ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
CCB Police Archives » Dynamic Leader
October 31, 2024
Home Posts tagged CCB Police
ಕ್ರೈಂ ರಿಪೋರ್ಟ್ಸ್

ಮಾರ ಕಾಸ್ತ್ರಗಳೊಂದಿಗೆ ದರೋಡೆ ಮಾಡಲು ಸಂಚು ರೂಪಿಸಿದ್ದ ರೌಡಿ ಶಿಟರ್ ಮಹೇಶ @ ಸಿದ್ದಾಪುರ ಮಹೇಶನ 5 ಜನ ಸಹಚರರ ಬಂಧನ. ಒಂದು ಪಾರ್ಚೂನರ್ ಕಾರು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಬೆಂಗಳೂರು: ಜೂನ್ 17 ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ಸರಹದ್ದಿನ KSRTC ಕೇಂದ್ರ ಕಚೇರಿಯ ಪಕ್ಕದ ಬಿಟಿಎಸ್ ಸರ್ವೀಸ್ ರಸ್ತೆಯಲ್ಲಿ, ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ಅವರಿಗೆ ಮಾರಕಾಸ್ತ್ರಗಳಾದ ಲಾಂಗು, ಮಚ್ಚು, ಚಾಕು ದೊಣ್ಣೆಗಳಿಂದ ಹಲ್ಲೆ ಮಾಡಿ, ಅವರಿಂದ ನಗದು ಮತ್ತು ಚಿನ್ನಾಭರಣಗಳನ್ನು ದೋಚಲು ಸಜ್ಜಾಗಿದ್ದ ರೌಡಿ ಶೀಟರ್ ಮಹೇಶ @ ಸಿದ್ದಾಪುರದ ಮಹೇಶನ 5 ಜನ ಸಹಚರರನ್ನು ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಇವರುಗಳ ಕಡೆಯಿಂದ ಮಾರಕಾಸ್ತ್ರಗಳನ್ನು ಮತ್ತು ಪಾರ್ಚೂನ್ ಕಾರನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.

ಇವರುಗಳು ಕಳೆದ ವರ್ಷ ಬನಶಂಕರಿ ಮೆಟ್ರೋ ನಿಲ್ದಾಣ ಹತ್ತಿರ ರೌಡಿ ಶೀಟರ್ ಮದನ್ @ ಪಿಟೀಲ್ ಎಂಬುವವನನ್ನು ಕೊಲೆ ಮಾಡಿದ್ದ ಮಹೇಶ @ ಸಿದ್ದಾಪುರ ಮಹೇಶ್ ಎಂಬುವವನ ಸಹಚರರಾಗಿರುತ್ತಾರೆ.

ಇವರುಗಳು ಈ ದಿನ ಮಹೇಶನ ಎದುರಾಳಿಯಾದ ವಿಲ್ಸನ್ ಗಾರ್ಡನ್ ನಾಗ ಅಥವಾ ಆತನ ಸಹಚರರು ಸಿಕ್ಕರೆ ಅವರುಗಳನ್ನು ಹೊಡೆಯಬೇಕೆಂದು ಮತ್ತು ದಾರಿಯಲ್ಲಿ ಒಂಟಿಯಾಗಿ ಬರುವ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಅವರಿಂದ ನಗದು ಹಣ ಅಥವಾ ಒಡವೆಗಳನ್ನು ದೋಚಲು ಹೊಂಚು ಹಾಕುತ್ತಿದ್ದುದಾಗಿ ತಿಳಿಸಿರುತ್ತಾರೆ. ಮೇಲ್ಕಂಡ ಆಸಾಮಿಗಳ ವಿರುದ್ದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದರೋಡೆ ಸಂಚು ರೂಪಿಸಿದ ಕುರಿತು ಪ್ರಕರಣ ದಾಖಲಾಗಿದ್ದು, ಪ್ರಕರಣ ಮುಂದುವರೆದಿದೆ.

ಈ ಕಾರ್ಯಾಚರಣೆಯನ್ನು ಸಿಸಿಬಿ, ಸಂಘಟಿತ ಅಪರಾಧ ದಳ (ಪಶ್ಚಿಮ) ದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಯಶಸ್ವಿಯಾಗಿ ಆರೋಪಿಗಳನ್ನು ಮಾಲಿನ ಸಮೇತ ವಶಕ್ಕೆ ಪಡೆದುಕೊಂಡಿರುತ್ತಾರೆ.  

ಕ್ರೈಂ ರಿಪೋರ್ಟ್ಸ್

ಗೃಹ ಬಳಕೆ ಸಿಲಿಂಡರ್‌ಗಳನ್ನು ಅನಧಿಕೃತ್ವಾಗಿ ದಾಸ್ತಾನು ಮಾಡಿಕೊಂಡು; ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡಿ; ಮಾರಾಟ ಮಾಡಿಕೊಂಡಿದ್ದ ಅಂಗಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಂಗಳೂರು: ಬೆಂಗಳೂರು ನಗರ, ಮಡಿವಾಳ ಪೊಲೀಸ್ ಠಾಣೆ ಸರಹದ್ದಿಗೆ ಸೇರಿರುವ ವಿಆರ್‌ಎಂ ಎಂಟರ್‌ಪ್ರೈಸಸ್, ಟಿವಿಎಸ್ ಶೋ ರೂಂ ಹತ್ತಿರ, ಸುಭಾಷ್ ನಗರ, ಮಡಿವಾಳ, ಬೆಂಗಳೂರು ವಿಳಾಸದ ಶಾಪ್‌ನಲ್ಲಿ ಗೃಹಬಳಕೆ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡು, ಇವುಗಳಿಂದ ವಾಣಿಜ್ಯ ಬಳಕೆ ಸಿಲಿಂಡರ್‌ಗಳು ಮತ್ತು ಸಣ್ಣ ಸಣ್ಣ ಸಿಲಿಂಡರ್‌ಗಳಿಗೆ ರೀಫಿಲ್ಲಿಂಗ್ ರಾಡ್‌ಗಳ ಮೂಲಕ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಿ ಮಾರಾಟ ಮಾಡಿಕೊಂಡು ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದ ಅಕ್ರಮ ಜಾಲವೊಂದನ್ನು ಸಿಸಿಬಿ ಪೊಲೀಸರು ಪತ್ತೆಮಾಡಿದ್ದಾರೆ.

ಇದರ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಪಡೆದು, ಮಾಹಿತಿ ಖಚಿತ ಪಡಿಸಿಕೊಂಡು ಸದರಿ ಶಾಪ್ ಮೇಲೆ ದಾಳಿ ಮಾಡಿ ಆರೋಪಿ ಕಡೆಯಿಂದ ಸುಮಾರು, 2 ಲಕ್ಷ ರೂ ಬೆಲೆಬಾಳುವ ಸರ್ಕಾರಿ ಸ್ವಾಮ್ಯದ ಭಾರತ್, ಇಂಡೇನ್ ಹಾಗೂ ಖಾಸಗಿ ಸ್ವಾಮ್ಯದ ಜ್ಯೋತಿ, ಎಂವಿಆರ್ ಕಂಪೆನಿಯ ದೊಡ್ಡ ಸಿಲಿಂಡರ್‌ಗಳು 47, ಸಣ್ಣ ಸಿಲಿಂಡರ್‌ಗಳು 49 ಒಟ್ಟು 96 ಸಿಲಿಂಡರ್‌ಗಳು ಒಂದು ರಾಡ್, ಒಂದು ಅಳತೆ ಯಂತ್ರ ಇವುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಶಾಪ್‌ನ ಮಾಲೀಕನಾದ ಆರೋಪಿ ಧನರಾಜ್ ತಲೆ ಮರೆಸಿ ಕೊಂಡಿರುತ್ತಾನೆ.

ಈ ಸಂಬಂಧ ಆರೋಪಿಯ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ / ಸಿಬ್ಬಂಧಿಯವರುಗಳು ಯಶಶ್ವಿಯಾಗಿ ಕೈಗೊಂಡಿರುತ್ತಾರೆ.

    

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ಸಿಸಿಬಿ ಕಾರ್ಯಚರಣೆ, ತಮಿಳುನಾಡು ಮೂಲದ ಇಬ್ಬರು ಬಂಧನ. ಕೋಟ್ಯಾಂತರ ಬೆಲೆಬಾಳುವ 6.5 ಕೆಜಿ ತೂಕದ ನಿಷೇಧಿತ ಅಂಬರ್ ಗ್ರೀಸ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ದಿನಾಂಕ: 30-05-2023 ರಂದು ತಮಿಳುನಾಡು ರಾಜ್ಯದಿಂದ ಬೆಂಗಳೂರಿಗೆ ಬಂದು, ಕಾನೂನು ಬಾಹೀರವಾಗಿ ಸುಮಾರು 6.5 ಕೆಜಿ ತೂಕದ ನಿಷೇಧಿತ ಅಂಬರ್ ಗ್ರೀಸ್ ವಸ್ತುವನ್ನು, ಕೋಟ್ಯಾಂತರ ರೂಪಾಯಿ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಇಬ್ಬರು ಆಸಾಮಿಗಳನ್ನು ಬಂಧಿಸಿ ಕೋಟ್ಯಾಂತರ ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳ ವಿರುದ್ಧ ಬೆಂಗಳೂರು ನಗರ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಿಸಿಬಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.