ ಆಹಾರಗಳಲ್ಲಿ ಸುವಾಸನೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ.

ಅನುಕೂಲಗಳು ಮತ್ತು ಅನಾನುಕೂಲಗಳು:
ಈ ದನದ ಕೊಬ್ಬಿನಲ್ಲಿ ದೇಹಕ್ಕೆ ಪ್ರಯೋಜನಕಾರಿಯಾಗುವ ಮೊನೊ ಮತ್ತು ಪಾಲಿ (Mono and Poly Unsaturated) ಕೊಬ್ಬುಗಳು ಸಮೃದ್ಧವಾಗಿದೆ. ಇದರಲ್ಲಿರುವ Conjugated Linoleic Acid (CLA) ಮತ್ತು omega-6 ಕೊಬ್ಬು ರಕ್ತನಾಳಗಳ ಅಡಚಣೆ ಸೇರಿದಂತೆ ಸಮಸ್ಯೆಗಳನ್ನು ತಡೆಯುತ್ತದೆ.

ದನದ ಕೊಬ್ಬಿನಲ್ಲಿ ರೋಗ ನಿರೋಧಕತೆ, ಮೂಳೆ ಮತ್ತು ಚರ್ಮದ ಆರೋಗ್ಯ ಸೇರಿದಂತೆ ದೇಹದ ವಿವಿಧ ಕಾರ್ಯಗಳಿಗೆ ಅಗತ್ಯವಾದ ಕೊಬ್ಬು-ಕರಗಬಲ್ಲ (fat-soluble) ಜೀವಸತ್ವಗಳು ಅಡಗಿದೆ. ಆದಾಗ್ಯೂ, ಇದರ ಅತಿಯಾದ ಸೇವನೆಯು ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. 

ದೇಶ

ಅಮರಾವತಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಿದ್ದಾರೆ.

ವಿಶ್ವವಿಖ್ಯಾತ ತಿರುಪತಿ ವೆಂಕಟಾಚಲಪತಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ತಿರುಪತಿಗೆ ಬರುವ ಎಲ್ಲ ಭಕ್ತರು ತಪ್ಪದೆ ನಿತ್ಯ ಇಲ್ಲಿ ವಿತರಿಸುವ ಪ್ರಸಾದ ಲಡ್ಡುಗಳನ್ನು ಖರೀದಿಸುತ್ತಾರೆ. ಇಲ್ಲಿ ಭಕ್ತರಿಗೆ ಪ್ರತಿದಿನ ಮೂರು ಲಕ್ಷ ಲಡ್ಡುಗಳನ್ನು ವಿತರಿಸಲಾಗುತ್ತದೆ.

ತಿರುಪತಿ ಲಡ್ಡು ಪ್ರಸಾದಕ್ಕೆ ಭಕ್ತರಲ್ಲಿನ ಬೇಡಿಕೆಯಿಂದಾಗಿ ಇಲ್ಲಿ ನಕಲಿ ಮಾರುಕಟ್ಟೆಗಳ ಹಾವಳಿ ಕೂಡ ಜೋರಾಗಿದೆ. ಇಂತಹ ಸನ್ನಿವೇಶದಲ್ಲೇ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಘಾತಕಾರಿ ಆರೋಪವೊಂದನ್ನು ಹೊರಹಾಕಿದರು.

ಹಿಂದಿನ ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿ, ಭಕ್ತರು ಪವಿತ್ರವೆಂದು ಪರಿಗಣಿಸುವ ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬನ್ನು ಸೇರಿಸಲಾಗಿತ್ತು ಎಂಬುದು ಅವರ ಆರೋಪವಾಗಿತ್ತು.

ಅವರು ಆರೋಪ ಮಾಡಿದ ಮರುದಿನವೇ ತಿರುಪತಿ ಲಡ್ಡು ಕುರಿತ ಪ್ರಯೋಗಾಲಯದ ವರದಿ ಕೂಡ ಬಿಡುಗಡೆಯಾದವು. ಅದರಲ್ಲಿ ತಿರುಪತಿ ಲಡ್ಡುನಲ್ಲಿ ಮೀನಿನ ಎಣ್ಣೆ ಮತ್ತು ಪ್ರಾಣಿಗಳ ಕೊಬ್ಬಿನ ಕುರುಹುಗಳಿವೆ ಎಂದು ವರದಿಯಾಗಿತ್ತು. ಹಿಂದಿನ ‘ಆಡಳಿತದಲ್ಲಿ ಈ ರೀತಿ ಅನ್ಯಾಯ ಮಾಡಿದರು; ಅದನ್ನು ಗುಣಮಟ್ಟಕ್ಕೆ ಬದಲಿಸಿ ಲಡ್ಡು ತಯಾರಿಕೆಗೆ ತುಪ್ಪವನ್ನೇ ಬಳಸಬೇಕು ಎಂದು ಆದೇಶಿಸಲಾಗಿದೆ’ ಎಂದರು ಚಂದ್ರಬಾಬು ನಾಯ್ಡು.

ಇಂತಹ ಅಚ್ಚರಿಯ ಆರೋಪದಿಂದ ಚಂದ್ರಬಾಬು ನಾಯ್ಡುಗೆ ಎರಡು ರೀತಿಯ ಲಾಭವಾಗಿದೆ. ಮೊದಲನೆಯದು, ಜಗನ್ಮೋಹನ ರೆಡ್ಡಿ ವಿರುದ್ಧ ಭಕ್ತರಲ್ಲಿ ಸಾಕಷ್ಟು ಅಸಮಾಧಾನವನ್ನು ಮೂಡಿಸುವುದು; ಎರಡನೆಯದು, ಈ ವಿಚಾರವಾಗಿ ಚುನಾವಣೆಯಲ್ಲಿ ಸೋತ ಜಗನ್ ಮತ್ತೆ ಆಂಧ್ರ ರಾಜಕೀಯದಲ್ಲಿ ಮಧ್ಯಪ್ರವೇಶಿಸಲಾಗದಷ್ಟು ಸಮಸ್ಯೆಯನ್ನು ಸೃಷ್ಟಿಸುವುದು. ಇದನ್ನೇ ಹೇಳುವುದು “ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲಡ್ಡು ಪಾಲಿಟಿಕ್ಸ್” ಎಂದು.

ಕ್ರೈಂ ರಿಪೋರ್ಟ್ಸ್

ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾಧಿಗಳು ಮುಗಿ ಬೀಳುತ್ತಿದ್ದಾರೆ. ದರ್ಶನ ಪಡೆದು ಸುಸ್ತಾಗಿ ಬರುವ ಭಕ್ತಾಧಿಗಳು, ಲಡ್ಡು ಕೌಂಟರ್ ಗಳಲ್ಲಿ ಬಹಳ ಹೊತ್ತು ಕಾದು ಲಾಡನ್ನು ಪಡೆಯಬೇಕಾದ ಪರಿಸ್ಥಿತಿಯಿದೆ. ಇದನ್ನು ಬಳಸಿಕೊಂಡು ಹೆಚ್ಚುವರಿ ಬೆಲೆಗೆ ಲಾಡುಗಳನ್ನು ಹೊರಗೆ ಮಾರಾಟ ಮಾಡಲಾಗುತ್ತಿದೆ.

ಲಡ್ಡು ತಯಾರಿಸುವ ಘಟಕದಿಂದ ಟ್ರೇಗಳಲ್ಲಿ ಲಡ್ಡುಗಳನ್ನು ಜೋಡಿಸಿ, ಕನ್ವೇಯರ್ ಬೆಲ್ಟ್ ಮೂಲಕ ಪ್ರಸಾದ ಮಾರಾಟ ಕೌಂಟರ್‌ ಬಳಿ ಸಾಗಿಸಲಾಗುತ್ತದೆ. ಅಲ್ಲಿಂದ ಟ್ರಾಲಿಗಳನ್ನು ಬಳಸಿ ಪ್ರಸಾದ ಕೌಂಟರ್‌ಗಳಿಗೆ ಲಡ್ಡುಗಳನ್ನು ತೆಗೆದುಕೊಂಡು ಹೋಗುತ್ತಾರೆ.

ಈ ಕೆಲಸಕ್ಕೆ ನಿಯೋಜನೆಗೊಂಡಿರುವ ನೌಕರರು, ಮಾರ್ಗ ಮಧ್ಯೆ ಲಡ್ಡುಗಳನ್ನು ಕದ್ದು, ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಗೌಪ್ಯ ಮಾಹಿತಿಯು ದೇವಸ್ತಾನದ ವಿಜಿಲೆನ್ಸ್ ಅಧಿಕಾರಿಗಳಿಗೆ ಲಭಿಸಿತು. ಮಾಹಿತಿ ಮೇರೆಗೆ ದೇವಸ್ಥಾನದ ವಿಜಿಲೆನ್ಸ್ ಅಧಿಕಾರಿಗಳು ಲಡ್ಡು ಸಾಗಾಟದ ಮೇಲೆ ನಿಗಾ ವಹಿಸಿದ್ದರು.

ಆ ವೇಳೆ ದೇವಸ್ಥಾನದ ಐವರು ನೌಕರರು 15 ಟ್ರೇಗಳಲ್ಲಿ ಇಟ್ಟಿದ್ದ 750 ಲಾಡುಗಳನ್ನು ಕದ್ದು, ತೆಗೆದುಕೊಂಡು ಹೋಗುವುದನ್ನು ಕಂಡ ವಿಜಿಲೆನ್ಸ್ ಅಧಿಕಾರಿಗಳು ಅವರನ್ನು ಸುತ್ತುವರಿದು ಹಿಡಿದರು. ಅದಲ್ಲದೇ ಈ ಲಾಡು ಖದೀಮರು ಇದುವರೆಗೂ 35 ಸಾವಿರ ಲಡ್ಡುಗಳನ್ನು ಕದ್ದು ಹೆಚ್ಚುವರಿ ಬೆಲೆಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ದೇವಸ್ಥಾನದ 5 ಜನ ನೌಕರರನ್ನು ಬಂಧಿಸಿರುವ ವಿಜಿಲೆನ್ಸ್ ಅಧಿಕಾರಿಗಳು, ಈ ಘಟನೆಯಲ್ಲಿ ಇನ್ನು ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.