ಕಾದಿದೆ ಅಪಾಯ; ಸುರಿಯಲಿದೆ ಅಭೂತಪೂರ್ವ ಮಳೆ: ಸಂಶೋಧಕರು ಎಚ್ಚರಿಕೆ!
ಡಿ.ಸಿ.ಪ್ರಕಾಶ್ ಸಂಪಾದಕರು
ದೇಶವು ನೈಋತ್ಯ ಮುಂಗಾರಿನಿಂದಲೇ ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರಾರಂಭವಾಗುವ ಈ ಮುಂಗಾರು, ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳ ಗಡಿ ಪ್ರದೇಶಗಳ ಮೂಲಕ, ಉತ್ತರ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳ ಮೇಲೆ ಹಂತ ಹಂತವಾಗಿ ಮುಂದುವರಿದು ಮಳೆಯನ್ನು ನೀಡುತ್ತದೆ.
ಈ ನೈಋತ್ಯ ಮುಂಗಾರು ದೇಶದ ಹೆಚ್ಚಿನ ನೀರಿನ ಅಗತ್ಯಗಳನ್ನು ಪೂರೈಸುವ ಮಳೆಯಾಗಿದೆ. ಮುಂಗಾರು ಸಮಯದಲ್ಲಿ ಮಳೆಯಾಗದ ಪ್ರದೇಶಗಳು ಸಹ ನದಿಗಳಿಂದ ನೀರನ್ನು ಪಡೆಯುತ್ತವೆ. ಹೀಗಾಗಿ ನೈಋತ್ಯ ಮುಂಗಾರು ಮೇಲಿನ ನಿರೀಕ್ಷೆ ಸದಾ ಹೆಚ್ಚಾಗಿರುತ್ತದೆ.
ಸಾಮಾನ್ಯವಾಗಿ ನೈಋತ್ಯ ಮುಂಗಾರು ಜೂನ್ ತಿಂಗಳಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಹಿನ್ನಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ, ಈ ವರ್ಷ ಜೂನ್ 1 ರಂದು ಆರಂಭವಾಗಬೇಕಿದ್ದ ಮುಂಗಾರು, ಒಂದೆರಡು ದಿನ ತಡವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ಪ್ರಕಟಿಸಿತು. ತಡವಾಗಿ ಆರಂಭವಾದರೂ ಮಳೆಯ ಪ್ರಮಾಣ ಕಡಿಮೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿತ್ತು.
ಈ ಹಿನ್ನಲೆಯಲ್ಲಿ, ನೈರುತ್ಯ ಮುಂಗಾರು ಈ ವರ್ಷ ಅಭೂತಪೂರ್ವವಾಗಿರಲಿದ್ದು, ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಯುರೋಪಿಯನ್ ಹವಾಮಾನ ಕೇಂದ್ರ ಹೇಳಿದೆ. ಇದರ ಬಗ್ಗೆ ವೆಸ್ಟ್ ಕೋಸ್ಟ್ ವೆದರ್‌ಮ್ಯಾನ್ ಎಂಬ ಖಾಸಗಿ ಹವಾಮಾನ ಶಾಸ್ತ್ರಜ್ಞರು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಸಾಕ್ಷ್ಯಾಧಾರವನ್ನು ಪೋಸ್ಟ್ ಮಾಡಿದ್ದಾರೆ.
ECMWF weeklies shows robust and powerful Monsoon over Kerala and Coastal karnataka throughout month of June.
Many records will tumble next month.
Also westerlies have established over Kerala, so summer has officially ended from today in Kerala.. pic.twitter.com/hhviZGxUsG
— West Coast Weatherman (@RainTracker) May 26, 2023
ಯುರೋಪಿಯನ್ ಹವಾಮಾನ ಕೇಂದ್ರದ (ECMWF) ಸಾಪ್ತಾಹಿಕ ಮುನ್ಸೂಚನೆಯಲ್ಲಿ, ಜೂನ್ ತಿಂಗಳ ಉದ್ದಕ್ಕೂ ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ ಬಲವಾದ ಮತ್ತು ಶಕ್ತಿಯುತ ಮುಂಗಾರು ಮಳೆಯಾಗುತ್ತದೆ ಎಂದು ಹೇಳಲಾಗಿದೆ” ಎಂದರು. ಮುಂದಿನ ತಿಂಗಳು ಅಂದರೆ ಜೂನ್ ತಿಂಗಳ ಮಳೆ ಈಗಾಗಲೇ ದಾಖಲಾಗಿರುವ ಹಲವು ದಾಖಲೆಗಳನ್ನು ಮುರಿಯಲಿದೆ ಎಂದು ವೆಸ್ಟ್ ಕೋಸ್ಟ್ ವೆದರ್‌ಮ್ಯಾನ್ ಹೇಳಿದ್ದಾರೆ.
ಪಶ್ಚಿಮದಿಂದ ಬೀಸುತ್ತಿರುವ ಗಾಳಿ ಕೇರಳದಲ್ಲಿ ತೀವ್ರಗೊಂಡಿದೆ. ಹೀಗಾಗಿ ಕೇರಳದಲ್ಲಿ ಮೊದಲ ಬೇಸಿಗೆ ಕಾಲ ಅಧಿಕೃತವಾಗಿ ಅಂತ್ಯಗೊಂಡಿದೆ ಎಂದು ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೆಸ್ಟ್ ಕೋಸ್ಟ್ ವೆದರ್‌ಮ್ಯಾನ್‌ನ ಈ ಪೋಸ್ಟ್ ಭಯವನ್ನು ಹುಟ್ಟುಹಾಕಿದೆ. ಏತನ್ಮಧ್ಯೆ, ಪೆಸಿಫಿಕ್ ಸಾಗರದಲ್ಲಿ 7 ವರ್ಷಗಳಿಗೊಮ್ಮೆ ಸಂಭವಿಸುವ ಎಲ್ ನಿನೋ ಈ ವರ್ಷ ಜೂನ್‌ನಲ್ಲಿ ಸಂಭವಿಸುವ ನಿರೀಕ್ಷೆಯಿರುವುದರಿಂದ, ಇದು ನೈರುತ್ಯ ಮುಂಗಾರಿನ ಮೇಲೆ ಪರಿಣಾಮ ಬೀರಲಿದೆ ಎಂದೂ ಹೇಳಲಾಗಿದೆ.