ವಿದೇಶ Archives » Page 10 of 12 » Dynamic Leader
October 23, 2024
Home Archive by category ವಿದೇಶ (Page 10)

ವಿದೇಶ

ವಿದೇಶ

ಟೋಕಿಯೊ: ಜಪಾನ್‌ನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು. ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ನಲ್ಲಿದ್ದಾಗ ಅವರು ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಅವರು ಹಿರೋಷಿಮಾದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರನ್ನು ಭೇಟಿ ಮಾಡಿದರು.

ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ, “ಇದು ಶಾಂತಿ ಮತ್ತು ಸೌಹಾರ್ದತೆಯ ಸಂದೇಶ. ಶಾಂತಿ ಮತ್ತು ಸೌಹಾರ್ದತೆಯ ಗಾಂಧಿ ಆದರ್ಶಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ ಮತ್ತು ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತವೆ” ಎಂದರು.

ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಶಾಂತಿ ಮತ್ತು ಅಹಿಂಸೆಯ ಒಗ್ಗಟ್ಟಿನ ಸಂಕೇತವಾಗಿ ಗಾಂಧಿ ಪ್ರತಿಮೆಯ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಅಮೆರಿಕ ಆಗಸ್ಟ್ 6, 1945 ರಂದು ಹಿರೋಷಿಮಾದ ಮೇಲೆ ವಿಶ್ವದ ಮೊದಲ ಪರಮಾಣು ದಾಳಿಯನ್ನು ನಡೆಸಿತು, ಇದರಿಂದ ಹಿರೋಷಿಮಾ ನಗರವೇ ನಾಶವಾಯಿತು ಮತ್ತು ಸುಮಾರು 1,40,000 ಜನರನ್ನು ತಮ್ಮ ಪ್ರಾಣವನ್ನು ಕಳೆದುಕೊಂಡರು.

ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, “ಇಂದಿಗೂ ಹಿರೋಷಿಮಾ ಎಂಬ ಪದವನ್ನು ಕೇಳಿದರೆ ಜಗತ್ತು ಹೆದರುತ್ತದೆ” ಎಂದರು.

ವಿದೇಶ

ನ್ಯೂಯಾರ್ಕ್: 1100 ವರ್ಷಗಳಷ್ಟು ಹಳೆಯದಾದ ಹೀಬ್ರೂ ಬೈಬಲ್ ಅನ್ನು 9ನೇ ಶತಮಾನದ ಕೊನೆಯಲ್ಲಿ ಮತ್ತು 10ನೇ ಶತಮಾನದ ಆರಂಭದಲ್ಲಿ ಬರೆಯಲಾಗಿದೆ.

ಇದು ಪ್ರಪಂಚದ ಅತ್ಯಂತ ಹಳೆಯ ಬೈಬಲ್ ಹಸ್ತಪ್ರತಿಗಳಲ್ಲಿ ಒಂದಾಗಿದೆ. ಬೈಬಲ್ ಅನ್ನು ರೊಮೇನಿಯಾದ ಮಾಜಿ ಅಮೆರಿಕ ರಾಯಭಾರಿ ಆಲ್ಫ್ರೆಡ್ ಮೋಸೆಸ್ ಖರೀದಿಸಿದ್ದರು. ಈ ಹೀಬ್ರೂ ಬೈಬಲ್ ಅನ್ನು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಹರಾಜು ಕೇಂದ್ರದಲ್ಲಿ ಹರಾಜು ಮಾಡಲಾಯಿತು. ಎರಡು ಕಂಪನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು.

4 ನಿಮಿಷಗಳ ಹರಾಜಿನ ನಂತರ, ಹೀಬ್ರೂ ಬೈಬಲ್ ಅನ್ನು ಸೋಥೆಬಿಸ್ ಸಂಸ್ಥೆ 38.1 ಮಿಲಿಯನ್‌ಗೆ ಖರೀದಿಸಿತು (ಭಾರತೀಯ ಕರೆನ್ಸಿಯಲ್ಲಿ ರೂ.313 ಕೋಟಿ). ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಯಹೂದಿ ಮ್ಯೂಸಿಯಂಗೆ ಬೈಬಲ್ ಅನ್ನು ದಾನ ಮಾಡಲಾಗುವುದು ಎಂದು ಸೋಥೆಬಿಸ್ ಸಂಸ್ಥೆ ತಿಳಿಸಿದೆ.

ಮಾಜಿ ಅಮೆರಿಕ ರಾಯಭಾರಿ ಮೋಸೆಸ್ ಅವರು, ‘ಹೀಬ್ರೂ ಬೈಬಲ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ಇದು ಪಾಶ್ಚಿಮಾತ್ಯ ನಾಗರಿಕತೆಯ ಅಡಿಪಾಯವಾಗಿದೆ. ಇದು ಯಹೂದಿ ಜನರಿಗೆ ಸೇರಿದ್ದು ಎಂದು ತಿಳಿದು ನನಗೆ ಸಂತೋಷವಾಗಿದೆ’ ಎಂದು ಹೇಳಿದರು.

1994ರಲ್ಲಿ, ಲಿಯೊನಾರ್ಡೊ ಡಾ ವಿನ್ಸಿಯ ಕೋಡೆಕ್ಸ್ ಲೀಸೆಸ್ಟರ್ ಹಸ್ತಪ್ರತಿ 30.8 ಮಿಲಿಯನ್‌ ಡಾಲರ್‌ಗೆ ಮಾರಾಟವಾಯಿತು. ಹೀಬ್ರೂ ಬೈಬಲ್ ಅದನ್ನು ತಳ್ಳಿಹಾಕಿದೆ. ಇದು ಇದುವರೆಗೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಮೌಲ್ಯಯುತವಾದ ಹಸ್ತಪ್ರತಿಯಾಗಿದೆ.

ವಿದೇಶ

ವಾಷಿಂಗ್ಟನ್: ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಬಂಧಿಸಲಾಗಿದ್ದ ಉಗ್ರ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯವು ಅನುಮತಿ ನೀಡಿದೆ. 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು. ದಾಳಿಯ ಪ್ರಮುಖ ಶಂಕಿತ ಡೇವಿಡ್ ಹೆಡ್ಲಿಯನ್ನು ಅಮೆರಿಕಾದಲ್ಲಿ ಬಂಧಿಸಲಾಗಿತ್ತು. ಆತನು ಈಗ 35 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಡೇವಿಡ್ ಹೆಡ್ಲಿ

ಆತನ ಸ್ನೇಹಿತ ಮತ್ತು ಸಹ-ಸಂಚುಕೋರ ಪಾಕಿಸ್ತಾನ ಮೂಲದವನಾಗಿದ್ದು ಕೆನಡಾದಲ್ಲಿ ನೆಲಸಿದ್ದ ಉದ್ಯಮಿ ತಹವ್ವೂರ್ ರಾಣಾವನ್ನು 2020ರಲ್ಲಿ ಅಮೆರಿಕಾದಲ್ಲಿ ಬಂಧಿಸಲಾಗಿತ್ತು. ದಾಳಿಯಲ್ಲಿ ಆತನ ಪಾತ್ರದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯನ್ನು ನಡೆಸುತ್ತಿದೆ. ಆತನನ್ನು ವಾಂಟೆಡ್ ಕ್ರಿಮಿನಲ್ ಎಂದು ಘೋಷಿಸಿ, ಹಸ್ತಾಂತರಿಸುವಂತೆ ಕೋರಿ ಸಿಬಿಐ ಅಮೆರಿಕದ ಚಿಕಾಗೋ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತು.

ಮುಂಬೈ ದಾಳಿ

ಲಾಸ್ ಏಂಜಲೀಸ್ ಕೇಂದ್ರ ಜಿಲ್ಲಾ ನ್ಯಾಯಾಧೀಶೆ ಜಾಕ್ವೆಲಿನ್ ಸೂಲ್ಜಿಯನ್ ಅವರು ಮೇ 16 ರಂದು ಹೊರಡಿಸಿದ ಆದೇಶದಲ್ಲಿ, “2008ರ ಮುಂಬೈ ಭಯೋತ್ಪಾದನಾ ದಾಳಿಯ ಶಂಕಿತ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬಹುದು. ಅವರು ಆರೋಪಿಸಲಾದ ಅಪರಾಧಗಳಿಗಾಗಿ ಅವರನ್ನು ಹಸ್ತಾಂತರಿಸಲು ಆದೇಶಿಸಲಾಗಿದೆ” ಎಂದು ತೀರ್ಪನ್ನು ನೀಡಿದ್ದಾರೆ.

ವಿದೇಶ

ಭಾರತೀಯನಾದ ಮೊಹಮ್ಮದ್ ಬೇಗೆ ಮಿರ್ಜಾ (20) ಎಂಜಿನಿಯರಿಂಗ್ ಓದುತ್ತಿದ್ದನು. ಕಳೆದ 2019ರಲ್ಲಿ, ದುಬೈನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ಮೊಹಮ್ಮದ್, ಓಮನ್‌ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತು.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 31 ಪ್ರಯಾಣಿಕರಲ್ಲಿ 17 ಮಂದಿ ಸಾವನ್ನಪ್ಪಿದರು. ಈ ಪೈಕಿ 12 ಮಂದಿ ಭಾರತೀಯರು. ಮಹಮ್ಮದ್ ಸೇರಿದಂತೆ ಹಲವರಿಗೆ ಗಂಭೀರವಾದ ಗಾಯಗಳಾದವು. ಅಪಘಾತಕ್ಕೆ ಕಾರಣವಾದ ಬಸ್ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು ಅಪಘಾತದ ಸಂತ್ರಸ್ತರಿಗೆ 3.4 ಮಿಲಿಯನ್ ದಿರ್ಹಮ್ ಪಾವತಿಸಲು ಆದೇಶಿಸಲಾಯಿತು.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೊಹಮ್ಮದ್ ಎರಡು ತಿಂಗಳಿಗೂ ಹೆಚ್ಚು ಕಾಲ ದುಬೈನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದನು. ಆತನು 14 ದಿನಗಳ ಕಾಲ ಪ್ರಜ್ಞಾಹೀನರಾಗಿದ್ದನು. ಆ ಬಳಿಕ ಪುನರ್ವಸತಿ ಕೇಂದ್ರದಲ್ಲಿಯೂ ಚಿಕಿತ್ಸೆ ಪಡೆದಿದ್ದ.

ಅಪಘಾತದಲ್ಲಿ ಮೊಹಮ್ಮದ್ ಮಿದುಳಿಗೆ ತೀವ್ರ ಪೆಟ್ಟು ಬಿದ್ದ ಕಾರಣದಿಂದ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಆತನ ತಲೆಬುರುಡೆ, ಕಿವಿ, ಬಾಯಿ, ಶ್ವಾಸಕೋಶಗಳು, ತೋಳುಗಳು ಮತ್ತು ಕಾಲುಗಳಿಗೆ ಆಗಿರುವ ಗಾಯಗಳನ್ನೂ ವಿಧಿವಿಜ್ಞಾನ ವೈದ್ಯಕೀಯ ತಜ್ಞರು ಮೌಲ್ಯಮಾಪನ ಮಾಡಿಸಿದರು.

ಮೊಹಮ್ಮದ್‌ಗೆ ಶೇಕಡಾ 50ರಷ್ಟು ಮಿದುಳು ಶಾಶ್ವತ ಹಾನಿಯಾಗಿದೆ ಎಂಬ ವರದಿಯನ್ನು ಆಧರಿಸಿ, ಯುನೈಟೆಡ್ ಅರಬ್ ಎಮಿರೇಟ್ಸ್‌ ಸುಪ್ರೀಂ ಕೋರ್ಟ್ ಪರಿಹಾರವನ್ನು ಪಾವತಿಸಲು ವಿಮಾ ಕಂಪನಿಗೆ ಆದೇಶಿಸಿದೆ.

ಅದರಂತೆ ಮೊಹಮ್ಮದ್ ಗೆ 11 ಕೋಟಿ ರೂ.ಪರಿಹಾರ ನೀಡುವಂತೆ ಆದೇಶಿಸಲಾಗಿದೆ.   

ವಿದೇಶ

ಪ್ಯೊಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರ ಆಡಳಿತ ನಡೆಯುತ್ತಿದೆ. ಅಲ್ಲಿ ಅಧ್ಯಕ್ಷರಾಗಿರುವ ಕಿಮ್ ಜಾಂಗ್ ಉನ್ ವಿವಿಧ ಹೇಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಉತ್ತರ ಕೊರಿಯಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ದಕ್ಷಿಣ ಕೊರಿಯಾ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯನ್ನು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯವು ಬಿಡುಗಡೆ ಮಾಡಿದೆ, ಇದು ಕೊರಿಯನ್ ನಡುವಿನ ವ್ಯವಹಾರಗಳನ್ನು ನಿರ್ವಹಿಸುತ್ತದೆ. 450 ಪುಟಗಳ ವರದಿಯು 2017 ರಿಂದ 2022 ರವರೆಗೆ ತಮ್ಮ ದೇಶದಿಂದ ಪಲಾಯನ ಮಾಡಿದ 500ಕ್ಕೂ ಹೆಚ್ಚು ಉತ್ತರ ಕೊರಿಯನ್ನರಿಂದ ಸಂಗ್ರಹಿಸಲಾದ ಸಾಕ್ಷ್ಯವನ್ನು ಒಳಗೊಂಡಿದೆ. “ಉತ್ತರ ಕೊರಿಯಾದ ನಾಗರಿಕರ ಬದುಕುವ ಹಕ್ಕಿಗೆ ಹೆಚ್ಚಿನ ಬೆದರಿಕೆ ಇದೆ ಎಂದು ತೋರುತ್ತದೆ” ಎಂದು ಸಚಿವಾಲಯ ವರದಿಯಲ್ಲಿ ತಿಳಿಸಿದೆ.

“ಡ್ರಗ್ ಅಪರಾಧಗಳು, ದಕ್ಷಿಣ ಕೊರಿಯಾದ ವೀಡಿಯೊಗಳ ವಿತರಣೆ ಮತ್ತು ಧಾರ್ಮಿಕ ಹಾಗೂ ಮೂಢನಂಬಿಕೆಯ ಚಟುವಟಿಕೆಗಳು ಸೇರಿದಂತೆ ಮರಣದಂಡನೆಯನ್ನು ಸಮರ್ಥಿಸದ ಕೃತ್ಯಗಳಿಗೆ ಮರಣದಂಡನೆಗಳನ್ನು ವ್ಯಾಪಕವಾಗಿ ನೀಡಲಾಗುತ್ತಿದೆ” ಎಂದು ಅದು ವಿವರಿಸಿದೆ. ವರದಿಯು ಉತ್ತರ ಕೊರಿಯಾದ ಆಡಳಿತದ ಹಿಂಸಾತ್ಮಕ ಕ್ರಮಗಳನ್ನು ವಿವರಿಸಿದೆ. ಗರ್ಭಿಣಿ ಮಹಿಳೆ ತನ್ನ ಮನೆಯಲ್ಲಿ ನೃತ್ಯ ಮಾಡುತ್ತಿದ್ದಾಗ ದಿವಂಗತ ಕಿಮ್ ಇಲ್-ಸಂಗ್ ಅವರ ಭಾವಚಿತ್ರವನ್ನು ತೋರಿಸಿದ ನಂತರ ಅವಳು ಕೊಲ್ಲಲ್ಪಟ್ಟಳು ಎಂದು ಹೇಳಿದೆ. 16 ಮತ್ತು 17 ವರ್ಷ ವಯಸ್ಸಿನ ಆರು ಹದಿಹರೆಯದವರನ್ನು ಗುಂಡಿಕ್ಕಿ ಗಲ್ಲಿಗೇರಿಸಲಾಗಿದೆ ಎಂದು ವರದಿ ಹೇಳಿದೆ. ಮಕ್ಕಳಿಗೆ ಮರಣದಂಡನೆ, ಆರು ತಿಂಗಳ ಗರ್ಭಿಣಿಗೆ ಮರಣದಂಡನೆಯಂತಹ ಅತ್ಯಂತ ಕ್ರೂರ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಉತ್ತರ ಕೊರಿಯಾ ಹೊಂದಿದೆ. ಅದೇ ರೀತಿ ಕಡಿಮೆ ಎತ್ತರವಿರುವ ಮಹಿಳೆಯರಿಗೆ ಅಂಡಾಶಯಗಳನ್ನು ತೆಗೆಯಲಾಗುತ್ತಿದೆ ಎಂಬ ಆರೋಪವನ್ನೂ ದಕ್ಷಿಣ ಕೊರಿಯಾ ಮಾಡಿದೆ. North Korea committed horrific human rights violations including the execution of a six-month pregnant woman who pointed at the portrait of Kim Il-sung, the country’s founder. An extensive South Korean report which has been publicised for the first time, Kim Jong-un is said to have ordered the execution of homosexuals, religious persons and North Koreans who tried to flee the country.

ವಿದೇಶ

ವ್ಯಾಟಿಕನ್ ನಗರ: ಪೋಪ್ ಫ್ರಾನ್ಸಿಸ್ (ವಯಸ್ಸು 86). ಅವರು ಇದ್ದಕ್ಕಿದ್ದಂತೆ ರೋಮ್‌ನ ಜೆಮೆಲ್ಲಿ ಆಸ್ಪತ್ರೆ ದಾಖಲಾಗಿದ್ದಾರೆ. ಅಲ್ಲಿ ಅವರು ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಇಟಾಲಿಯನ್ ಮಾಧ್ಯಮಗಳು ವರದಿ ಮಾಡಿವೆ.

ಈ ಹಿನ್ನಲೆಯಲ್ಲಿ ಶ್ವಾಸಕೋಶದ ಸೋಂಕಿನಿಂದ ಪೋಪ್ ಫ್ರಾನ್ಸಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವ್ಯಾಟಿಕನ್ ಅಧಿಕೃತವಾಗಿ ಪ್ರಕಟಿಸಿದೆ. ಇದರ ಬಗ್ಗೆ ಮಾಹಿತಿ ನೀಡಿದ ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ, ‘ಪೋಪ್ ಫ್ರಾನ್ಸಿಸ್ ಅವರು ಕೆಲವು ದಿನಗಳಿಂದ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರು. ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಲಿದ್ದಾರೆ. ಅವರಿಗೆ ಕೊರೊನಾ ಸೋಂಕು ಇಲ್ಲ’ ಎಂದು ಹೇಳಿದರು.

ಪೋಪ್ ಫ್ರಾನ್ಸಿಸ್ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೀಲು ನೋವಿನಿಂದಾಗಿ ಗಾಲಿ ಕುರ್ಚಿಯ ಮೇಲೆ ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದರು. ಕಳೆದ ಜುಲೈ 2021ರಲ್ಲಿ, ಅವರ ದೊಡ್ಡ ಕರುಳಿನ 13 ಇಂಚುಗಳನ್ನು ತೆಗೆದುಹಾಕಲಾಯಿತು. ಪೋಪ್ ಫ್ರಾನ್ಸಿಸ್ ಅವರು ಹದಿಹರೆಯದವರಾಗಿದ್ದಾಗ ಉಸಿರಾಟದ ಸೋಂಕಿನಿಂದ ಶ್ವಾಸಕೋಶದ ಒಂದು ಭಾಗವನ್ನು ತೆಗೆದು ಹಾಕಲಾಗಿತ್ತು ಎಂಬುದು ಗಮನಾರ್ಹ. ಪೋಪ್ ಫ್ರಾನ್ಸಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಇಂದು ಬೆಳಿಗ್ಗೆ ಅವರ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಯಿತು. Pope Francis has been hospitalised and has been diagnosed with a respiratory infection. The tests have confirmed the infection was not Covid-related. Hospital authorities said Pope Francis will remain in the hospital for the coming days.

ವಿದೇಶ

ಕೊಲಂಬೊ: ಬ್ಯುಸಿನೆಸ್ ವೀಸಾದಲ್ಲಿ ಶ್ರೀಲಂಕಾಕ್ಕೆ ಹೋಗಿ ಧರ್ಮ ಪ್ರಚಾರ ಮಾಡಿ, ಜನರನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದ್ದಕ್ಕಾಗಿ ಪಾಲ್ ದಿನಕರನ್ ಅವರ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕ್ರಿಶ್ಚಿಯನ್ ಧರ್ಮ ಪ್ರಚಾರಕ ಪಾಲ್ ದಿನಕರನ್, ಜೀಸಸ್ ಕಾಲ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕಳೆದ ವಾರ ವ್ಯಾಪಾರ ವೀಸಾದ ಮೇಲೆ ಶ್ರೀಲಂಕಾಗೆ ಹೋಗಿದ್ದ ಜೀಸಸ್ ಕಾಲ್ಸ್ ತಂಡವು, ಶ್ರೀಲಂಕಾ ಜಾಫ್ನಾದಲ್ಲಿ ಮಣಿಬೆ ಮತ್ತು ರಸವಿನ್ ಪ್ರದೇಶಗಳಲ್ಲಿ 3 ದಿನಗಳು ಧಾರ್ಮಿಕ ಪ್ರಚಾರ ಸಭೆ ನಡೆಯಲಿದೆ ಎಂದು ಕರಪತ್ರಗಳನ್ನು ವಿತರಿಸಿತು. “This is Shiva Bhumi. Evangelists don’t set foot”, Sri Lankan officials send back pastor Paul Dinakaran after Hindus protest.

ಇದನ್ನು ತೀವ್ರವಾಗಿ ವಿರೋಧಿಸಿದ ಜಾಫ್ನಾದಲ್ಲಿರುವ ಶಿವಸೇನಾ ಸಂಘಟನೆ, ‘ವ್ಯಾಪಾರ ವೀಸಾದ ಮೇಲೆ ಶ್ರೀಲಂಕಾಕ್ಕೆ ಬಂದಿರುವ ಪಾಲ್ ದಿನಕರನಿಗೆ ಇಲ್ಲಿ ಧಾರ್ಮಿಕ ಪ್ರಚಾರಕ್ಕೆ ಅವಕಾಶ ಕೊಡಬಾರದು ಎಂದು ಅಲ್ಲಿನ ಜನರಲ್ಲಿ ಮನವಿ ಮಾಡಿಕೊಂಡಿತು. ನಂತರ ಮಣಿಬೆ ಪ್ರದೇಶದ 50ಕ್ಕೂ ಹೆಚ್ಚು ಹಿಂದೂಗಳು ಸೇರಿ ಜಾಫ್ನಾ ಪೊಲೀಸ್ ಡಿಐಜಿಗೆ ದೂರು ಪತ್ರವನ್ನು ಕಳುಹಿಸಿದರು ಅದರಂತೆ ಜಾಫ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾಲ್ ದಿನಕರನ್ ಮತ್ತು ಅವರ ತಂಡವನ್ನು ವಲಸೆ ಅಧಿಕಾರಿಗಳು ತಡೆದು ನಿಲ್ಲಿಸಿ, ಧರ್ಮ ಪ್ರಚಾರ ಮಾಡದಂತೆ ಎಚ್ಚರಿಕೆಯನ್ನು ಕೊಟ್ಟು ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೋಂಡು ವಾಪಸ್ಸು ಕಳುಹಿಸಿದ್ದಾರೆ. Paul Dhinakaran And Jesus Calls Team Stopped At Jaffna Airport By Immigration Officials, Passport Confiscated To Prevent Religious Preaching.

ದೇಶ ರಾಜಕೀಯ ವಿದೇಶ

ಭಾರತದ ಪ್ರಜಾಪ್ರಭುತ್ವವು ಭಾಗಶಃ ಸ್ವತಂತ್ರವಾಗಿದೆ ಎಂದು ಅಮೆರಿಕದ ಫ್ರೀಡಂ ಹೌಸ್ ಎಂಬ ಪ್ರಜಾಪ್ರಭುತ್ವ ಸಂಶೋಧನಾ ಸಂಸ್ಥೆ ಅಂದಾಜು ಮಾಡಿದೆ.  ಸ್ವೀಡನ್‌ನ ವಿ-ಡೆಮ್ ಇದನ್ನು ‘ಚುನಾಯಿತ ಸರ್ವಾಧಿಕಾರ’ ಎಂದು ವ್ಯಾಖ್ಯಾನಿಸಿದೆ. (ಈ ಸಂಸ್ಥೆಯು ದೇಶಗಳ ಸರ್ಕಾರಗಳ ಸ್ವರೂಪವನ್ನು ಪರಿಶೀಲಿಸುತ್ತದೆ ಮತ್ತು ಮೌಲ್ಯಮಾಪನ ಮಾಡುತ್ತದೆ) ಲಂಡನ್ ನಿಂದ ಪ್ರಕಟವಾಗುವ ಎಕನಾಮಿಸ್ಟ್ ನಿಯತಕಾಲಿಕದ ಸಂಶೋಧನಾ ಸಂಸ್ಥೆಯ ಪ್ರಕಾರ ಭಾರತ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 53ನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳುತ್ತಿದೆ. ಈ ಪ್ರಜಾಸತ್ತಾತ್ಮಕ ಪತನದಲ್ಲಿ ಭಾರತದ ಸಂಸತ್ತಿನ ಉಭಯ ಸದನಗಳ ಸದಸ್ಯರ ಪಾತ್ರವೂ ಅಡಗಿದೆ. ಭಾರತೀಯ ಸಂಸತ್ತು ಹೇಗೆ ದುರ್ಬಲವಾಯಿತು ಎಂಬುದರ ಕಿರು ಪಟ್ಟಿಯನ್ನು ನಾನು ನಿಮಗೆ ನೀಡುತ್ತೇನೆ.

ಜನರಿಗೆ ಬೇಕಾಗಿರುವುದು ಏನು?
ರಾಜ್ಯಸಭೆಯ ನಿಯಮ ಸಂಖ್ಯೆ 267ರ ಅಡಿಯಲ್ಲಿ, (ಸಂಸತ್ತಿಗೂ ಇದೇ ರೀತಿಯ ನಿಯಮವಿದೆ) ಜನರ ಮೇಲೆ ಪರಿಣಾಮ ಬೀರುವ ಅಥವಾ ಜನರು ತಿಳಿದುಕೊಳ್ಳಬೇಕಾದ ಮತ್ತು ತಕ್ಷಣವೇ ಚರ್ಚಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲು, ವಿರೋಧ ಪಕ್ಷಗಳ ಸದಸ್ಯರು ಹಲವಾರು ಔಪಚಾರಿಕ ಮನವಿಗಳನ್ನು ಸಲ್ಲಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಉಭಯ ಸದನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಇಂತಹ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಭಾರತದ ಭೂಪ್ರದೇಶಲ್ಲಿ ಚೀನಾ ಸೇನೆಯ ಒಳನುಗ್ಗುವಿಕೆ ಮತ್ತು ಅದಾನಿ ಸಮೂಹ ಕುರಿತು ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಪ್ರಕಟಿಸಿದ ವರದಿಯ ಬಗ್ಗೆ ಚರ್ಚಿಸಲು ಅವರು ಒತ್ತಾಯಿ ಮಾಡಿದರು. ಆದರೆ, ಪ್ರತಿಯೊಂದು ಮನವಿಯನ್ನೂ ಸ್ಪೀಕರ್ ತಿರಸ್ಕರಿಸಿದ್ದಾರೆ. ‘ಯಾವುದನ್ನು ಚರ್ಚಿಸಬೇಕು ಎಂದು ಅಧಿಕೃತ ಅಧ್ಯಯನ ಸಮಿತಿ ಮುಂಚಿತವಾಗಿ ನಿರ್ಧರಿಸಿದ್ದನ್ನು ಹೊರತುಪಡಿಸಿ, ಸಾರ್ವಜನಿಕ ಪರವಾಗಿ ಚರ್ಚಿಸಲು ತುರ್ತು ಏನೂ ಇಲ್ಲ. ಭಾರತೀಯ ಜನರು ಸುರಕ್ಷಿತವಾಗಿ ಮತ್ತು ತೃಪ್ತರಾಗಿದ್ದಾರೆ’ ಎಂದು ತಿಳೀಸಿ, ಸಂಸತ್ತಿನಲ್ಲಿ ತುರ್ತು ಚರ್ಚೆಯ ಅಗತ್ಯವಿರುವ ಯಾವುದಕ್ಕೂ ಅವರು ತಲೆಕೆಡಿಸಿಕೊಳ್ಳಲಿಲ್ಲ.

ರಾಷ್ಟ್ರಪತಿ ಶೈಲಿಯಲ್ಲಿ ಪ್ರಧಾನಿ!
ಪ್ರಧಾನಿ ಲೋಕಸಭೆಯ ಸದಸ್ಯರಾಗಿದ್ದರೆ ಅವರನ್ನು ಸದನದ ‘ನಾಯಕರು’ ಎಂದು ಕರೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ 17ನೇ ಲೋಕಸಭೆಯ ನಾಯಕರು. ಆದರೆ ಅವರು ಸದನಗಳಿಗೆ ಬರುವುದೇ ಅಪರೂಪವಾಗಿದೆ. ಅಧ್ಯಕ್ಷರ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗಳಿಗೆ ವಾರ್ಷಿಕವಾಗಿ ಪ್ರತಿಕ್ರಿಯಿಸುತ್ತಾರೆ. ಈ ಎರಡು ಸಂದರ್ಭಗಳನ್ನು ಬಿಟ್ಟರೆ ಮೋದಿ ಅವರು ಸದನದಲ್ಲಿ ದೊಡ್ಡದಾಗಿ ಮಾತನಾಡಿದ್ದು ನನಗೆ ನೆನಪಿಲ್ಲ. ಸಂಸತ್ತಿನಲ್ಲಿ ಕೇಳುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸುವುದೂ ಇಲ್ಲ. ಯಾರಾದರು ಒಬ್ಬ ಸಚಿವರು ಅವರ ಪರವಾಗಿ ಸದನದಲ್ಲಿ ಉತ್ತರಿಸುತ್ತಾರೆ. (ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರಧಾನ ಮಂತ್ರಿಯೇ ಪ್ರತಿ ಬುಧವಾರ ಉತ್ತರಿಸುವ ಪ್ರಶ್ನೆ-ಉತ್ತರ ಸಮಯ ವಿಧಾನ, ಭಾರತದಲ್ಲಿಯೂ ಇರಬೇಕಿತ್ತು ಎಂದು ನಾನು ಭಾವಿಸುತ್ತೇನೆ) ಹಿಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಡಾ.ಮನಮೋಹನ್ ಸಿಂಗ್ ಅಥವಾ ಅಟಲ್ ಬಿಹಾರಿ ವಾಜಪೇಯಿ ಅವರ ವಿಧಾನಕ್ಕಿಂತ ಮೋದಿಯವರ ವಿಧಾನ ವಿಭಿನ್ನವಾಗಿದೆ. ಪ್ರಧಾನಿ ರಾಷ್ಟ್ರಪತಿಯಂತೆ ವರ್ತಿಸುತ್ತಾರೆ. ಪ್ರಧಾನಿಯವರು ಹೀಗೆಯೇ ರಾಷ್ಟ್ರಪತಿಯಾಗಿ ಮುಂದುವರಿದರೆ, ಎಲ್ಲದರಲ್ಲೂ ರಾಷ್ಟ್ರಪತಿಯಂತೆ ವರ್ತಿಸಲು ಆರಂಭಿಸಿದರೆ ಭಾರತ ಸಂಸದೀಯ ಪ್ರಜಾಪ್ರಭುತ್ವವಾಗಿ ಹೆಚ್ಚು ದಿನ ಉಳಿಯುವುದಿಲ್ಲ.

ಸಾಂದರ್ಭಿಕ ಚಿತ್ರ

ಸದನ ಕೆಲಸ ಮಾಡಬಾರದೇ?
ಬ್ರಿಟನ್‌ನ ಲೋಕಸಭೆಯು ವರ್ಷದಲ್ಲಿ 135 ದಿನಗಳ ಕಾಲ ಸಭೆ ಸೇರುತ್ತದೆ. ಭಾರತದಲ್ಲಿ 2021ರಲ್ಲಿ ಲೋಕಸಭೆಯು 59 ದಿನಗಳವರೆಗೆ ಮತ್ತು ರಾಜ್ಯಸಭೆಯು 58 ದಿನಗಳವರೆಗೆ ಮಾತ್ರ ಸಭೆ ಸೇರಿತ್ತು. 2022ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ಕೇವಲ 56 ದಿನಗಳ ಕಾಲ ನಡೆದವು. ಸದನದಲ್ಲಿ ಗದ್ದಲ ಉಂಟಾಗಿ ಬಹುತೇಕ ದಿನಗಳು ಕಲಾಪ ನಡೆಯದೆ ಮುಂದೂಡಲ್ಪಟ್ಟವು. ದಿವಂಗತ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು ಒಮ್ಮೆ “ಸದಗಳಲ್ಲಿ ಏನೂ ನಡೆಯದಂತೆ ಅಡ್ಡಿಪಡಿಸುವುದು ಮತ್ತು ಅದನ್ನು ತಡೆಯುವುದು ಸಂಸದೀಯ ಕಾರ್ಯವಿಧಾನದಲ್ಲಿ ಕಾನೂನುಬದ್ಧ ತಂತ್ರವಾಗಿದೆ” ಎಂದು ಹೇಳಿದ್ದರು. 2010ರ ಚಳಿಗಾಲದ ಅಧಿವೇಶನದ ಉದ್ದಕ್ಕೂ, ಒಂದು ಸಚಿವರ ರಾಜೀನಾಮೆಗೆ ಆಗ್ರಹಿಸಿ, ಸಂಸದೀಯ ಜಂಟಿ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ, ವಿರೋಧ ಪಕ್ಷಗಳು ಅಡ್ಡಿಪಡಿಸಿದ್ದರಿಂದ ಯಾವುದೇ ಕ್ರಮವಿಲ್ಲದೆ ಅಧಿವೇಶನವು ಮುಕ್ತಾಯಗೊಂಡಿತು. ಆ ಅಧಿವೇಶನದಲ್ಲಿ ಲೋಕಸಭೆಯು ತನ್ನ ನಿಗದಿತ ಸಮಯದ 6% ಮತ್ತು ರಾಜ್ಯಸಭೆ 2% ಮಾತ್ರ ಕಾರ್ಯನಿರ್ವಹಿಸಿತು.

ಇತ್ತೀಚಿನ ದಿನಗಳಲ್ಲಿ ಈ ತಂತ್ರವನ್ನು ಮತ್ತಷ್ಟು ಸುಧಾರಿಸಲಾಗಿದೆ ಮತ್ತು ಬಲಪಡಿಸಲಾಗಿದೆ. ಪ್ರಸಕ್ತ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಆಡಳಿತ ಪಕ್ಷವೇ ಕಲಾಪ ನಡೆಯದಂತೆ ತಡೆದು ಪ್ರತಿ ದಿನವೂ ಅವಾಂತರವನ್ನು ಸೃಷ್ಟಿಸುತ್ತಿದೆ. ಕೆಲವೇ ದಿನಗಳು ಚರ್ಚೆಗಳಾಗಿ ಹೆಚ್ಚಿನ ದಿನಗಳಲ್ಲಿ ಗದ್ದಲ-ಮುಂದೂಡಿಕೆಗಳು ಆದರೆ, ಸಂಸತ್ ಅಧಿವೇಶನವೇ ಅನಗತ್ಯವಾಗಿಬಿಡುತ್ತದೆ. ಸರ್ಕಾರ ಮಾಂಡಿಸುವ ವಿಧೇಯಕಗಳು ಚರ್ಚೆಯಿಲ್ಲದೆ ಅಂಗೀಕಾರ ಪಡೆದುಕೊಳ್ಳುತ್ತವೆ. ಈ ಹಿಂದೆಯೂ ಕೆಲವೊಮ್ಮೆ ಈ ರೀತಿಯಾಗಿದೆ. ಇನ್ನು ಮುಂದೆ ಸಂಸತ್ತಿನ ಸಭೆಗಳು ಕೆಲವೇ ದಿನಗಳು ಸೇರಿ, ಗದ್ದಲ, ಆರೋಪ-ಪ್ರತ್ಯಾರೋಪದ ಮಧ್ಯೆಯೇ ವಿಧೇಯಕಗಳ ಮೇಲೆ  ಚರ್ಚೆಯಾಗದೆ ಮತದಾನವನ್ನು ಮಾಡಿ ತಮ್ಮ ಕರ್ತವ್ಯವನ್ನು ಮುಗಿಸಿಕೊಳ್ಳುತ್ತದೆ.

ಚರ್ಚೆಗಳಿಲ್ಲದ ಸಂಸತ್ತು:
ಸಂಸತ್ತಿನ ಉಭಯ ಸದನಗಳು ಜನರ ಸಮಸ್ಯೆಗಳನ್ನು ಚರ್ಚಿಸಲಿಕಾಗಿಯೇ ಇರುವುದು. ಭಾರತದ ಸಂಸತ್ತಿನಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ. 1962ರ ಚೀನಾದ ಆಕ್ರಮಣದಲ್ಲಿ ಭಾರತದ ಅವಮಾನಕರ ಸೋಲಿನ ಬಗ್ಗೆ ಸಂಸತ್ತು ಚರ್ಚೆ ನಡೆಸಿತು. ಹರಿದಾಸ್ ಮುಂದ್ರಾ ಕಂಪನಿಯಲ್ಲಿ ಎಲ್.ಐ.ಸಿ ಹೂಡಿಕೆ ಮಾಡಿದ ಬಗ್ಗೆ ಸಂಸತ್ತ್ ಚರ್ಚೆ ಮಾಡಿದೆ. ಬೋಫೋರ್ಸ್ ಫಿರಂಗಿಗಳ ಆಮದಿಗೆ ಕಮಿಷನ್ ಪಡೆಯಲಾಗಿದೆ ಎಂಬ ಆರೋಪದ ಮೇಲೆ ಸದನದಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆಯೂ ಚರ್ಚೆ ನಡೆದಿರುತ್ತದೆ.

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಈ ಎಲ್ಲಾ ಚರ್ಚೆಗಳು ಮತದಾನವಿಲ್ಲದೆ ಅಂತಿಮಗೊಂಡ ವಿಷಯಗಳಾಗಿವೇ. ಹಾಗಾಗಿ ಸರ್ಕಾರ ಚರ್ಚೆಗೆ ಹೆದರುವ ಅಗತ್ಯವಿಲ್ಲ. ಅಲ್ಲದೆ ಈ ಸರ್ಕಾರಕ್ಕೆ ಸಂಸತ್ತಿನಲ್ಲಿ ಬಹುಮತದ ಬೆಂಬಲವಿದೆ. ಹಾಗಾಗಿ ಚರ್ಚೆಯ ನಂತರ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯ ಪಡುವ ಅಗತ್ಯವಿಲ್ಲ. ಆದರೆ ಈ ಸರ್ಕಾರ ಯಾವ ವಿಚಾರಕ್ಕಾಗಿ ಅಂಜುತ್ತಿದೆ ಎಂದರೆ, ವಿರೋಧ ಪಕ್ಷಗಳು ಸರ್ಕಾರಕ್ಕೆ ಮುಜುಗರ ತರುವ ವಿಷಯಗಳ ಬಗ್ಗೆ ಸದನದಲ್ಲಿ ಮಾತನಾಡುತ್ತವೆ ಎಂದೇ ಅಂಜಿಕೊಂಡಿದೆ. ಭಾರತವು ಚರ್ಚೆಗಳಿಲ್ಲದ ಸಂಸತ್ತು ಎಂಬ ಯುಗವನ್ನು ಪ್ರವೇಶಿಸಿದೆಯೇ? ‘ಹೌದು’ ಎಂದೇ ಹೆದರುತ್ತಿದ್ದೇನೆ; ನನ್ನ ಭಯ ನಿಜವಾಗಿದ್ದರೆ, ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವಕ್ಕಾಗಿ ನಾವು ಶೀಘ್ರದಲ್ಲೇ ‘ವಿದಾಯ ಸಮಾರಂಭ’ವನ್ನು ನಡೆಸಬೇಕಾಗಿದೆ.

ಸಾಂದರ್ಭಿಕ ಚಿತ್ರ

ಕಾದಿರುವ ಬೆದರಿಕೆ:
ಹೊಸ ಅಧಿವೇಶನಕ್ಕಾಗಿ ಸಂಸತ್ತಿನ ಸಭೆ ಸೇರುವುದಾಗಿ ಕಲ್ಪಿಸಿಕೊಳ್ಳಿ; ಉಭಯ ಸದನಗಳ ಎಲ್ಲಾ ಸದಸ್ಯರು ಒಂದು ದೊಡ್ಡ ಸಭಾಂಗಣದಲ್ಲಿ ಒಟ್ಟುಗೂಡಿರುವುದಾಗಿ ಊಹಿಸಿಕೊಳ್ಳಿ; ಭಾರತದ ಗಣರಾಜ್ಯದ ಅಧ್ಯಕ್ಷರು ಅದರ ಎಲ್ಲಾ ಸದಸ್ಯರಿಂದ ಚುನಾಯಿತರಾಗಿದ್ದಾರೆ ಎಂದು ಕಲ್ಪಿಸಿಕೊಳ್ಳಿ; ಆ ಅಭ್ಯರ್ಥಿಯ ವಿರುದ್ಧ ಯಾರೂ ಮತ ಚಲಾಯಿಸಲು ಆಗುವುದಿಲ್ಲ ಮತ್ತು ಮತದಾನದಿಂದ ಯಾರೊಬ್ಬರೂ ದೂರವಿರಲು ಸಾದ್ಯವಿಲ್ಲ. How is Indian democracy falling?

ವಾಸ್ತವವಾಗಿ ಅಲ್ಲಿ ಒಬ್ಬರೇ ಅಭ್ಯರ್ಥಿ ಇರುತ್ತಾರೆ. ದೇಶದ ಸಮಸ್ತ ಜನತೆ ಈ ಚುನಾವಣಾ ಫಲಿತಾಂಶವನ್ನು ‘ಜನತಂತ್ರದ ವಿಜಯ’ ಎಂದು ಸಂಭ್ರಮಿಸುತ್ತಾರೆ. ಇದು ಭಾರತದಲ್ಲಿ ಸಾದ್ಯವೇ? ಖಂಡಿತ ಸಾದ್ಯವಿದೆ! ಕಾರಣ ನಾವು ಈಗ ನಿರಂತರವಾಗಿ, ಏಕರೂಪವಾಗಿ; ಒಂದು ಪಕ್ಷದ ಆಡಳಿತದತ್ತ ಸಾಗುತ್ತಿದ್ದೇವೆ. 15 ರಾಜ್ಯಗಳು ಒಂದೇ ರಾಜಕೀಯ ಪಕ್ಷದಿಂದ ಆಳ್ವಿಕೆ ನಡೆಸುತ್ತಿರುವ ಹಿನ್ನಲೆಯಲ್ಲಿ, ಆ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಒಟ್ಟಾಗಿ ಲೋಕಸಭೆಯಲ್ಲಿ 362 ಮತ್ತು ರಾಜ್ಯಸಭೆಯಲ್ಲಿ 163 ಸದಸ್ಯರನ್ನು ಹೊಂದಿರುವುದರಿಂದ, ಭಾರತವನ್ನು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಸ್ಥಾನಮಾನದಿಂದ ‘ಪ್ರಜೆಗಳ ಗಣರಾಜ್ಯ’ ಎಂದು ಬದಲಾಯಿಸುವುದನ್ನು ಯಾರೂ ತಡೆಯಲು ಸಾದ್ಯವಿಲ್ಲ.How is Indian democracy falling?

ಈ ಅಪಾಯವು ಸ್ವಲ್ಪ ದೂರದಲ್ಲಿದೆ. ಆದರೆ, ಅದು ನಡೆಯುವುದಿಲ್ಲ ಎಂದು ನಿರಾಕರಣೆ ಮಾಡಲಾಗದು. ಭಾರತ ಹೀಗೆ ಪ್ರಜೆಗಳ ಗಣರಾಜ್ಯವಾಗಿ ಬದಲಾದಾಗ, ಭಾರತದ ಪ್ರಜಾಸತ್ತಾತ್ಮಕ ಗಣರಾಜ್ಯವು ಕೊನೆಯದಾಗಿ ಅದು ವಿಶ್ರಾಂತಿ ತೆಗೆದುಕೊಳ್ಳಬೇಕಾದ ಸ್ಥಳಕ್ಕೆ ಹೋಗಿ ಸೇರಿರುತ್ತದೆ! How is Indian democracy falling?

ಕೃಪೆ: arunchol.com
ಕನ್ನಡಕ್ಕೆ: ಡಿ.ಸಿ.ಪ್ರಕಾಶ್, ಸಂಪಾದಕರು,
ಡೈನಾಮಿಕ್ ಲೀಡರ್

ವಿದೇಶ

ಸೊಮಾಲಿಯಾ: ಸೊಮಾಲಿಯಾದಲ್ಲಿ 40 ವರ್ಷಗಳಲ್ಲಿ ಕಾಣದ ಭೀಕರವಾದ ಕ್ಷಾಮ ಎದುರಾಗಿದೆ. ಕಳೆದ ವರ್ಷವೊಂದರಲ್ಲೇ 43,000 ಜನರು ಕ್ಷಾಮದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಇದು ಆಫ್ರಿಕನ್ ಪರ್ಯಾಯ ದ್ವೀಪದಲ್ಲಿ ಬರದಿಂದ ಸಂಭವಿಸಿದ ಮೊದಲ ಅಧಿಕೃತ ಸಾವಿನ ಸಂಖ್ಯೆಯಾಗಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ಕನಿಷ್ಠ 18,000 ದಿಂದ 34,000 ವರೆಗೆ ಜನರು ಸಾವನ್ನಪ್ಪುತ್ತಾರೆ ಎಂದು ಊಹಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಮತ್ತು ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ, ಸೊಮಾಲಿಯಾ ಮತ್ತು ನೆರೆಯ ದೇಶಗಳಾದ ಇಥಿಯೋಪಿಯಾ ಮತ್ತು ಕೀನ್ಯಾ ಸತತ 6 ವರ್ಷಗಳಿಂದ ಮಳೆಯಿಲ್ಲದೆ ಬರಗಾಲಕ್ಕೆ ತುತ್ತಾಗಿದೆ. Somalia faces climate emergency and famine. 

ಏತನ್ಮಧ್ಯೆ, ಏರುತ್ತಿರುವ ಜಾಗತಿಕ ಆಹಾರದ ಬೆಲೆಗಳು ಮತ್ತು ಉಕ್ರೇನ್‌ನಲ್ಲಿನ ಯುದ್ಧವು ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ. ಆದರೆ ಆ ದೇಶವೊಂದರಲ್ಲೇ 6 ದಶಲಕ್ಷಕ್ಕೂ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿರುವುದರಿಂದ ಪರಿಸ್ಥಿತಿ ಭೀಕರವಾಗಿದೆ ಎಂದು ಹೇಳಲಾಗುತ್ತಿದೆ. ಬರಗಾಲದಿಂದ ಆಹಾರದ ಕೊರತೆ, ಕಾಲರಾದಂತಹ ರೋಗಗಳು, ಅಪೌಷ್ಟಿಕತೆ ಮತ್ತು ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪ್ರತಿದಿನ 10,000 ಮಕ್ಕಳಲ್ಲಿ ಇಬ್ಬರು ಸಾಯುತ್ತಾರೆ ಎಂದು ವರದಿಯಾಗಿದೆ. Somalia faces climate emergency and famine. 

Al-Shabab

ನೈಋತ್ಯ ಸೊಮಾಲಿಯಾದ ಬೇ ಮತ್ತು ಬಾಗೂಲ್ ಹಾಗೂ ರಾಜಧಾನಿ ಮೊಗಾದಿಶುವಿನಲ್ಲಿ ಸ್ಥಳಾಂತರಗೊಂಡ ಜನರು ಸಹ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಸೊಮಾಲಿಯಾ ತನ್ನ ಪೂರ್ವ ಆಫ್ರಿಕಾದ ಅಂಗ ಸಂಸ್ಥೆ ಅಲ್-ಶಬಾಬ್‌ನ ಸಾವಿರಾರು ಹೋರಾಟಗಾರರ ವಿರುದ್ಧ ಹೋರಾಡುತ್ತಿರುವುದರಿಂದ ಹವಾಮಾನ ಮತ್ತು ಭದ್ರತೆಯ ಕೊರತೆಯಿಂದಾಗಿ ಸಾವಿರಾರು ಜಾನುವಾರುಗಳು ಸಹ ಸಾವನ್ನಪ್ಪಿವೆ. 3.8 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ಸಂಸ್ಥೆ ಹೇಳುತ್ತದೆ. ಕಳೆದ ತಿಂಗಳು ಬಿಡುಗಡೆಯಾದ ಆಹಾರ ಭದ್ರತಾ ಮೌಲ್ಯಮಾಪನದಲ್ಲಿ, ಈ ವರ್ಷ ಸೊಮಾಲಿಯಾದಲ್ಲಿ ಸುಮಾರು ಅರ್ಧ ಮಿಲಿಯನ್ ಮಕ್ಕಳು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲಲಿದ್ದಾರೆ ಎಂದು ಉಲ್ಲೇಖಿಸಿದೆ. Somalia faces climate emergency and famine.  

ದೇಶ ವಿದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಅದರ ಭಾಗವಾಗಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಸಂಸದ ರಾಹುಲ್‌ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯ ಹೆಸರಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡು ದೇಶದ ಜನರನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಿದರು. ಈ ಏಕತಾ ಯಾತ್ರೆಗೆ ಜನ ಅದ್ಧೂರಿ ಸ್ವಾಗತ ನೀಡಿದ್ದರು.

ಏಕತಾ ಯಾತ್ರೆ ಮುಗಿಸಿ ಇಂಗ್ಲೆಂಡ್ ರಾಜಧಾನಿ ಲಂಡನ್ ಗೆ ತೆರಳಿದ ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಅಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್ ಭಾಗವಹಿಸುತ್ತಿದ್ದಾರೆ. ಲಂಡನ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರ ಮೇಲೆ ನಿಗಾ ಇಡಲಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಇದೇ ವೇಳೆ ಬೆಲೆಯೂ ಏರಿಕೆಯಾಗಿದೆ. ಭಾರತದ ಸಂಪೂರ್ಣ ಆರ್ಥಿಕತೆಯನ್ನು ಒಬ್ಬರು ಅಥವಾ ಇಬ್ಬರು ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ಜನರು ತಮ್ಮ ಆರ್ಥಿಕತೆಯನ್ನು ಕಳೆದುಕೊಂಡಿದ್ದಾರೆ. ಅಮೆರಿಕ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳ ಉತ್ಪಾದನೆ ಕುಸಿದು ಚೀನಾಕ್ಕೆ ಸ್ಥಳಾಂತರವಾಗುತ್ತಿದೆ’ ಎಂದು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Kiran Rijiju

ಇದರಿಂದ ಕೆಂಡಾಮಂಡಲರಾದ ಬಿಜೆಪಿ ಸದಸ್ಯರು ‘ರಾಹುಲ್ ಗಾಂಧಿ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಯನ್ನು ಕೆಡಿಸಿದ್ದಾರೆ’ ಎಂದು ತೀವ್ರ ಟೀಕೆ ಮಾಡುತ್ತಿದ್ದಾರೆ. ಈ ಸಂಬಂಧ ಕೇಂದ್ರ ಕಾನೂನು ಸಚಿವ ರಿಜಿಜು ಮಾತನಾಡಿ, ರಾಹುಲ್ ಗಾಂಧಿಯ ಹೆಸರು ಹೇಳದೆ, ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಮಸಿ ಬಳಿಯುವ ಉದ್ದೇಶದಿಂದ ಕೆಲವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಈ ಪ್ರಯತ್ನ ಎಂದಿಗೂ ಯಶಸ್ವಿಯಾಗುವುದಿಲ್ಲ. ಅಮೆರಿಕ ಬಹುಶಃ ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವಾಗಿದೆ. ಆದರೆ ಭಾರತವು ಪ್ರಜಾಪ್ರಭುತ್ವದ ತಾಯಿನಾಡು. ನ್ಯಾಯಾಲಯಗಳು ವಿರೋಧ ಪಕ್ಷಗಳಂತೆ ವರ್ತಿಸಬೇಕು ಎಂದು ಅವರು ಭಾವಿಸುತ್ತಿದ್ದಾರೆ. ಅವರು ಸರ್ಕಾರದ ವಿರುದ್ಧ ಮತ್ತು ಅವರ ಪರವಾಗಿ ತೀರ್ಪುಗಳನ್ನು ಬಯಸುತ್ತಿದ್ದಾರೆ. ಆದರೆ ಅದು ಆಗದ ಕಾರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ’ ಎಂದು ತೀವ್ರವಾಗಿ ಟೀಕಿಸಿದ್ದರು.

Jayaram Ramesh

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯರಾಮ್ ರಮೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಇದಕ್ಕೆ ವಿವರಣೆ ನೀಡಿದ್ದಾರೆ: ‘ರಾಹುಲ್ ಗಾಂಧಿ ಅವರು ಚೀನಾದಂತಹ ರಾಜ್ಯ-ನಿಯಂತ್ರಿತ ಉದ್ಯಮ ವ್ಯವಸ್ಥೆಯ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ ಮತ್ತು ಭಾರತದಂತಹ ಪ್ರಜಾಪ್ರಭುತ್ವ ದೇಶಗಳಲ್ಲಿ ಉತ್ಪಾದನಾ ಸಾಧನಗಳನ್ನು ಗರಿಷ್ಠಗೊಳಿಸಲು ಒತ್ತು ನೀಡುವ ಅವಶ್ಯಕತೆಯಿದೆ. ಬಿಜೆಪಿಯವರಿಗೆ ಆ ಮಾತಿನ ಸೂಕ್ಷ್ಮತೆ ಅರ್ಥವಾಗುತ್ತಿಲ್ಲ’ ಎಂದರು. ಇದೇ ವೇಳೆ ರಾಹುಲ್ ಭಾಷಣಕ್ಕೆ ಹಲವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

Anyone who tries to discredit India will never succeed: Kiren Rijiju
The comments come in wake of the ruling BJP attacking Congress leader Rahul Gandhi and accusing him of attempting to defame and denigrate India on foreign soil after the latter’s speech at Cambridge. Union minister of law Kiren Rijiju on Monday said that anyone who attempts to discredit India and its institution will never succeed.