ಬಿಜೆಪಿ ರಹಸ್ಯ ಸಮಾಲೋಚನಾ ಸಭೆ: ಆರ್‌ಎಸ್‌ಎಸ್‌ ಪ್ರಮುಖರು ಬಾಗಿ? » Dynamic Leader
October 21, 2024
ರಾಜಕೀಯ

ಬಿಜೆಪಿ ರಹಸ್ಯ ಸಮಾಲೋಚನಾ ಸಭೆ: ಆರ್‌ಎಸ್‌ಎಸ್‌ ಪ್ರಮುಖರು ಬಾಗಿ?

ಜೂನ್ ಮೊದಲ ವಾರದಲ್ಲಿ ನವದೆಹಲಿಯಲ್ಲಿ ಬಿಜೆಪಿಯ ರಹಸ್ಯ ಸಮಾಲೋಚನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಐವರು ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರೊಂದಿಗೆ ಆರ್‌ಎಸ್‌ಎಸ್‌ನ ಇಬ್ಬರು ಪ್ರಮುಖ ನಾಯಕರೂ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಆರ್‌ಎಸ್‌ಎಸ್‌ ಸಂಘಟನೆ ಮೇಲೆ ಬಿಜೆಪಿ ನಾಯಕರಿಗೆ ಯಾವಾಗಲೂ ಹೆಚ್ಚು ಗೌರವವಿರುತ್ತದೆ. ಪಕ್ಷದ ಚುನಾವಣಾ ರಣತಂತ್ರದಲ್ಲಿ ಭಾಗಿಯಾಗುವುದು, ಕ್ಷೇತ್ರ ಪ್ರವೇಶಿಸಿ ಬಿಜೆಪಿ ಪರ ಕೆಲಸ ಮಾಡುವುದು ಮುಂತಾದ ಕಾರ್ಯದಲ್ಲಿ ಆರ್ ಎಸ್ಎಸ್‌ ಸಕ್ರಿಯವಾಗಿ ಇರುತ್ತದೆ.

ಈ ಹಿನ್ನಲೆಯಲ್ಲಿ ಆರ್‌ಎಸ್‌ಎಸ್‌ ಮುಖಂಡ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಇಬ್ಬರೂ ಈ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ . ಈ ಸಭೆಯಲ್ಲಿ 2024ರ ಲೋಕಸಭೆ ಚುನಾವಣೆಯ ಕಾರ್ಯತಂತ್ರ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳು ಮುಂತಾದ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಮತ್ತು ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಬಿಜೆಪಿ ಸರ್ಕಾರ ರಚಿಸಲು ಏನು ಮಾಡಬೇಕು ಎಂಬುದರ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ.

ಈ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜಾರಿಯಾಗಲಿದೆ ಎಂದೂ ಹೇಳಲಾಗುತ್ತಿದೆ.

Related Posts