ವಿದೇಶ Archives » Page 11 of 12 » Dynamic Leader
October 23, 2024
Home Archive by category ವಿದೇಶ (Page 11)

ವಿದೇಶ

ವಿದೇಶ

ಕೇಂಬ್ರಿಡ್ಜ್: ‘ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ ಮತ್ತು ಬೆದರಿಕೆ ಹಾಕಲಾಗುತ್ತಿದೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

‘ಭಾರತದಲ್ಲಿ ಎಲ್ಲೆಡೆ ಸ್ವಾತಂತ್ರ್ಯ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಗುಪ್ತಚರ ಅಧಿಕಾರಿಯೊಬ್ಬರು ನನ್ನನ್ನು ಎಚ್ಚರಿಸಿದ್ದರು. ‘ನನ್ನ ಮೊಬೈಲ್ ಫೋನ್ ಮತ್ತು ಭಾಷಣಗಳನ್ನು ಟೇಪ್ ಮಾಡಲಾಗುತ್ತಿದೆ’ ಎಂಬ ಆಘಾತಕಾರಿ ವಿಷಯವನ್ನು ಅವರು ನನಗೆ ತಿಳಿಸಿದರು. ಈ ಹಿಂದೆ ಕೂಡ ನನ್ನ ಮತ್ತು ಇತರ ಹಲವು ರಾಜಕೀಯ ನಾಯಕರು ಭಾಷಣಗಳನ್ನು ಪೆಗಾಸಸ್ ತಂತ್ರಾಂಶವನ್ನು ಬಳಸಿ ಬೇಹುಗಾರಿಕೆ ನಡೆಸಲಾಯಿತು. ಇದು ಭಾರತದಲ್ಲಿ ಭಾರೀ ವಿವಾದಕ್ಕೆ ಕಾರಣವಾಯಿತು. ಪ್ರಜಾಪ್ರಭುತ್ವದ ಮೂಲ ರಚನೆಗಳ ಮೇಲೆ ಪ್ರಜಾಸತ್ತಾತ್ಮಕ ದಾಳಿ ನಡೆಯುತ್ತಿದೆ. ಸಂಸತ್ತು, ನ್ಯಾಯಾಂಗ, ಪತ್ರಿಕೋದ್ಯಮದಲ್ಲಿ ಪ್ರಜಾಪ್ರಭುತ್ವದ ಬಿಕ್ಕಟ್ಟು ನೀಡಲಾಗುತ್ತಿದೆ.

ಪಾರ್ಲಿಮೆಂಟ್ ಮುಂದೆ ಛಾಯಾಚಿತ್ರವನ್ನು ತೆಗೆದಿದ್ದನ್ನು ನೋಡಬಹುದು, ಆದರೆ ಈಗ ಪಾರ್ಲಿಮೆಂಟ್ ಮುಂದೆ ಹೋರಾಟ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ನನ್ನ ಮತ್ತು ಹೋರಾಟಗಾರರ ವಿರುದ್ಧ ಅನೇಕ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ಮೊಕದ್ದಮೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ.’ ಎಂದು ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದರು.

ವಿದೇಶ

ಬಾರ್ಸಿಲೋನಾ: ಅಮೇರಿಕ ವಿಜ್ಞಾನಿಯಾದ ಮಾರ್ಟಿನ್ ಕೂಪರ್ ಅವರು 1973ರಲ್ಲಿ ಅಮೆರಿಕದ ಬೀದಿಯಲ್ಲಿ ನಿಂತು ನ್ಯೂಯಾರ್ಕ್ ನಗರದ ವ್ಯಕ್ತಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಇದುವೇ ಮೊದಲ ಸೆಲ್ ಫೋನ್ ಕರೆಯಾಗಿತ್ತು. ಇಟ್ಟಿಗೆಯಂತೆ ಕಾಣುವ ಆ ಸೆಲ್ ಫೋನ್ ಭವಿಷ್ಯದಲ್ಲಿ ಜಾಗತಿಕ ಸಂವಹನ ಸಾಧನವಾಗಿ ದೊಡ್ಡ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ಆ ಸಮಯದಲ್ಲಿ ಮಾರ್ಟಿನ್ ಕೂಪರ್ ಅವರಿಗೆ ತಿಳಿದಿರಲು ಸಾಧ್ಯವಿಲ್ಲ.

ಸೆಲ್ ಫೋನ್ ಕಂಡುಹಿಡಿದು ಈಗ 50 ವರ್ಷಗಳಾಗಿವೆ. ಅರ್ಧ ಶತಮಾನದ ಕಾಲಘಟ್ಟದಲ್ಲಿ ಇಟ್ಟಿಗೆಯಂತೆ ಕಾಣುತ್ತಿದ್ದ ಸೆಲ್ ಫೋನ್, ಈಗ ಕೈಯಲ್ಲಿ ಮರೆಮಾಚುವ ಸಿಕ್ಕ ಸಾಧನವಾಗಿ ಬದಲಾಗಿದೆ. ಅದರ ಹೊರತಾಗಿ ಸಂವಹನದ ಎಲ್ಲೆಗಳನ್ನು ಮೀರಿ, ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳುವ ಕಲೆ ಭಂಡಾರವಾಗಿ ಮತ್ತು ಕೇವಲ ದೂರಸಂಪರ್ಕಕ್ಕಾಗಿ ಆರಂಭವಾದ ಸೆಲ್ ಫೋನ್ ಇಂದು ಜಗತ್ತಿನ ಮಾಹಿತಿಗಳನ್ನು ತಿಳಿದುಕೊಳ್ಳುವ ಸಾಧನವಾಗಿಯೂ ಮಾರ್ಪಟ್ಟಿದೆ. ಇದರ ಜೊತೆಯಲ್ಲಿ ಅಶ್ಲೀಲ ಚಿತ್ರಗಳನ್ನು ಇತರರಿಗೆ ತಿಳಿಯದಂತೆ ರೆಕಾರ್ಡಿಂಗ್ ಮಾಡುವುದು, ಸಂಭಾಷಣೆಗಳನ್ನು ರೆಕಾರ್ಡಿಂಗ್ ಮಾಡುವುದು, ಖಾಸಗಿ ವಿಷಯಗಳನ್ನು ಬಹಿರಂಗಪಡಿಸುವುದು ಮುಂತಾದ ಹಲವಾರು ಅಪರಾದ ಕೃತ್ಯಗಳೂ ನಡೆಯುತ್ತಿದೆ.

ಸೆಲ್ ಫೋನ್ ಕಂಡುಹಿಡಿದ ವಿಜ್ಞಾನಿ ಮಾರ್ಟಿನ್ ಕೂಪರ್ ಅವರಿಗೆ ಈಗ 94 ವರ್ಷ ವಯಸ್ಸಾಗಿದೆ. ಸೆಲ್ ಫೋನಿನ ಪ್ರಸ್ತುತ ಸ್ಥಿತಿಯ ಬಗ್ಗೆ ಅವರಲ್ಲಿ ಕೇಳಿದಾಗ, ‘ನಾನು ಸೆಲ್ ಫೋನ್‌ನ ಕಪ್ಪು ಪುಟಗಳ ಬಗ್ಗೆ ಚಿಂತಿಸುತ್ತಿದ್ದೇನೆ. ಆದರು, ಅದರ ಅಗಾಧ ಬೆಳವಣಿಗೆಯು ಭವಿಷ್ಯಕ್ಕೆ ಒಳ್ಳೆಯದನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಭವಿಷ್ಯದಲ್ಲಿ ಎಲ್ಲರ ವೈಯಕ್ತಿಕ ಮಾಹಿತಿಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಇದರಿಂದ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ವಿದೇಶ

ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಲಾಸದಿಂದ ನಿತ್ಯಾನಂದನ ಪರವಾಗಿ ಹಲವಾರು ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೈಲಾಸ ದ್ವೀಪ ನೆನಪಾಗುವಷ್ಟರ ಮಟ್ಟಿಗೆ ನಿತ್ಯಾನಂದ ಜನಮಾನಸದಲ್ಲಿ ಅಚ್ಚೊತ್ತಲು ಆರಂಭಿಸಿದ್ದಾರೆ. ಈ ದ್ವೀಪ ಎಲ್ಲಿದೆ? ನಿತ್ಯಾನಂದ ಎಲ್ಲಿ? ಭಾರತದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದೇ? ಇಂತಹ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಈ ಮಧ್ಯೆ ನಿತ್ಯಾನಂದ ತನ್ನ ಕೈಲಾಸವನ್ನು ಅಂತರಾಷ್ಟ್ರೀಯ ಗಮನಕ್ಕೆ ತರಲು ವಿವಿಧ ಚಟುವಟಿಕೆಗಳನ್ನು ಹೆಚ್ಚಿಸಿದ್ದಾರೆ. ಅವರು ತಮ್ಮ ದೇಶಕ್ಕಾಗಿ ಪ್ರತ್ಯೇಕ ಕಾನೂನು, ವಿದೇಶಾಂಗ ನೀತಿ, ಕರೆನ್ಸಿ, ರಿಸರ್ವ್ ಬ್ಯಾಂಕ್, ಪಾಸ್‌ಪೋರ್ಟ್, ವೆಬ್‌ಸೈಟ್, ಅಧಿಕಾರಿಗಳು, ಸಚಿವಾಲಯ, ಪ್ರತ್ಯೇಕ ಧ್ವಜ ಹೀಗೆ ಹಲವು ವಿಷಯಗಳನ್ನು ಜಾರಿಗೆ ತಂದಿದ್ದಾರೆ. ಅವರು ವಿವಿಧ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸಹ ನಿರ್ಮಿಸುತ್ತಿದ್ದಾರೆ. ಇಂಗ್ಲೆಂಡ್, ಅಮೆರಿಕ ಸೇರಿದಂತೆ ದೇಶಗಳಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸಿ, ತನ್ನ ಪ್ರಭಾವವನ್ನು ವಿಸ್ತರಿಸುವ ಕೆಲಸವೂ ನಡೆಯುತ್ತಿದೆ. ಸಂಬಂಧಿತ ವಿಷಯವನ್ನು ನಿತ್ಯಾನಂದನ ವೆಬ್‌ಸೈಟ್ ಮತ್ತು ಯೂಟ್ಯೂಬ್ ಪುಟದಲ್ಲಿ ಪ್ರಕಟಿಸಲಾಗಿದೆ. ಅಮೆರಿಕ ಮತ್ತು ವಿಶ್ವಸಂಸ್ಥೆ ಕೂಡ ಕೈಲಾಸ ದೇಶವನ್ನು ಗುರುತಿಸಿದೆ ಎಂದು ಹೇಳಲಾಗುತ್ತಿದೆ.

ವಿಶ್ವಸಂಸ್ಥೆಯಲ್ಲಿ ಕೈಲಾಸ ಮಹಿಳಾ ಪ್ರತಿನಿಧಿಗಳು

ಈ ಮಧ್ಯೆ ಸ್ವಿಟ್ಜರ್ಲ್ಯಾಂಡ್ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಶ್ ಪರವಾಗಿ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇವರಲ್ಲಿ ವಿಜಯ ಪ್ರಿಯಾ, ಮುಕ್ತಿಕಾ ಆನಂದ, ಸೋನಾ ಕಾಮತ್, ನಿತ್ಯ ಆತ್ಮದಾಯಿಕಿ, ನಿತ್ಯ ವೆಂಕಟೇಶಾನಂದ, ಸ್ವೊವೇಣಿ, ಪ್ರಿಯಾ ಪ್ರೇಮಾ ಸೇರಿದಂತೆ ಇತರರು ಇದ್ದಾರೆ. ಈ ಸಭೆಯಲ್ಲಿ ಮಹಿಳಾ ಶಿಷ್ಯೆಯೊಬ್ಬರು ನಿತ್ಯಾನಂದನ ಛಾಯಾಚಿತ್ರಕ್ಕೆ ಪೂಜೆ ಸಲ್ಲಿಸಿದ ದೃಶ್ಯಾವಳಿ ವೈರಲ್ ಆಗಿದೆ.

ಇದನ್ನು ನಿತ್ಯಾನಂದ ಅವರ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಮಹಿಳೆಯರ ಸುರಕ್ಷತೆ ಮತ್ತು ಪ್ರಗತಿಯ ಬಗ್ಗೆ ವಿವರವಾಗಿ ಚರ್ಚಿಸಲು ವಿಶ್ವಸಂಸ್ಥೆ ಸಭೆಯನ್ನು ಆಯೋಜಿಸಿತ್ತು. ವಿವಿಧ ದೇಶಗಳ ಮಹಿಳಾ ಸಂಸದರು ಇದರಲ್ಲಿ ಭಾಗವಹಿಸಿದ್ದರು. ಕೈಲಾಸದ ಪರವಾಗಿ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಲಿಂಗ ತಾರತಮ್ಯ ಮತ್ತು ಬೆದರಿಕೆಗಳು ಹೆಚ್ಚಾಗುತ್ತಿದೆ. ಕೌಟುಂಬಿಕ ದೌರ್ಜನ್ಯವೂ ಹೆಚ್ಚಿದೆ ಎಂದು ತಿಳಿಸಿದರು. ಈ ಸಂಬಂಧ ಅಂಕಿಅಂಶಗಳನ್ನೂ ನೀಡಿದರು. ನಿರ್ದಿಷ್ಟವಾಗಿ ಇಂತಹ ಸಮಸ್ಯೆಗಳನ್ನು ಮಹಿಳಾ ಪ್ರತಿನಿಧಿಗಳೇ ಅನುಭವಿಸುತ್ತಿದ್ದಾರೆ.

ಹಾಗಾಗಿ ಮಹಿಳೆಯರ ಸ್ಥಿತಿ ಸುಧಾರಣೆಯಾಬೇಕು. ಅವರಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗ, ಜೀವನ ಮತ್ತು ಭದ್ರತೆ ಒದಗಿಸಬೇಕು. ಅದಕ್ಕಾಗಿ ಅವರು ಬೌದ್ಧಿಕ ಹಿಂದೂ ಧಾರ್ಮಿಕ ನಾಗರಿಕತೆಯ ಪುನಶ್ಚೇತನಗೊಳ್ಳಬೇಕು ಎಂದರು. ಇದಾದ ಬಳಿಕ ಕೈಲಾಸ ಮಹಿಳಾ ಪ್ರತಿನಿಧಿಗಳು ವಿವಿಧ ದೇಶಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಅವರು ಕೈಲಾಸ ತತ್ವಗಳು ಮತ್ತು ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ವಿವರಿಸಿದರು.

ದೇಶ ವಿದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

‘ಭಾರತದಂತಹ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸಲು ಹಂಗೇರಿ-ಅಮೆರಿಕನ್ ಉದ್ಯಮಿ ಜಾರ್ಜ್ ಸೋರೋಸ್ 100 ಬಿಲಿಯನ್ ಡಾಲರ್ ನಿಧಿಯನ್ನು ರಚಿಸಿದ್ದಾರೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಸಮೂಹವನ್ನು ಅಮೆರಿಕ ಸಂಸ್ಥೆ ಹಿಂಡೆನ್‌ಬರ್ಗ್ ಆರ್ಥಿಕ ಅಕ್ರಮಗಳ ಆರೋಪ ಮಾಡಿತ್ತು. ಇದರಿಂದ ಅದಾನಿ ಸಮೂಹದ ಮೌಲ್ಯ 100 ಶತಕೋಟಿ ಡಾಲರ್ ನಷ್ಟು ಕುಸಿತಾವನ್ನು ಖಂಡಿತು. ಈ ಹಿನ್ನಲೆಯಲ್ಲಿ ಹಂಗೇರಿಯ ಅಮೆರಿಕದ ಉದ್ಯಮಿ ಜಾರ್ಜ್ ಸೋರೋಸ್ ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಅಂತರರಾಷ್ಟ್ರೀಯ ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೋರೋಸ್, ಇತ್ತೀಚಿನ ಅದಾನಿ ಸಮೂಹದ ಬಿಕ್ಕಟ್ಟನ್ನು ಪ್ರಸ್ತಾಪ ಮಾಡಿದ ಅವರು, ‘ಬಹುಕೋಟ್ಯಾಧಿಪತಿ ಕಂಪನಿಗಳ ವಿರುದ್ಧ ವಂಚನೆ ಮತ್ತು ಷೇರು ವಂಚನೆ ಆರೋಪಗಳ ಕುರಿತು ವಿದೇಶಿ ಹೂಡಿಕೆದಾರರು ಮತ್ತು ಸಂಸತ್ತಿನ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಬೇಕು’ ಎಂದು ಹೇಳಿದರು.

‘ಅದಾನಿಯ ವ್ಯಾಪಾರ ಸಾಮ್ರಾಜ್ಯದಲ್ಲಿನ ಗೊಂದಲವು, ಹೂಡಿಕೆಗೆ ಭಾರತ ಉತ್ತಮ ಸ್ಥಳವಾಗಿದೆ ಎಂಬ ವಿಶ್ವಾಸವನ್ನು ಅಲುಗಾಡಿಸಿದೆ ಮತ್ತು ಇದು ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುಜ್ಜೀವನಕ್ಕೆ ಅವಕಾಶವನ್ನು ಸೃಷ್ಟಿಸುತ್ತದೆ’ ಎಂದು ಹಂಗೇರಿಯಲ್ಲಿ ವಾಸಿಸುವ ಅಮೇರಿಕನ್ ಉದ್ಯಮಿ ಜಾರ್ಜ್ ಸೋರೋಸ್ ಹೇಳಿದ್ದಾರೆ.

ಇದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿಯ ಹಿರಿಯ ನಾಯಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ, ‘ಜಾರ್ಜ್ ಸೋರೋಸ್ ಪ್ರಧಾನಿ ನರೇಂದ್ರ ಮೋದಿಯನ್ನು ಮಾತ್ರ ದೂಷಿಸಿಲ್ಲ, ಅವರು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೂಷಿಸಿದ್ದಾರೆ. ಭಾರತದಂತಹ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಮಾಡಲು 100 ಬಿಲಿಯನ್ ಡಾಲರ್‌ಗಳ ನಿಧಿಯನ್ನು ಅವರು ರಚಿಸಿದ್ದಾರೆ’ ಎಂದು ಆಪಾದಿಸಿದ ಸ್ಮೃತಿ ಇರಾನಿ,

‘ಅಂತಾರಾಷ್ಟ್ರೀಯ ಉದ್ಯಮಿ ಜಾರ್ಜ್ ಸೋರೋಸ್ ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸುವ ತನ್ನ ಉದ್ದೇಶವನ್ನು ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿಯಂತಹ ನಾಯಕರನ್ನು ಗುರಿಯಾಗಿಸಲು ಅವರು ಶತಕೋಟಿ ಡಾಲರ್‌ಗೂ ಹೆಚ್ಚು ಹಣವನ್ನು ನೀಡಿದ್ದಾರೆ ಎಂಬುದು ಅವರ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಪ್ರಧಾನಿ ಮೋದಿಯನ್ನು ಹಲವು ಬಾರಿ ಟೀಕಿಸಬಹುದು, ಆದರೆ ಭಾರತದ ಮೇಲಿನ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

ಅದೇ ರೀತಿ, ಸೊರೊಸ್ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ಪ್ರಧಾನಿ-ಸಂಬಂಧಿತ ಅದಾನಿ ಹಗರಣವು ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುಜ್ಜೀವನವನ್ನು ಉಂಟುಮಾಡುತ್ತದೆಯೇ ಎಂಬುದು ಸಂಪೂರ್ಣವಾಗಿ ಕಾಂಗ್ರೆಸ್, ಪ್ರತಿಪಕ್ಷಗಳು ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿದೆ. ಜಾರ್ಜ್ ಸೋರೋಸ್ ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸೋರೋಸ್ ಅವರಂತಹವರು ನಮ್ಮ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದನ್ನೂ ನಮ್ಮ ನೆಹರೂವಿನ ಪರಂಪರೆ ಖಾತ್ರಿಪಡಿಸುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ದೇಶ ವಿದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಆದಾಯ ತೆರಿಗೆ ತನಿಖೆಯ ನಡುವೆ ಅಮೆರಿಕ ಬಿಬಿಸಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

2002ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಕೋಮು ಗಲಭೆ ನಡೆದು, ದೇಶಾದ್ಯಂತ ಭಾರೀ ಕೋಲಾಹಲ ಉಂಟಾಯಿತು. ಆ ಗಲಭೆಯಲ್ಲಿ ಮೋದಿಯೂ ಶಾಮೀಲಾಗಿದ್ದರು ಎಂದು ಆರೋಪಿಸಿ ಪ್ರಕರಣಗಳು ದಾಖಲಾದವು.

ಭಾರತೀಯ ರಾಜಕೀಯ ವಲಯದಲ್ಲಿ ಬಾರಿ ಗದ್ದಲವನ್ನು ಉಂಟುಮಾಡಿದ ಆ ಘಟನೆಯನ್ನು ಆದರಿಸಿ, ಬಿಬಿಸಿ ಸಾಕ್ಷ್ಯಚಿತ್ರವನ್ನು ತಯಾರಿಸಿ ಅದನ್ನು ಇತ್ತೀಚಗೆ ಎರಡು ಭಾಗಗಳಾಗಿ ಬಿಡುಗಡೆ ಮಾಡಿತು. ಇದರಿಂದ ಕೆಂಡಾಮಂಡಲವಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು, ಬಿಬಿಸಿಯ ಸಾಕ್ಷ್ಯಚಿತ್ರವನ್ನು ಖಂಡಿಸಿ ಅದನ್ನು ಭಾರತದಲ್ಲಿ ನಿಷೇಧ ಮಾಡಿತು. ಇದನ್ನು ದೇಶಾದ್ಯಂತ ಇರುವ ವಿರೋಧ ಪಕ್ಷಗಳು ಒಕ್ಕೊರಲಿನಿಂದ ಖಂಡಿಸಿ, ಪ್ರತಿಭಟನೆಯನ್ನು ಮಾಡಿತು. ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ನಿಷೇಧವನ್ನು ಧಿಕ್ಕರಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿತ್ತು.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆದಾಯ ತೆರಿಗೆ ಇಲಾಖೆ, ಏಕಾಏಕಿಯಾಗಿ ದೇಶದಲ್ಲಿರುವ ಬಿಬಿಸಿ ಕಛೇರಿಗಳ ಮೇಲೆ ದಾಳಿಯನ್ನು ನಡೆಸುತ್ತಿದೆ. ಮುಂಬೈ ಮತ್ತು ದೆಹಲಿ ಕಚೇರಿಗಳಲ್ಲಿ ಎರಡನೇ ದಿನವೂ ನಡೆಸುತ್ತಿರುವ ಈ ದಾಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, “ಅಮೆರಿಕ ಯಾವಾಗಲೂ ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮದ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಅಂತರರಾಷ್ಟ್ರೀಯ ಹಕ್ಕುಗಳು ಪ್ರಜಾಪ್ರಭುತ್ವಕ್ಕೆ ಮೂಲಭೂತವಾಗಿವೆ” ಎಂದು ಹೇಳಿದ್ದಾರೆ.

“ಭಾರತದಲ್ಲಿನ ಬಿಬಿಸಿ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ತನಿಖೆಯ ಬಗ್ಗೆ ತನಗೆ ತಿಳಿದಿದೆ” ಎಂದು ಹೇಳಿದ ಅವರು, “ವಿಶ್ವದಾದ್ಯಂತ ಸ್ವತಂತ್ರವಾದ ಮಾಧ್ಯಮ ಚಟುವಟಿಕೆಯನ್ನು ಬೆಂಬಲಿಸುವುದಾಗಿ ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮಾಧ್ಯಮಗಳ ಚಟುವಟಿಕೆ ಬಹಳ ಮುಖ್ಯ” ಎಂದು ಅವರು ತಿಳಿಸಿದ್ದಾರೆ.

ದೇಶ ವಿದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ತಂಜಾವೂರು: ತಂಜೂರು ಮುಲ್ಲಿವಾಯ್ಕಾಲ್ ಸ್ಮಾರಕ ಭವನದಲ್ಲಿ ಇಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ಪಳ ನೆಡುಮಾರನ್ ತುರ್ತು ಪತ್ರಿಕಾ ಘೋಷ್ಟಿ ನಡೆಸಿ, ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ ಎಂಬ ಸುದ್ಧಿಯನ್ನು ಕೊಟ್ಟು ಎಲ್ಲರನ್ನು ಆಶ್ಚರ್ಯ ಪಡೆವಂತೆ ಮಾಡಿದರು.

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ಅವರು ಶೀಘ್ರದಲ್ಲೇ ಹೊರಬರಲಿದ್ದಾರೆ ಎಂದು ನಾನು ಪ್ರಪಂಚದಾದ್ಯಂತ ಇರುವ ತಮಿಳರಿಗೆ ಇದರ ಮೂಲಕ ತಿಳಿಯಪಡಿಸಲು ಬಯಸುತ್ತೇನೆ’. ಎಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ಪಳ ನೆಡುಮಾರನ್ ಘೋಷಣೆ ಮಾಡಿದರು.

‘ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ. ಪ್ರಭಾಕರನ್ ಆರೋಗ್ಯವಾಗಿರುವುದು ಶ್ರೀಲಂಕಾ (ಈಳಂ) ತಮಿಳರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಪ್ರಭಾಕರನ್ ಬಗ್ಗೆ ಅಂದಿನ ರಾಜಪಕ್ಸೆ ಸರ್ಕಾರ ಹಾಗೂ ಇತರರಿಂದ ತಪ್ಪು ಮಾಹಿತಿಯನ್ನು ಹಬ್ಬಿಸಲಾಯಿತು. ಅವರು ಶೀಘ್ರದಲ್ಲೇ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾದ ಸಮಗ್ರ ಯೋಜನೆಯನ್ನು ಘೋಷಿಸಲಿದ್ದಾರೆ. ಜಗತ್ತಿನಾದ್ಯಂತ ಇರುವ ತಮಿಳರು ಇದನ್ನು ಬೆಂಬಲಿಸಬೇಕು.

ಪ್ರಭಾಕರನ್ ಕುಟುಂಬದೊಂದಿಗೆ ನಾನು ಸಂಪರ್ಕದಲ್ಲಿ ದ್ದೇನೆ. ಅವರ ಅನುಮತಿಯ ಮೇರೆಗೆ, ಅವರ ಮೂಲಕ ತಿಳಿದ ವಿಷಯಗಳನ್ನು ಇಲ್ಲಿ ತಿಳಿಸುತ್ತಿದ್ದೇನೆ.

ಅವರು ಎಲ್ಲಿದ್ದಾರೆ, ಯಾವಾಗ ಬರುತ್ತಾರೆ ಎಂಬ ಕುತೂಹಲ ನಿಮಗಷ್ಟೇ ಅಲ್ಲ, ನನಗೂ ಮತ್ತು ಪ್ರಪಂಚದಾದ್ಯಂತ ಇರುವ ತಮಿಳರಿಗೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಶೀಘ್ರದಲ್ಲೇ ಅವರು ಹೊರಹೊಮ್ಮುತ್ತಾರೆ. ಪ್ರಭಾಕರನ್ ಪತ್ನಿ ಹಾಗೂ ಪುತ್ರಿ ಕೂಡ ಸುರಕ್ಷಿತವಾಗಿದ್ದಾರೆ. ಸರಿಯಾದ ಸಮಯಕ್ಕೆ ಜನರ ಮುಂದೆ ಬರುತ್ತಾರೆ. ಪ್ರಭಾಕರನ್ ಎಲ್ಲಿದ್ದಾರೆ ಎಂಬುದನ್ನು ಸದ್ಯಕ್ಕೆ ಪ್ರಕಟಿಸಲು ಸಾಧ್ಯವಿಲ್ಲ. ತಮಿಳುನಾಡು ಸರ್ಕಾರ ಮತ್ತು ಜನರು ಪ್ರಭಾಕರನ್ ಅವರಿಗೆ ಬೆಂಬಲವಾಗಿರಬೇಕು. ಶ್ರೀಲಂಕಾದಲ್ಲಿ ರಾಜಪಕ್ಸೆ ಆಡಳಿತ ಅಂತ್ಯಗೊಂಡಿರುವುದರಿಂದ ನಾವು ಈ ಘೋಷಣೆ ಮಾಡುತ್ತಿದ್ದೇವೆ.

ರಾಜಪಕ್ಸೆಯನ್ನು ಅಧಿಕಾರಕ್ಕೆ ತಂದ ಅದೇ ಸಿಂಹಳೀಯರು ಈಗ ಅವರನ್ನು ದೇಶದಿಂದ ಓಡಿಸುತ್ತಿದ್ದಾರೆ. ಇದಕ್ಕಿಂತ ಉತ್ತಮ ವಾತಾಕಾರಣ ಬೇರೊಂದು ಇರಲು ಸಾದ್ಯವಿಲ್ಲ. ಚೀನಾ ಶ್ರೀಲಂಕಾದಲ್ಲಿ ಆಳವಾಗಿ ನೆಲೆಯೂರುವ ಮೂಲಕ ಭಾರತದ ವಿರುದ್ಧ ಕೆಲಸ ಮಾಡುತ್ತಿದೆ ಇದನ್ನು ತಡೆಯಬೇಕಾಗಿದೆ.’ ಅದಕ್ಕೆ ಶ್ರೀಲಂಕಾದಲ್ಲಿ ಪ್ರತ್ಯೇಕವಾದ ತಮಿಳು ರಾಷ್ಟ್ರ ರಚನೆ ಆಗಬೇಕು. ಇಂದಿನ ಸನ್ನಿವೇಶದಲ್ಲಿ ಇದು ಅನಿವಾರ್ಯವೂ ಆಗಿದೆ.’ ಎಂದರು.  

ವಿದೇಶ

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ಬಗ್ಗೆ ಮೂರು ದಿನಗಳ ಮೊದಲೇ ಭವಿಷ್ಯ ನುಡಿದಿದ್ದ ಡಚ್ ಸಂಶೋಧಕ ಫ್ರಾಂಕ್ ಹೂಗರ್‌ ಬೀಟ್ಸ್, ಭಾರತದಲ್ಲೂ ಭೂಕಂಪ ಸಂಭವಿಸಲಿದೆ ಎಂದು ಹೇಳಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಭಾನುವಾರ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಸತ್ತವರ ಸಂಖ್ಯೆ 11 ಸಾವಿರವನ್ನು ದಾಟಿದೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹಾತೊರೆಯುತ್ತಿರುವ ಈ ಸಂದರ್ಭದಲ್ಲಿ ಜಗತ್ತು ಅವರಿಗೆ ನೆರವಿನ ಹಸ್ತವನ್ನು ಚಾಚುತ್ತಿವೆ.

ಟರ್ಕಿ ಮತ್ತು ಸಿರಿಯಾದಲ್ಲಿ ಮುಂಜಾನೆ ವೇಳೆ; ಜನರು ಗಾಢ ನಿದ್ರೆಯಲ್ಲಿದ್ದಾಗ ನಡುಕ ಸಂಭವಿಸಿತು ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ವರದಿಗಳು ಹೇಳುತ್ತಿವೆ.

ಆದರೆ ಒಬ್ಬ ವ್ಯಕ್ತಿ ಮಾತ್ರ ಜಗತ್ತನ್ನು ಸಂಕಷ್ಟಕ್ಕೆ ದೂಡಿರುವ ಈ ಟರ್ಕಿ-ಸಿರಿಯಾ ಭೂಕಂಪದ ಬಗ್ಗೆ ಮೊದಲೇ ಮುನ್ಸೂಚನೆ ನೀಡಿ ಎಚ್ಚರಿಕೆಯನ್ನು ನೀಡಿದ್ದಾರೆ. ಈ ದುರಂತ ಘಟನೆಗೆ ನಡೆಯುವ ಮೂರು ದಿನಗಳ ಮೊದಲೇ ಫ್ರಾಂಕ್ ಹೂಗರ್‌ ಬೀಟ್ಸ್ ಎಂಬ ಡಚ್ ವಿಜ್ಞಾನಿ, ‘ಫೆಬ್ರವರಿ 3 ರಂದು, ದಕ್ಷಿಣ-ಮಧ್ಯ ಟರ್ಕಿ, ಜೋರ್ಡಾನ್, ಸಿರಿಯಾ ಮತ್ತು ಲೆಬನಾನ್‌ನಲ್ಲಿ ಈಗ ಅಥವಾ ಕೆಲವೇ ದಿನಗಳಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಲಿದೆ’ ಎಂದು ಹೇಳಿದ್ದರು.

ಅವರು ನೆದರ್ಲ್ಯಾಂಡ್ ನ ಸೌರವ್ಯೂಹದ ಆಕಾರದ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಟರ್ಕಿ, ಸಿರಿಯಾ ನಂತರ ಅಫ್ಘಾನಿಸ್ತಾನದಲ್ಲಿ ಆರಂಭವಾಗುವ ಭೂಕಂಪವು ಪಾಕಿಸ್ತಾನ, ಭಾರತದ ಮೂಲಕ ಹಾದು ಹಿಂದೂ ಮಹಾಸಾಗರದಲ್ಲಿ ಕೊನೆಗೊಳ್ಳಲಿದೆ ಎಂದು ಡಚ್ ವಿಜ್ಞಾನಿ ಫ್ರಾಂಕ್ ಹೂಗರ್‌ ಬೀಟ್ಸ್ ಎಚ್ಚರಿಸಿದ್ದಾರೆ.

ಪಾಕಿಸ್ತಾನದ ರಾಜ್ಯ ಸಚಿವ ಇಬ್ರಾಹಿಂ, ಡಚ್ ವಿಜ್ಞಾನಿ ಫ್ರಾಂಕ್ ಹೂಗರ್‌ ಬೀಟ್ಸ್ ಮಾಡಿರುವ ಸಂಭಾಷಣೆಯ ವೀಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪಾಕಿಸ್ತಾನ, ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ಭೂಕಂಪದ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Earthquake To Strike India Very Soon? Dutch Researcher Frank Hoogerbeets, Who Predicted Earthquake in Turkey and Syria, Had Made Similar Predictions About India, Pakistan and Afghanistan (Watch Video)

A video of Frank Hoogerbeets is going viral in which he is seen predicting a large size earthquake originating in Afghanistan.

ವಿದೇಶ

ಪ್ರಪಂಚದ ಅಂತ್ಯದ ಮೊದಲು ಕೊನೆಯ ಸೆಲ್ಫಿಗಳು ಹೇಗಿರುತ್ತದೆ ಎಂದು AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಭವಿಷ್ಯ ನುಡಿದಿರುವ ಭಯಾನಕ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ವಿಜ್ಞಾನದ ಬೆಳವಣಿಗೆಯಿಂದ ಇಲ್ಲಿಯವರೆಗೆ ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಪ್ರಮುಖ ಪ್ರಶ್ನೆಗಳೆಂದರೆ, ಈ ಜಗತ್ತು ಕೊನೆಗೊಳ್ಳುತ್ತದೆಯೇ? ಜಗತ್ತು ಕೊನೆಗೊಳ್ಳುತ್ತಿದ್ದರೆ, ಅದು ಹೇಗೆ ಸಂಭವಿಸುತ್ತದೆ? ಆಗ ನಾವೆಲ್ಲರೂ ಏನಾಗುತ್ತೇವೆ? ಇಂತಹ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರ ಮನಸಲ್ಲೂ ಮೂಡುತ್ತವೆ.

ಇದಕ್ಕೆ ಪ್ರತಿಕ್ರಿಯೆಯಾಗಿ AI ಭವಿಷ್ಯ ನುಡಿದ ಕೆಲವು ಭಯಾನಕ ಫೋಟೋಗಳು ಅಂತರ್ಜಾಲದಲ್ಲಿ ಈಗ ವೈರಲ್ ಆಗುತ್ತಿವೆ.

AI (ಕೃತಕ ಬುದ್ಧಿವಂತಿಕೆ) ತಂತ್ರಜ್ಞಾನವು ಮಾನವನಿಗೆ ಸಮಾನವಾಗಿ ಯೋಚಿಸುವ ಹಂತಕ್ಕೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ AI ತಂತ್ರಜ್ಞಾನವು ಮನುಷ್ಯರನ್ನು ನಿಯಂತ್ರಿಸುವ ಸಾಧ್ಯತೆಯಿದೆ ಎಂಬ ವದಂತಿಗಳೂ ಇವೆ. ಅದಕ್ಕೆ ಉದಾರಣೆಯಾಗಿ ChatGPT ಎಂಬ AI ಪ್ರಸ್ತುತ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗುತ್ತಿದೆ.

ಇಂತಹ ಕೃತಕ ಬುದ್ಧಿವಂತಿಕೆ ತಂತ್ರಜ್ಞಾನವು ಜನರನ್ನು ಅಚ್ಚರಿ ಗೊಳಿಸುತ್ತಿರುವಾಗ, ಪ್ರಪಂಚದ ಅಂತ್ಯದ ಮೊದಲು ಕೊನೆಯ ಸೆಲ್ಫಿ ತೆಗೆದುಕೊಂಡರೆ ಹೇಗಿರುತ್ತದೆ ಎಂಬ ಫೋಟೋವನ್ನು AI ರಚಿಸಿದೆ. ಆ ಫೋಟೋ ಶೂಟ್‌ಗಳನ್ನು ಒಮ್ಮೆ ನೀವೇ ನೋಡಿ.

 

ವಿದೇಶ

ಶ್ರೀಲಂಕಾ: ಶ್ರೀಲಂಕಾ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಇತರರಿಗೆ ಈಸ್ಟರ್ ಭಾನುವಾರದ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.

ಶ್ರೀಲಂಕಾದಲ್ಲಿ ಏಪ್ರಿಲ್ 21, 2019 ರಂದು ನಡೆದ ಭಯೋತ್ಪಾದಕ ಬಾಂಬ್ ದಾಳಿಯಲ್ಲಿ 269 ಜನರು ಸಾವನ್ನಪ್ಪಿದರು ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

2019ರ ಏಪ್ರಿಲ್ 21ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸಾಕಷ್ಟು ಗುಪ್ತಚರ ಮಾಹಿತಿ ಲಭ್ಯವಿದ್ದರೂ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೂಲಭೂತ ಹಕ್ಕುಗಳ ಅರ್ಜಿಗಳ ತೀರ್ಪು ಇಂದು ಪ್ರಕಟವಾಯಿತು.

ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹಾಗೂ ಇತರರ ವಿರುದ್ಧ ಸಲ್ಲಿಕೆಯಾಗಿದ್ದ ಮೂಲಭೂತ ಹಕ್ಕುಗಳ ಅರ್ಜಿಗಳ ತೀರ್ಪನ್ನು ಇಂದು ಪ್ರಕಟಿಸುವುದಾಗಿ ಹೈಕೋರ್ಟ್ ಇದೇ ಜನವರಿ 5ರಂದು ಪ್ರಕಟಿಸಿತ್ತು. ಅದರಂತೆ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಪ್ಳಗೊಂಡ ವಿಭಾಗೀಯ ನ್ಯಾಯಪೀಠವು ಇಂದು ತೀರ್ಪು ಪ್ರಕಟಿಸಿತು.

ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ, ಮಾಜಿ ಪೊಲೀಸ್ ಮಹಾನಿರೀಕ್ಷಕ ಪೂಜಿತ್ ಜಯಸುಂದರ, ರಾಷ್ಟ್ರೀಯ ಗುಪ್ತಚರ ವಿಭಾಗದ ಮಾಜಿ ನಿರ್ದೇಶಕ ಸಿಸಿರ ಮೆಂಡಿಸ್ ಮತ್ತು ರಾಜ್ಯ ಗುಪ್ತಚರ ವಿಭಾಗದ ಮಾಜಿ ನಿರ್ದೇಶಕ ನಿಲಂತ ಜಯವರ್ಧನ ಅವರು ಈಸ್ಟರ್ ಭಾನುವಾರದ ದಾಳಿಯನ್ನು ತಡೆಯಲು ವಿಫಲರಾಗಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ತೀರ್ಪು ನೀಡಲಾಗಿದೆ. ಅಲ್ಲದೆ ಸಂತ್ರಸ್ತರಿಗೆ ಪರಿಹಾರವನ್ನು ನೀಡುವಂತೆಯೂ ನ್ಯಾಯಾಲಯ ತಮ್ಮ ಆದೇಶದಲ್ಲಿ ಸೂಚಿಸಿದೆ.

ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ 100 ಮಿಲಿಯನ್, ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋಗೆ 50 ಮಿಲಿಯನ್, ಮಾಜಿ ಪೊಲೀಸ್ ಮಹಾನಿರೀಕ್ಷಕ ಪೂಜಿತ್ ಜಯಸುಂದರ ಮತ್ತು ರಾಷ್ಟ್ರೀಯ ಗುಪ್ತಚರ ಸೇವೆಯ ಮಾಜಿ ಮುಖ್ಯಸ್ಥ ನೀಲಂತ ಜಯವರ್ಧನ ಅವರಿಗೆ 75 ಮಿಲಿಯನ್ ರೂಪಾಯಿಗಳನ್ನು ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸಿಸಿರ ಮೆಂಡಿಸ್ ಸಂತ್ರಸ್ತರಿಗೆ 10 ಮಿಲಿಯನ್ ರೂಪಾಯಿ ಪರಿಹಾರ ನೀಡಬೇಕೆಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ದೇಶ ವಿದೇಶ

ನೆವಾರ್ಕ್: ಲಾಸವನ್ನು ಅಂಗೀಕರಿಸುವ ಸಲುವಾಗಿ ಜನವರಿ 11 ರಂದು ಯುನೈಟೆಡ್ ಸ್ಟೇಟ್ಸ್ ನೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಯುನೈಟೆಡ್ ಕೈಲಾಸ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ನ್ಯೂಜೆರ್ಸಿ ನೆವಾರ್ಕ್ ನಗರದಲ್ಲಿ ಜಂಟಿಯಾಗಿ “ದ್ವಿಪಕ್ಷೀಯ ನೀತಿ ಸಂಹಿತೆ ಒಪ್ಪಂದ”ಕ್ಕೆ ಸಹಿ ಮಾಡುವ ಸಂಬ್ರಮವು ನಡೆಯಿತು. ವಿಶ್ವಸಂಸ್ಥೆಯ ಕೈಲಾಶದ ಖಾಯಂ ರಾಯಭಾರಿ ವಿಜಯಪ್ರಿಯಾ ನಿತ್ಯಾನಂದ, ಮೇಯರ್ ಬರಾಕಾ, ಉಪಮೇಯರ್ ಡೆಫ್ರೀಟಾಸ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ್ಯೂಜೆರ್ಸಿಯ ಕೈಲಾಸದ ಪ್ರತಿನಿಧಿಗಳೂ ಉಪಸ್ಥಿತರಿದ್ದರು. ಅಮೆರಿಕದ ನೆವಾರ್ಕ್ ನಗರದೊಂದಿಗಿನ ಒಪ್ಪಂದದಲ್ಲಿ, ಸಮುದಾಯವೊಂದರ ಅಭಿವೃದ್ಧಿಗೆ ಅಗತ್ಯವಾದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆ ಪ್ರಾರಂಭ, ವಿಪತ್ತು, ಹವಾಮಾನ ಬದಲಾವಣೆ, ಇತ್ಯಾದಿಗಳ ಪರಿಣಾಮಗಳನ್ನು ಎದುರಿಸಲು ಪರಸ್ಪರ ಸಹಾಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು, ಹಿಂಸೆ, ಬಡತನ, ಅನಕ್ಷರತೆ ಮುಂತಾದ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತು ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ನೆವಾರ್ಕ್ ನಗರವು ಅಮೇರಿಕಾದ ನ್ಯೂಜೆರ್ಸಿ ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ ಮತ್ತು ನ್ಯೂಯಾರ್ಕ್ ಮೆಟ್ರೋಪಾಲಿಟನ್ ಪ್ರದೇಶದ ಎರಡನೇ ಅತಿದೊಡ್ಡ ನಗರವಾಗಿದೆ. 2020ರ ಯುನೈಟೆಡ್ ಸ್ಟೇಟ್ಸ್ ಜನಗಣತಿಯ ಪ್ರಕಾರ, ನಗರದ ಜನಸಂಖ್ಯೆಯು 311,549 ಆಗಿರುತ್ತದೆ. ಇದು ದೇಶದ 66ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪುರಸಭೆಯೂ ಆಗಿದೆ.

ನೆವಾರ್ಕ್ ಅಮೆರಿಕದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಪ್ಯಾಸಾಯಿಕ್ ನದಿಯ ಮುಖಭಾಗದಲ್ಲಿರುವುದರಿಂದ ಈ (ಇದು ನೆವಾರ್ಕ್ ಕೊಲ್ಲಿಗೆ ಸಂಗಮವಾಗುತ್ತದೆ) ನಗರವು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಬಂದರಿನ ಅವಿಭಾಜ್ಯ ಅಂಗವಾಗಿತ್ತದೆ. ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಯುನೈಟೆಡ್ ಸ್ಟೇಟ್ಸ್‌ನ ಮೊದಲ ಪುರಸಭೆಯ ವಾಣಿಜ್ಯ ವಿಮಾನ ನಿಲ್ದಾಣವಾಗಿದೆ ಮತ್ತು ಇಂದು ಇದು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಇಂತಹ ಐತಿಹಾಸಿಕವಾದ ಅಮೆರಿಕಾದ ನೆವಾರ್ಕ್ ನಗರದಲ್ಲಿ ಕೈಲಾಸವನ್ನು ಅಂಗೀಕರಿಸುವ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಮಾಡಿರುವುದು ವಿಶೇಷ ಮತ್ತು ಆಶ್ಚರ್ಯವು ಕೂಡ!