ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Rahul Gandhi Archives » Page 7 of 8 » Dynamic Leader
October 23, 2024
Home Posts tagged Rahul Gandhi (Page 7)
ದೇಶ

ಸೂರತ್: ಮೋದಿ ಉಪನಾಮಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಮೇಲ್ಮನವಿ ಕುರಿತು ಸೂರತ್ ಕೋರ್ಟ್ ಇದೇ 20ರಂದು ಆದೇಶ ಹೊರಡಿಸಲಿದೆ.

ಗುಜರಾತ್‌ನ ಸೂರತ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ವಿರುದ್ಧ ಮೋದಿ ಹೆಸರಿಗೆ ಮಾನಹಾನಿ ಮಾಡಿದ ಪ್ರಕರಣ ದಾಖಲಾಗಿತ್ತು. ಈ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಕಳೆದ ತಿಂಗಳು 23ರಂದು ತೀರ್ಪು ನೀಡಲಾಗಿತ್ತು. ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಜಾಮೀನು ನೀಡಲಾಯಿತು. 2 ವರ್ಷಗಳ ಶಿಕ್ಷೆಯ ಮರುದಿನ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹ ಗೊಳಿಸಲಾಯಿತು. ಶಿಕ್ಷೆಯ ವಿರುದ್ಧ ಅವರು ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಜತೆಗೆ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಹಾಗೂ ಪ್ರಕರಣದ ಅಂತಿಮ ತೀರ್ಪಿನವರೆಗೆ ಜಾಮೀನು ವಿಸ್ತರಿಸುವಂತೆ ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಮೇಲ್ಮನವಿ ಇಂದು ವಿಚಾರಣೆಗೆ ಬಂದಿತ್ತು. ರಾಹುಲ್ ಗಾಂಧಿಗೆ ಸೂರತ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ ನೀಡಿದ್ದ 2 ವರ್ಷ ಜೈಲು ಶಿಕ್ಷೆ ರದ್ದಾಗಬಹುದೇ ಎಂಬ ನಿರೀಕ್ಷೆಯಿತ್ತು. ಆದರೆ, ರಾಹುಲ್ ಗಾಂಧಿ ಮೇಲ್ಮನವಿ ಪ್ರಕರಣದ ಕುರಿತು ಗುಜರಾತ್ ಸೂರತ್ ಕೋರ್ಟ್ ಇದೇ 20ರಂದು ಆದೇಶ ಹೊರಡಿಸಲಿದೆ ಎಂದು ವರದಿಯಾಗಿದೆ. ಮೇಲ್ಮನವಿ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡುವಂತೆ ಅರ್ಜಿದಾರ ಬಿಜೆಪಿ ಶಾಸಕ ಬ್ರೂನೇಶ್ ಮೋದಿ ಅವರಿಗೆ ಹಾಗೂ ಗುಜರಾತ್ ಸರ್ಕಾರಕ್ಕೆ ಈಗಾಗಲೇ ಕೋರ್ಟ್ ಆದೇಶಿಸಿದೆ ಎಂಬುದು ಗಮನಾರ್ಹ. A Surat Sessions Court, while hearing an appeal seeking stay on Congress leader Rahul Gandhi’s conviction by the Magistrate court in the criminal defamation case against him has reserved it verdict, saying the order will be pronounced on April 20, reported Bar and Bench.

ದೇಶ ರಾಜಕೀಯ

ಸೂರತ್: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ, ಜಾಮೀನನ್ನೂ ನೀಡಲಾಯಿತು. 2 ವರ್ಷಗಳ ಜೈಲು ಶಿಕ್ಷೆ ಪ್ರಕಟಣೆಯ ಮರುದಿನ, ರಾಹುಲ್ ಗಾಂಧಿಯನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹ ಗೊಳಿಸಲಾಯಿತು.

ಈ ಹಿನ್ನಲೆಯಲ್ಲಿ, ಇಂದು ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆಯಲ್ಲಿ ತಮಗೆ ವಿಧಿಸಿರುವ 2 ವರ್ಷಗಳ ಜೈಲು ಶಿಕ್ಷೆಯ ವಿರುದ್ಧ ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿ ಜತೆಗೆ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಹಾಗೂ ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಜಾಮೀನು ವಿಸ್ತರಿಸುವಂತೆ ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಿದರು.

ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಭೂಪೇಶ್ ಬಾಗಲ್, ಸುಖವಿಂದರ್ ಸಿಂಗ್ ಸುಗು ಮತ್ತು ಪಕ್ಷದ ಪ್ರಮುಖ ನಾಯಕರು ನ್ಯಾಯಾಲಯಕ್ಕೆ ಬಂದಿದ್ದರು.

ರಾಹುಲ್ ಗಾಂಧಿಯ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು, ಏಪ್ರಿಲ್ 13 ರಂದು ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಘೋಷಿಸಿತು. ಅಲ್ಲಿಯವರೆಗೆ ರಾಹುಲ್ ಗಾಂಧಿಯ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ವಿಸ್ತರಿಸಿ ಆದೇಶ ಹೊರಡಿಸಿತು. ಮುಂದಿನ ವಿಚಾರಣೆಗೆ ರಾಹುಲ್ ಗಾಂಧಿ ಹಾಜರಾಗುವ ಅಗತ್ಯವಿಲ್ಲ ಎಂದೂ ತಿಳಿಸಲಾಗಿದೆ.

ರಾಜಕೀಯ

ರಾಹುಲ್ ಗಾಂಧಿ ಸ್ಪರ್ಧಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ, ಅವರ ವಯನಾಡ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಹೋದರಿ ಪ್ರಿಯಾಂಕಾ ಅವರನ್ನು ಕಣಕ್ಕೆ ಇಳಿಸಲು ಕೇರಳ ರಾಜ್ಯ ಕಾಂಗ್ರೆಸ್ ಯೋಜನೆ ರೂಪಿಸಿದೆ.

ಮೋದಿಯ ಮಾನಹಾನಿ ಪ್ರಕರಣದಲ್ಲಿ, ರಾಹುಲ್‌ಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಗುಜರಾತ್‌ನ ಸೂರತ್ ಕೋರ್ಟ್ ನೀಡಿದ ತೀರ್ಪಿನ ನಂತರ, ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಗೊಳಿಸಲಾಯಿತು. ಈ ಪರಿಣಾಮದಿಂದ ಅವರ ಕೇರಳದ ವಯನಾಡ್ ಲೋಕಸಭಾ ಸ್ಥಾನವು ಖಾಲಿಯಾಗಿದೆ.

ಪಂಜಾಬ್ ರಾಜ್ಯದ ಜಲಂಧರ್ ಕ್ಷೇತ್ರದ ಕಾಂಗ್ರೆಸ್ ಸಂಸದ ಚಂದೋಕ್ ಸಿಂಗ್ ಚೌಧರಿ ನಿಧನ, ಲಕ್ಷದ್ವೀಪ ರಾಷ್ಟ್ರೀಯವಾದಿ ಕಾಂಗ್ರೆಸ್ ಸಂಸದ ಮೊಹಮ್ಮದ್ ಫೈಸಲ್ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯ ಸಮಸ್ಯೆಯಿಂದಾಗಿ ಎರಡೂ ಕ್ಷೇತ್ರಗಳು ಖಾಲಿಯಾಗಿವೆ. ಖಾಲಿಯಾಗಿರುವ ಕ್ಷೇತ್ರಗಳಿಗೆ 90 ದಿನದೊಳಗೆ ಚುನಾವಣೆ ನಡೆಸ ಬೇಕಿರುವುದರಿಂದ, ಮೂರೂ ಲೋಕಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಸಲು ಚುನಾವಣೆ ಆಯೋಗದಿಂದ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ.

ಈ ಹಿನ್ನಲೆಯಲ್ಲಿ ಅನರ್ಹತೆಯ ವಿರುದ್ಧದ ಕಾನೂನು ಹೋರಾಟದಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದರೆ, ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲು ಕೇರಳ ರಾಜ್ಯ ಕಾಂಗ್ರೆಸ್ ಯೋಜನೆ ರೂಪಿಸಿದೆ. Wayanad going to bypoll soon? What EC’s Lakshadweep move signals.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುಕ್ಕೆ ದೇಶಾದ್ಯಂತ ಬಾರೀ ಸಂಚಲನ ಮೂಡಿಸಿದೆ. ಕರ್ನಾಟಕದ ಕೋಲಾರದಲ್ಲಿ 2019ರ ಸಂಸತ್ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ‘ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ, ಎಲ್ಲಾ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಹೆಸರಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ಗುಜರಾತ್ ಬಿಜೆಪಿಯ ಮಾಜಿ ಶಾಸಕ ಪೂರ್ಣೇಶ್ ಮೋದಿ, ‘ರಾಹುಲ್ ಗಾಂಧಿ ಭಾಷಣವು ಮೋದಿ ಸಮುದಾಯವನ್ನು ತಪ್ಪಾಗಿ ವರ್ಗೀಕರಿಸುತ್ತದೆ’ ಎಂದು ರಾಹುಲ್ ಗಾಂಧಿಯ ವಿರುದ್ಧ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು.

ಪ್ರಕರಣದ ವಿಚಾರಣೆಗೆ ಆರಂಭದಲ್ಲಿ ತಡೆ ನೀಡಲಾಗಿತ್ತು. ಆಗ ಅಂದಿನ ನ್ಯಾಯಾಧೀಶ ಎ.ಕೆ.ದೇವ್ ಅವರನ್ನು ಪ್ರಕರಣದಿಂದ ವರ್ಗಾವಣೆ ಮಾಡಿ ಪ್ರಕರಣಕ್ಕೆ ಹರೀಶ್ ವರ್ಮಾ ಎಂಬ ನ್ಯಾಯಾಧೀಶರನ್ನು ನೇಮಿಸಲಾಗಿತ್ತು. ಆ ಬಳಿಕ ಪ್ರಕರಣದ ಮೇಲಿನ ತಡೆ ಹಿಂಪಡೆದು ತನಿಖೆ ಆರಂಭಿಸಲಾಗಿತ್ತು. ತನಿಖೆಯ ಕೊನೆಯಲ್ಲಿ, ರಾಹುಲ್ ಗಾಂಧಿಯನ್ನು ಅಪರಾಧಿ ಎಂದು ಘೋಷಿಸಿದ ಸೂರತ್ ನ್ಯಾಯಾಲಯವು, ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ಮತ್ತು ಜಾಮೀನು ಪಡೆಯಲು ಒಂದು ತಿಂಗಳ ಕಾಲಾವಕಾಶ ನೀಡಿತು.

ಕಿರಿತ್ ಪನ್ವಾಲಾ

ತೀರ್ಪಿನ ಮರುದಿನ, ವಯನಾಡ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಮತ್ತು ಮುಂದಿನ 8 ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಲೋಕಸಭೆ ಕಾರ್ಯದರ್ಶಿ ಘೋಷಿಸಿದರು. ಈ ಸುದ್ದಿ ಕಾಳ್ಗಿಚ್ಚಿನಂತೆ ದೇಶಾದ್ಯಂತ ಹರಡಿತು. ಕೇಂದ್ರ ಸರ್ಕಾರದ ಈ ಕ್ರಮ ರಾಜಕೀಯ ಸೇಡಿನ ಕೃತ್ಯ ಎಂದು ಹಲವರು ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿಗೆ ನೀಡಿರುವ ಶಿಕ್ಷೆ ಹಾಗೂ ಸಂಸದ ಸ್ಥಾನದಿಂದ ಅನರ್ಹ ಗೊಳಿಸಿರುವುದರ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಪರ ವಕೀಲ ಕಿರಿತ್ ಪನ್ವಾಲಾ, “ಈ ಪ್ರಕರಣದಲ್ಲಿ ಉಲ್ಲೇಖಿಸಿರುವ ಶೇ.90ರಷ್ಟು ಆರೋಪಗಳು ನರೇಂದ್ರ ಮೋದಿ ವಿರುದ್ಧವೇ ಆಗಿವೆ. ವ್ಯಕ್ತಿಯ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ನಿರ್ದಿಷ್ಟ ವ್ಯಕ್ತಿಗೆ ಅನುಮತಿ ಇದೆ ಎಂದು ಕಾನೂನು ಹೇಳುತ್ತದೆ. ಆದರೆ ನರೇಂದ್ರ ಮೋದಿ ಈ ಪ್ರಕರಣ ದಾಖಲಿಸುವ ಬದಲು ಗುಜರಾತ್‌ನಲ್ಲಿರುವ ಪೂರ್ಣೇಶ್ ಮೋದಿ ದೂರು ದಾಖಲಿಸಿದ್ದಾರೆ.

ಒಂದು ಸಾಲು ಮಾತನಾಡಿದರೆ ಎರಡು ವರ್ಷ ಶಿಕ್ಷೆಯೇ? ಇಂತಹ ಹಲವಾರು ಪ್ರಕರಣಗಳ ಸ್ಥಿತಿಯನ್ನು ನಾನು ಪರಿಶೀಲಿಸಿದ್ದೇನೆ. ಯಾವುದೇ ಉನ್ನತ ನ್ಯಾಯಾಲಯಗಳು ಇಂತಹ ಶಿಕ್ಷೆ ನೀಡಿಲ್ಲ. ಬದಲಾಗಿ ಆರೋಪಿಗೆ ಮೌಖಿಕವಾಗಿ ಛೀಮಾರಿ ಹಾಕುವುದು ಅಥವಾ ನಾಮಮಾತ್ರ ಶಿಕ್ಷೆ ಅಥವಾ ದಂಡ ಇರುತ್ತದೆ. ಆದರೆ ರಾಹುಲ್ ಗಾಂಧಿ ವಿರುದ್ಧದ ಈ ಮಾನನಷ್ಟ ಮೊಕದ್ದಮೆಯಲ್ಲಿ ಹಾಗಾಗಲಿಲ್ಲ. ‘ಎಲ್ಲಾ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಹೆಸರು ಹೇಗೆ ಇದೆ’ ಎಂದು ರಾಹುಲ್ ಗಾಂಧಿ ಹೇಳಿದಾಗ, ಮೋದಿ ಸಮುದಾಯವನ್ನೇ ಉಲ್ಲೇಖಿಸುತ್ತಿದ್ದಾರೆ ಎಂದು ಅವರು ಊಹಿಸಿದ್ದಾರೆ. ಆದರೆ ವಾಸ್ತವದಲ್ಲಿ ಮೋದಿ ಎಂಬ ಹೆಸರಿನ ಸಮುದಾಯವೇ ಇಲ್ಲ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೂ ಇಲ್ಲ. ಮೋಧ್ ವನಿಕ್ (Modh Vanik) ಮತ್ತು ಮೋಧ್ ಘಂಚಿ (Modh-Ghanchi) ಎಂಬ ಸಮುದಾಯಗಳು ಮಾತ್ರವೇ ಇದೆ. ಮೋದಿ ಸಮಾಜವೆಂಬುದು ಯಾವುದೂ ಇಲ್ಲ. ಹಾಗೊಂದು ಸಮಾಜವೇ ಇಲ್ಲವೆನ್ನುವಾಗ, ಆ  ಸಮಾಜದ ಪ್ರತಿನಿಧಿಯೆಂದು ಹೇಳಿಕೊಂಡ ಒಬ್ಬರು ಹೇಗೆ ದೂರು ಕೊಡಲು ಸಾಧ್ಯ?

ಅದಿಲ್ಲದೇ ಮೋದಿ ಎಂಬ ಹೆಸರನ್ನು ಹೊಂದಿರುವವರು 13 ಕೋಟಿ ಜನರು ಇದ್ದಾರೆ. ಕಾನೂನಿನ ಪ್ರಕಾರ ಗುರುತಿಸಲು ಸಾಧ್ಯವಾಗದ ಸಾಮುದಾಯವಾಗಿ ಇರುವಾಗ ಇವರಿಂದ ದೂರು ನೀಡಲು ಸಾಧ್ಯವಿಲ್ಲ. ಈ ರೀತಿಯ ವಿವಿಧ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯವು ಹಲವು ತೀರ್ಪುಗಳನ್ನು ನೀಡಿದೆ. ದೂರುದಾರರು ಮೋಧ್ ವನಿಕ್ ಸಮುದಾಯವನ್ನೇ ಮೋದಿ ಸಮುದಾಯವೆಂದು ಭಾವಿಸಿಕೊಂಡಿದೆ. ಆದರೆ ರಾಹುಲ್ ಗಾಂಧಿ, ‘ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಕಳ್ಳರೆಲ್ಲಾ ಯಾಕೆ ಮೋದಿ ಎಂಬ ಉಪನಾಮ ಹೊಂದಿರುವವರು’ ಎಂದು ಹೇಳಿದಾಗ, ‘ಈ ಕಳ್ಳರು’ ಎಂಬ ಪದವನ್ನು ತಪ್ಪಾಗಿ ಕೈಬಿಟ್ಟಿದ್ದರಿಂದ, ಇದನ್ನು ಗಮನದಲ್ಲಿಟ್ಟುಕೊಂಡು ಪ್ರಕರಣ ದಾಖಲಿಸಲಾಗಿದೆ” ಎಂದು ವಕೀಲ ಕಿರಿತ್ ಪನ್ವಾಲಾ ಹೇಳಿದ್ದಾರೆ.

ಮೋದಿ ಎಂಬ ಹೆಸರಿನ ಸಮುದಾಯವೇ ಇಲ್ಲ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೂ ಇಲ್ಲ. ಮೋಧ್ ವನಿಕ್ (Modh Vanik) ಮತ್ತು ಮೋಧ್ ಘಂಚಿ (Modh-Ghanchi) ಎಂಬ ಸಮುದಾಯಗಳು ಮಾತ್ರವೇ ಇದೆ. ಮೋದಿ ಸಮಾಜವೆಂಬುದು ಯಾವುದೂ ಇಲ್ಲ. ಹಾಗೊಂದು ಸಮಾಜವೇ ಇಲ್ಲವೆನ್ನುವಾಗ, ಆ  ಸಮಾಜದ ಪ್ರತಿನಿಧಿಯೆಂದು ಹೇಳಿಕೊಂಡ ಒಬ್ಬರು ಹೇಗೆ ದೂರು ಕೊಡಲು ಸಾಧ್ಯ?

ರಾಜಕೀಯ

ನವದೆಹಲಿ: ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ವಿರುದ್ಧ ನಾನು ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ. ನಾನು ಯಾವ ಬೆದರಿಕೆಗೂ ಅಂಜುವುದಿಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಅನರ್ಹಗೊಂಡ ಸಂಸದ ರಾಹುಲ್ ಗಾಂಧಿ ಇಂದು ಪತ್ರಿಕಾ ಘೋಷ್ಟಿಯಲ್ಲಿ ಹೇಳಿದರು.

ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿದೆ. ಅದಾನಿಗಾಗಿ ವಿವಿಧ ಕಾನೂನುಗಳನ್ನು ಬಗ್ಗಿಸಲಾಗಿದೆ. ನಾನು ಸಂಸತ್ ನಲ್ಲಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದ್ದೆ. ಅವರು ನನ್ನನ್ನು ಮಾತನಾಡದಂತೆ ತಡೆದರು. ರೂ.20 ಸಾವಿರ ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಅದಾನಿಗೆ ಹಣ ಎಲ್ಲಿಂದ ಬಂತು? ಅದು ಯಾರ ಹಣ? ಹಲವು ನಕಲಿ ಕಂಪನಿಗಳ ಮೂಲಕ ಗುಂಪು ಅಕ್ರಮ ನಡೆದಿದೆ. ಚೀನಾ ವ್ಯಕ್ತಿಗೂ ಇದರಲ್ಲಿ ಸಂಬಂಧವಿದೆ. ಅದಾನಿ ಬಗ್ಗೆ ಮಾತನಾಡಿದಾಗಿನಿಂದ ಸಮಸ್ಯೆ ಶುರುವಾಯಿತು.

ನಾನು ಅದಾನಿ ಬಗ್ಗೆ ಮಾತನಾಡುವುದನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ನನ್ನ ಸಂಸದ ಸ್ಥಾನವನ್ನು ಕಿತ್ತುಕೊಳ್ಳಲಾಗಿದೆ. ನಾನು ಭಾರತದ ವಿರುದ್ಧ ಏನನ್ನೂ ಮಾತನಾಡಿಲ್ಲ. ದೇಶ ವಿರೋಧಿ ಶಕ್ತಿಗಳನ್ನು ಹೋರಾಡಿ ಸೋಲಿಸುತ್ತೇನೆ. ಭಾರತವನ್ನು ಅವಮಾನಿಸಿಲ್ಲ. ಅದಾನಿ ಬಗ್ಗೆ ಮಾತನಾಡುವಾಗ ಪ್ರಧಾನಿಯವರ ಕಣ್ಣಲ್ಲಿ ಭಯವನ್ನು ಕಂಡಿದ್ದೆ. ಮುಂದೆ ಏನು ಹೇಳಲು ಹೊರಟಿದ್ದೇನೋ ಎಂಬ ಭಯ ಅವರಿಗಿದೆ.

ನಾನು ಸ್ಪೀಕರ್‌ಗೆ ಬರೆದ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ. ನನ್ನ ಕ್ಷೇತ್ರ ವಯನಾಡಿನ ಜನತೆಗೆ ಪತ್ರ ಬರೆಯುಲಿದ್ದೇನೆ. ಈ ದೇಶದ ಜನರು ನನ್ನನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಅವರಲ್ಲಿಯೇ ನ್ಯಾಯ ಕೇಳುತ್ತೇನೆ. ಪ್ರಧಾನಿ ಮೋದಿಯನ್ನು ನೋಡಿ ಹೆದರುವುದಿಲ್ಲ. ನಾನು ಜೈಲಿಗೆ ಹೋಗಲೂ ಹೆದರುವುದಿಲ್ಲ. ನನ್ನ ಸಂಸದ ಸ್ಥಾನವನ್ನು ಕಸಿದುಕೊಂಡರೆ, ನಾನು ಸುಮ್ಮನಿರಲು ಸಾದ್ಯವಿಲ್ಲ. ವಿರೋಧ ಪಕ್ಷಗಳು ನನಗೆ ನೀಡುತ್ತಿರುವ ಬೆಂಬಲಕ್ಕಾಗಿ ಧನ್ಯವಾದಗಳು. ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಿದ್ದರೂ ಕೆಲಸ ಮುಂದುವರಿಸುತ್ತೇನೆ. ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ.

ಸಂಸತ್ ನಲ್ಲಿ ಸಚಿವರು ಸುಳ್ಳುಗಳನ್ನು ಹೇಳುತ್ತಿದ್ದಾರೆ. ನಾನು ಪ್ರಶ್ನೆಗಳನ್ನು ಕೇಳುವುದನ್ನು ತಡೆಯಲು ಸಾಧ್ಯವಿಲ್ಲ. ನಾನು ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ’ ಎಂದು ರಾಹುಲ್ ಹೇಳಿದರು.

NEW DELHI: Breaking silence over his disqualification from the Lok Sabha, Congress leader Rahul Gandhi hit out at the Narendra Modi-led BJP government reiterating that 

 

ರಾಜಕೀಯ

ರಾಹುಲ್ ಗಾಂಧಿ ಅವರ ಅನರ್ಹತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ‘ಟ್ವಿಟರ್’ ಪುಟದಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ನರೇಂದ್ರ ಮೋದಿ, ನಿಮ್ಮ ಅಭಿಮಾನಿಗಳು ದಿವಂಗತ ಪ್ರಧಾನಿ ಅವರ ಪುತ್ರನನ್ನು (ರಾಹುಲ್ ಗಾಂಧಿ) ‘ಮೀರ್ ಜಾಫರ್’ ಎಂದು ಕರೆಯುತ್ತಾರೆ. ನಿಮ್ಮ ಮುಖ್ಯಮಂತ್ರಿಗಳಲ್ಲಿ ಒಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು? ಎಂದು ಕೇಳುತ್ತಾರೆ. ಯಾವ ನ್ಯಾಯಾಧೀಶರೂ ನಿಮಗೆ 2 ವರ್ಷ ಜೈಲು ಶಿಕ್ಷೆ ನೀಡಿಲ್ಲ. ಅನರ್ಹಗೊಳಿಸಿಲ್ಲ. ರಾಹುಲ್ ಗಾಂಧಿ ನಿಜವಾದ ದೇಶಭಕ್ತ. ಅವರು ಅದಾನಿಯ ದರೋಡೆ ಬಗ್ಗೆ ಮಾತನಾಡಿದರು. ನೀರವ್ ಮೋದಿ ಮತ್ತು ಮೆಕುಲ್ ಚೋಕ್ಸಿ ಬಗ್ಗೆ ಪ್ರಶ್ನಿಸಿದರು. ನಿಮ್ಮ ಸ್ನೇಹಿತ ಅದಾನಿ ಸಂಸತ್ತಿಗಿಂತ ದೊಡ್ಡವರಾ? ಅವರ ದರೋಡೆಯ ಬಗ್ಗೆ ಪ್ರಶ್ನಿಸಿದರೆ ಏಕೆ ಹೆದರುತ್ತಿರಿ?

ನಮ್ಮ ಕುಟುಂಬವು ಉತ್ತರಾಧಿಕಾರ ರಾಜಕಾರಣ ಮಾಡುತ್ತಿದೆ ಎನ್ನುತ್ತೀರಿ. ಆದರೆ, ಈ ಕುಟುಂಬವೇ ರಕ್ತವನ್ನು ನೀಡಿ ಪ್ರಜಾಪ್ರಭುತ್ವವನ್ನು ಪೋಷಿಸಿತು. ಭಾರತೀಯ ಜನರಿಗಾಗಿ ಧ್ವನಿ ಎತ್ತಿತು. ಸತ್ಯಕ್ಕಾಗಿ ಹೋರಾಡಿತು. ನಮ್ಮ ರಕ್ತನಾಳಗಳಲ್ಲಿ ಹರಿಯುವ ರಕ್ತಕ್ಕೆ ವಿಶೇಷ ಗುಣವಿದೆ. ನಿಮ್ಮಂತಹ ಹೇಡಿತನದ, ಅಧಿಕಾರ ದಾಹದ ಸರ್ವಾಧಿಕಾರಿಗೆ ನಮ್ಮ ಕುಟುಂಬ ಎಂದಿಗೂ ಶರಣಾಗುವುದಿಲ್ಲ. ನೀವು ಇಷ್ಟಪಡುವದನ್ನು ಮಾಡಿಕೊಳ್ಳಿ’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಜಕೀಯ

ಕೋಲ್ಕತ್ತಾ: ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಜಾತ್ಯತೀತ ಜನತಾ ದಳದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಪಕ್ಷಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು.

ಒಡಿಶಾಗೆ ಭೇಟಿ ನೀಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಬಿಜು ಜನತಾದಳ ನಾಯಕ ಹಾಗೂ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾದರು. ಬೇಟಿಯ ಸಂದರ್ಭದಲ್ಲಿ 2024ರ ಲೋಕಸಭೆ ಚುನಾವಣೆ ಮೈತ್ರಿ ಕುರಿತು ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಶ್ಚಿಮ ಬಂಗಾಳಕ್ಕೆ ತೆರಳಿ, ಕೋಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇಬ್ಬರೂ ರಾಷ್ಟ್ರೀಯ ರಾಜಕೀಯದ ಬಗ್ಗೆ ಮತ್ತು ವಿಶೇಷವಾಗಿ 2024ರ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಹೆಚ್.ಡಿ.ಕುಮಾರಸ್ವಾಮಿ ನಂತರ ಮಾಧ್ಯಮದವರನ್ನು ಭೇಟಿ ಮಾಡಿದರು. ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಕೇಳಿದಾಗ, ‘ಇದು ಕೇಂದ್ರ ಸರ್ಕಾರದ ಕೆಲಸ ಎಂಬುದು ದೇಶಕ್ಕೆ ಗೊತ್ತಿದೆ. ರಾಹುಲ್ ಅನರ್ಹತೆಗೆ ಬಗ್ಗೆ ಆಶ್ಚರ್ಯಪಡುವಂಥದ್ದೇನೂ ಇಲ್ಲ’ ಎಂದರು.
HD Kumaraswamy to meet Mamata Banerjee in Kolkata this evening

ರಾಜಕೀಯ

ಚೆನ್ನೈ: 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿಯನ್ನು ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಖಂಡಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧದ ಅನರ್ಹತೆ ಕ್ರಮವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ ಮೇಲಿನ ದಾಳಿ ಪ್ರಗತಿಪರ ಪ್ರಜಾಸತ್ತಾತ್ಮಕ ಶಕ್ತಿಗಳ ಮೇಲಿನ ದಾಳಿಯಾಗಿದೆ. ಭಾರತ ಏಕತಾ ಮೆರವಣಿಯ ಪ್ರಭಾವವೂ ಅನರ್ಹತೆಗೆ ಕಾರಣವಾಗಿದೆ ಎಂದು ಹೇಳಿರುವ ಸ್ಟಾಲಿನ್, ರಾಹುಲ್ ಗಾಂಧಿಯನ್ನು ಅನರ್ಹಗೊಳಿಸುವ ಫ್ಯಾಸಿಸ್ಟ್ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಇದರ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿರುವ ಅವರು. ಈ ಅನರ್ಹತೆಯ ಕ್ರಮಗಳ ಮೂಲಕ ಬಿಜೆಪಿ ಪ್ರಜಾಪ್ರಭುತ್ವ ಎಂಬ ಪದವನ್ನು ಉಚ್ಚರಿಸುವ ಹಕ್ಕನ್ನು ಕಳೆದುಕೊಂಡಿದೆ. ಬಿಜೆಪಿ ನಾಯಕತ್ವವು ರಾಹುಲ್ ಗಾಂಧಿಗೆ ಹೆದರುತ್ತಿದೆ ಎಂಬುದನ್ನು ಇದು ತೋರಿಸುತ್ತಿದೆ. ಸುಪ್ರೀಂ ಕೋರ್ಟ್ 2 ವರ್ಷಗಳ ಜೈಲು ಶಿಕ್ಷೆಯನ್ನು ಎತ್ತಿಹಿಡಿಯಲಿಲ್ಲ. ಮೇಲ್ಮನವಿ ಸಲ್ಲಿಸುವುದು ಮೂಲಭೂತ ಹಕ್ಕು ಮತ್ತು ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸುವುದು ಸಂಸದರ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿದುಕೊಂಡಂತೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ಸಂಸತ್ತಿನ ಸದಸ್ಯರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಪ್ರಜಾಸತ್ತಾತ್ಮಕ ಹಕ್ಕು ಇಲ್ಲವೆಂದು ಬೆದರಿಕೆಯ ದನಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಮತ್ತೆ ಸಂಸತ್ ಪ್ರವೇಶಿಸಲು ಅವಕಾಶ ನೀಡಿದರೆ ತಮ್ಮ ರಾಜಕೀಯಕ್ಕೆ ಧಕ್ಕೆ ಬರಲಿದೆ ಎಂದು ರಾಹುಲ್ ಅವರನ್ನು ಅನರ್ಹಗೊಳಿಸಿದ್ದಾರೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾಡಿರುವ ಆರೋಪಗಳಿಗೆ ಕೇಂದ್ರ ಸರ್ಕಾರದಲ್ಲಿ ಯಾರೂ ಇನ್ನೂ ಸರಿಯಾದ ಉತ್ತರ ನೀಡಿಲ್ಲ. ಕೇಂದ್ರ ಸರ್ಕಾರವು ಆರೋಪಗಳಿಗೆ ಉತ್ತರ ನೀಡದೆ ಪ್ರಶ್ನಿಸಿದವರನ್ನು ವಜಾಗೊಳಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ತೀರ್ಪು; ಐಕೋರ್ಟ್‌ನಲ್ಲಿ ಮೇಲ್ಮನವಿ ಇದ್ದು, ಅಂತಿಮ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಇದನ್ನೇ ಕಾಯುತ್ತಿದ್ದಂತೆ ಬಿಜೆಪಿ 23 ರಂದು ತೀರ್ಪು, 24ರಂದು ಅಧಿಕಾರ ಕಸಿಯುವ ಕ್ರಮವನ್ನು ಕೈಗೊಂಡಿದೆ.

ದೇಶ ವಿದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಅದರ ಭಾಗವಾಗಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಸಂಸದ ರಾಹುಲ್‌ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯ ಹೆಸರಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡು ದೇಶದ ಜನರನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಿದರು. ಈ ಏಕತಾ ಯಾತ್ರೆಗೆ ಜನ ಅದ್ಧೂರಿ ಸ್ವಾಗತ ನೀಡಿದ್ದರು.

ಏಕತಾ ಯಾತ್ರೆ ಮುಗಿಸಿ ಇಂಗ್ಲೆಂಡ್ ರಾಜಧಾನಿ ಲಂಡನ್ ಗೆ ತೆರಳಿದ ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಅಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್ ಭಾಗವಹಿಸುತ್ತಿದ್ದಾರೆ. ಲಂಡನ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರ ಮೇಲೆ ನಿಗಾ ಇಡಲಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಇದೇ ವೇಳೆ ಬೆಲೆಯೂ ಏರಿಕೆಯಾಗಿದೆ. ಭಾರತದ ಸಂಪೂರ್ಣ ಆರ್ಥಿಕತೆಯನ್ನು ಒಬ್ಬರು ಅಥವಾ ಇಬ್ಬರು ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ಜನರು ತಮ್ಮ ಆರ್ಥಿಕತೆಯನ್ನು ಕಳೆದುಕೊಂಡಿದ್ದಾರೆ. ಅಮೆರಿಕ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳ ಉತ್ಪಾದನೆ ಕುಸಿದು ಚೀನಾಕ್ಕೆ ಸ್ಥಳಾಂತರವಾಗುತ್ತಿದೆ’ ಎಂದು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Kiran Rijiju

ಇದರಿಂದ ಕೆಂಡಾಮಂಡಲರಾದ ಬಿಜೆಪಿ ಸದಸ್ಯರು ‘ರಾಹುಲ್ ಗಾಂಧಿ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಯನ್ನು ಕೆಡಿಸಿದ್ದಾರೆ’ ಎಂದು ತೀವ್ರ ಟೀಕೆ ಮಾಡುತ್ತಿದ್ದಾರೆ. ಈ ಸಂಬಂಧ ಕೇಂದ್ರ ಕಾನೂನು ಸಚಿವ ರಿಜಿಜು ಮಾತನಾಡಿ, ರಾಹುಲ್ ಗಾಂಧಿಯ ಹೆಸರು ಹೇಳದೆ, ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಮಸಿ ಬಳಿಯುವ ಉದ್ದೇಶದಿಂದ ಕೆಲವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಈ ಪ್ರಯತ್ನ ಎಂದಿಗೂ ಯಶಸ್ವಿಯಾಗುವುದಿಲ್ಲ. ಅಮೆರಿಕ ಬಹುಶಃ ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವಾಗಿದೆ. ಆದರೆ ಭಾರತವು ಪ್ರಜಾಪ್ರಭುತ್ವದ ತಾಯಿನಾಡು. ನ್ಯಾಯಾಲಯಗಳು ವಿರೋಧ ಪಕ್ಷಗಳಂತೆ ವರ್ತಿಸಬೇಕು ಎಂದು ಅವರು ಭಾವಿಸುತ್ತಿದ್ದಾರೆ. ಅವರು ಸರ್ಕಾರದ ವಿರುದ್ಧ ಮತ್ತು ಅವರ ಪರವಾಗಿ ತೀರ್ಪುಗಳನ್ನು ಬಯಸುತ್ತಿದ್ದಾರೆ. ಆದರೆ ಅದು ಆಗದ ಕಾರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ’ ಎಂದು ತೀವ್ರವಾಗಿ ಟೀಕಿಸಿದ್ದರು.

Jayaram Ramesh

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯರಾಮ್ ರಮೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಇದಕ್ಕೆ ವಿವರಣೆ ನೀಡಿದ್ದಾರೆ: ‘ರಾಹುಲ್ ಗಾಂಧಿ ಅವರು ಚೀನಾದಂತಹ ರಾಜ್ಯ-ನಿಯಂತ್ರಿತ ಉದ್ಯಮ ವ್ಯವಸ್ಥೆಯ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ ಮತ್ತು ಭಾರತದಂತಹ ಪ್ರಜಾಪ್ರಭುತ್ವ ದೇಶಗಳಲ್ಲಿ ಉತ್ಪಾದನಾ ಸಾಧನಗಳನ್ನು ಗರಿಷ್ಠಗೊಳಿಸಲು ಒತ್ತು ನೀಡುವ ಅವಶ್ಯಕತೆಯಿದೆ. ಬಿಜೆಪಿಯವರಿಗೆ ಆ ಮಾತಿನ ಸೂಕ್ಷ್ಮತೆ ಅರ್ಥವಾಗುತ್ತಿಲ್ಲ’ ಎಂದರು. ಇದೇ ವೇಳೆ ರಾಹುಲ್ ಭಾಷಣಕ್ಕೆ ಹಲವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

Anyone who tries to discredit India will never succeed: Kiren Rijiju
The comments come in wake of the ruling BJP attacking Congress leader Rahul Gandhi and accusing him of attempting to defame and denigrate India on foreign soil after the latter’s speech at Cambridge. Union minister of law Kiren Rijiju on Monday said that anyone who attempts to discredit India and its institution will never succeed.

ವಿದೇಶ

ಕೇಂಬ್ರಿಡ್ಜ್: ‘ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ ಮತ್ತು ಬೆದರಿಕೆ ಹಾಕಲಾಗುತ್ತಿದೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

‘ಭಾರತದಲ್ಲಿ ಎಲ್ಲೆಡೆ ಸ್ವಾತಂತ್ರ್ಯ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಗುಪ್ತಚರ ಅಧಿಕಾರಿಯೊಬ್ಬರು ನನ್ನನ್ನು ಎಚ್ಚರಿಸಿದ್ದರು. ‘ನನ್ನ ಮೊಬೈಲ್ ಫೋನ್ ಮತ್ತು ಭಾಷಣಗಳನ್ನು ಟೇಪ್ ಮಾಡಲಾಗುತ್ತಿದೆ’ ಎಂಬ ಆಘಾತಕಾರಿ ವಿಷಯವನ್ನು ಅವರು ನನಗೆ ತಿಳಿಸಿದರು. ಈ ಹಿಂದೆ ಕೂಡ ನನ್ನ ಮತ್ತು ಇತರ ಹಲವು ರಾಜಕೀಯ ನಾಯಕರು ಭಾಷಣಗಳನ್ನು ಪೆಗಾಸಸ್ ತಂತ್ರಾಂಶವನ್ನು ಬಳಸಿ ಬೇಹುಗಾರಿಕೆ ನಡೆಸಲಾಯಿತು. ಇದು ಭಾರತದಲ್ಲಿ ಭಾರೀ ವಿವಾದಕ್ಕೆ ಕಾರಣವಾಯಿತು. ಪ್ರಜಾಪ್ರಭುತ್ವದ ಮೂಲ ರಚನೆಗಳ ಮೇಲೆ ಪ್ರಜಾಸತ್ತಾತ್ಮಕ ದಾಳಿ ನಡೆಯುತ್ತಿದೆ. ಸಂಸತ್ತು, ನ್ಯಾಯಾಂಗ, ಪತ್ರಿಕೋದ್ಯಮದಲ್ಲಿ ಪ್ರಜಾಪ್ರಭುತ್ವದ ಬಿಕ್ಕಟ್ಟು ನೀಡಲಾಗುತ್ತಿದೆ.

ಪಾರ್ಲಿಮೆಂಟ್ ಮುಂದೆ ಛಾಯಾಚಿತ್ರವನ್ನು ತೆಗೆದಿದ್ದನ್ನು ನೋಡಬಹುದು, ಆದರೆ ಈಗ ಪಾರ್ಲಿಮೆಂಟ್ ಮುಂದೆ ಹೋರಾಟ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ನನ್ನ ಮತ್ತು ಹೋರಾಟಗಾರರ ವಿರುದ್ಧ ಅನೇಕ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ಮೊಕದ್ದಮೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ.’ ಎಂದು ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದರು.