ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ಅಂಗಡಿಯ ಮೇಲೆ ಸಿಸಿಬಿ ದಾಳಿ! » Dynamic Leader
October 31, 2024
ಕ್ರೈಂ ರಿಪೋರ್ಟ್ಸ್

ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ಅಂಗಡಿಯ ಮೇಲೆ ಸಿಸಿಬಿ ದಾಳಿ!

ಗೃಹ ಬಳಕೆ ಸಿಲಿಂಡರ್‌ಗಳನ್ನು ಅನಧಿಕೃತ್ವಾಗಿ ದಾಸ್ತಾನು ಮಾಡಿಕೊಂಡು; ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡಿ; ಮಾರಾಟ ಮಾಡಿಕೊಂಡಿದ್ದ ಅಂಗಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಂಗಳೂರು: ಬೆಂಗಳೂರು ನಗರ, ಮಡಿವಾಳ ಪೊಲೀಸ್ ಠಾಣೆ ಸರಹದ್ದಿಗೆ ಸೇರಿರುವ ವಿಆರ್‌ಎಂ ಎಂಟರ್‌ಪ್ರೈಸಸ್, ಟಿವಿಎಸ್ ಶೋ ರೂಂ ಹತ್ತಿರ, ಸುಭಾಷ್ ನಗರ, ಮಡಿವಾಳ, ಬೆಂಗಳೂರು ವಿಳಾಸದ ಶಾಪ್‌ನಲ್ಲಿ ಗೃಹಬಳಕೆ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡು, ಇವುಗಳಿಂದ ವಾಣಿಜ್ಯ ಬಳಕೆ ಸಿಲಿಂಡರ್‌ಗಳು ಮತ್ತು ಸಣ್ಣ ಸಣ್ಣ ಸಿಲಿಂಡರ್‌ಗಳಿಗೆ ರೀಫಿಲ್ಲಿಂಗ್ ರಾಡ್‌ಗಳ ಮೂಲಕ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಿ ಮಾರಾಟ ಮಾಡಿಕೊಂಡು ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದ ಅಕ್ರಮ ಜಾಲವೊಂದನ್ನು ಸಿಸಿಬಿ ಪೊಲೀಸರು ಪತ್ತೆಮಾಡಿದ್ದಾರೆ.

ಇದರ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಪಡೆದು, ಮಾಹಿತಿ ಖಚಿತ ಪಡಿಸಿಕೊಂಡು ಸದರಿ ಶಾಪ್ ಮೇಲೆ ದಾಳಿ ಮಾಡಿ ಆರೋಪಿ ಕಡೆಯಿಂದ ಸುಮಾರು, 2 ಲಕ್ಷ ರೂ ಬೆಲೆಬಾಳುವ ಸರ್ಕಾರಿ ಸ್ವಾಮ್ಯದ ಭಾರತ್, ಇಂಡೇನ್ ಹಾಗೂ ಖಾಸಗಿ ಸ್ವಾಮ್ಯದ ಜ್ಯೋತಿ, ಎಂವಿಆರ್ ಕಂಪೆನಿಯ ದೊಡ್ಡ ಸಿಲಿಂಡರ್‌ಗಳು 47, ಸಣ್ಣ ಸಿಲಿಂಡರ್‌ಗಳು 49 ಒಟ್ಟು 96 ಸಿಲಿಂಡರ್‌ಗಳು ಒಂದು ರಾಡ್, ಒಂದು ಅಳತೆ ಯಂತ್ರ ಇವುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಶಾಪ್‌ನ ಮಾಲೀಕನಾದ ಆರೋಪಿ ಧನರಾಜ್ ತಲೆ ಮರೆಸಿ ಕೊಂಡಿರುತ್ತಾನೆ.

ಈ ಸಂಬಂಧ ಆರೋಪಿಯ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ / ಸಿಬ್ಬಂಧಿಯವರುಗಳು ಯಶಶ್ವಿಯಾಗಿ ಕೈಗೊಂಡಿರುತ್ತಾರೆ.

    

Related Posts