ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ನೀಡಲು ಕಾರಣವೇನು ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಖರ್ಗೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ನೀಡಲು ಕಾರಣವೇನು ಎಂಬುದನ್ನು ಸರ್ಕಾರ ಉತ್ತರಿಸಬೇಕು. ಇದರಲ್ಲಿ ಏನೋ ಅನುಮಾನವಿದೆ ಎಂದು ನನಗೆ ತೋರುತ್ತದೆ.
ಅವರ ಆರೋಗ್ಯ ಚೆನ್ನಾಗಿದೆ. ಅವರು ಯಾವಾಗಲೂ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಿದ್ದರು. ಅವರ ರಾಜೀನಾಮೆಯ ಹಿಂದೆ ಯಾರು ಮತ್ತು ಏನಿದೆ ಎಂಬುದನ್ನು ದೇಶ ತಿಳಿದುಕೊಳ್ಳಬೇಕು.
ಆರ್‌ಎಸ್‌ಎಸ್ ಈ ದೇಶದ ಇತಿಹಾಸವನ್ನು ತಲೆಕೆಳಗಾಗಿ ಬರೆಯಲು ಪ್ರಯತ್ನಿಸುತ್ತಿದೆ. ಅವರು ನೆಹರೂ ಬರೆದ ಪುಸ್ತಕವನ್ನು ತಿರಸ್ಕರಿಸುತ್ತಾರೆ. ಆರ್‌ಎಸ್‌ಎಸ್ ಮತ್ತು ಭಾರತ ವಿಭಿನ್ನ ಇತಿಹಾಸಗಳನ್ನು ಹೊಂದಿವೆ ಎಂದು ಅವರು ಹೇಳಿದರು.