ಜೂಜಾಟ ಹಣದ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮತ್ತಿ ರವಿ ಕೊಲೆ: ನಂದಿನಿ ಲೇಔಟ್ ಪೊಲೀಸರಿಂದ 7 ಜನ ಅರೆಷ್ಟ್!
ಬೆಂಗಳೂರು: ಲಗ್ಗೆರೆ, ಚೌಡೇಶ್ವರಿ ನಗರ ನಿವಾಸಿಯಾದ ಕಾಂಗ್ರೆಸ್ ಕಾರ್ಯಕರ್ತ ಮತ್ತಿ ರವಿ ಎಂಬಾತನು ಸ್ನೇಹಿತನಾದ ಕೃಷ್ಣಮೂರ್ತಿಯ ಹುಟ್ಟು ಹಬ್ಬಕ್ಕೆಂದು ದಿನಾಂಕ: 24-04-2023 ರಂದು ಸಂಜೆ ಸುಮಾರು 07-45 ಗಂಟೆಯ ಸಮಯಕ್ಕೆ ಹೋಗಿ ಮನೆಗೆ ವಾಪಸ್ಸು ಬಂದಿದ್ದ. ರವಿ ಮನೆಗೆ ಬಂದನಂತರ ಮಂಜು ಎಂಬುವವನು ರವಿಗೆ ಪದೇ ಪದೇ ಕಾಲ್ ಮಾಡುತ್ತಲೇ ಇದ್ದು, ಸದರಿ ಕರೆಯನ್ನು ಸ್ವೀಕರಿಸಿ, 50 ಅಡಿ ರಸ್ತೆಯ ಹತ್ತಿರ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟು ಹೋಗಿದ್ದ.
ದಿನಾಂಕ: 25-04-2023 ರಂದು ರಾತ್ರಿ ಸುಮಾರು 10-00 ಗಂಟೆಯ ಸಮಯದಲ್ಲಿ ರವಿಯ ಸ್ನೇಹಿತ ನರಸಿಂಹ ರವಿಯ ಮನೆಯ ಬಳಿ ಬಂದು, ‘ರವಿಗೆ ಮಂಜು ಮತ್ತು ಆತನ ಸ್ನೇಹಿತರು ಹೊಡೆದಿರುತ್ತಾರೆ, ಆತನನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿರುತ್ತದೆ’ ಎಂದು ಆತನ ಪತ್ನಿ ಪುಷ್ಪ ಬಳಿ ತಿಳಿಸಿದ್ದಾನೆ. ಪುಷ್ಪ ಅವರು ನೀಡಿದ ದೂರಿನ ಮೇರೆಗೆ ನಂದಿನಿ ಲೇಔಟ್ ಪೊಲೀಸ್ ಠಾಣಾ ಮೊ.ಸಂ.154/2023 ಕಲಂ 302 ಐಪಿಸಿ ಮತ್ತು ಕಲಂ 3(2), (ವಿ), ಎಸ್.ಸಿ/ಎಸ್.ಟಿ ಆಕ್ಟ್ ರೀತ್ಯ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ 1) ಕೆ.ಮಂಜುನಾಥ್ @ ಮಂಜು, 2) ನಾಗರಾಜ್ @ ಸ್ಪಾಟ ನಾಗ, 3) ಬಿ.ಸಿ.ಗೋಪಾಲ್ @ ಗೋಪಿ, 4) ಕಿರಣ್ ಕುಮಾರ್ ಎನ್, 5) ಮಣಿಕಂಠನ್ ಕೆ @ಮಣಿ, 6) ಕಾರ್ತಿಕ್ ಎಸ್, 7) ಬಾಬು @ ಹಾಸಿಗೆ ಬಾಬು ಮುಂತಾದ ಒಟ್ಟು 7 ಜನರನ್ನು ನಂದಿನಿ ಲೇಔಟ್ ಪೊಲೀಸ್ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ.
ಕಳೆದ ಯುಗಾದಿ ಹಬ್ಬದಲ್ಲಿ ಮೃತ ರವಿ ಜೂಜಾಟದಲ್ಲಿ ಹಣವನ್ನು ಗೆದ್ದಿದ್ದು, ಎ1, ಎ2 ಅರೋಪಿಗಳು ಸೋತ ಹಣವನ್ನು ಕೊಡುವಂತೆ ಮೃತ ರವಿಗೆ ಕೇಳಿದ್ದು, ಮೃತ ರವಿ ಹಣ ಕೊಡದಿದ್ದರಿಂದ, ಎ1, ಎ2 ಆರೋಪಿಗಳು ಬಲವಂತವಾಗಿ ರವಿಯಿಂದ ಸ್ವಲ್ಪ ಹಣವನ್ನು ಪಡೆದುಕೊಂಡಿರುತ್ತಾರೆ. ನಂತರದ ದಿನಗಳಲ್ಲಿ ಮೃತ ರವಿ ತನ್ನ ಹಣವನ್ನು ವಾಪಸ್ಸು ಕೊಡುವಂತೆ ಎ1, ಎ2 ಅರೋಪಿಗಳಿಗೆ ಅಗಾಗೆ ಕೇಳುತ್ತಿದ್ದರಿಂದ ಸದರಿ ಅರೋಪಿಗಳು, ದ್ವೇಷ ಸಾಧಿಸಿಕೊಂಡು ಚೌಡೇಶ್ವರಿ ನಗರ, ಹಳ್ಳಿರುಚಿ ಸಸ್ಯಹಾರಿ ಹೋಟೆಲ್ ಮುಂಭಾಗ ಖಾಲಿ ಜಾಗದ ಬಳಿ ಮೃತ ರವಿಯನ್ನು ಕರೆಯಿಸಿಕೊಂಡು, ಗುಂಪು ಕಟ್ಟಿಕೊಂಡು, ಡ್ರ‍್ಯಾಗರ್‌ನಿಂದ ಬಲವಾಗಿ ಹೊಡೆದು, ಸೈಜು ಕಲ್ಲಿನಿಂದ ದೇಹದ ಮೇಲೆ ಇತರೆ ಭಾಗಗಳಿಗೆ ಹೊಡೆದು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಶಿವ ಪ್ರಕಾಶ್ ದೇವರಾಜು, ಐಪಿಎಸ್., ಬೆಂಗಳೂರು ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಪ್ರವೀಣ್ ಎಂ. ಸಹಾಯಕ ಪೊಲೀಸ್ ಆಯುಕ್ತರು, ಮಲ್ಲೇಶ್ವರಂ ಉಪ-ವಿಭಾಗ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ನಲವಾಗಲು ಮಂಜುನಾಥ್ ಹಾಗೂ ನಂದಿನಿ ಪೊಲೀಸ್ ಠಾಣೆಯ ನೇತೃವದಲ್ಲಿ ಪಿಎಸ್ಐಗಳಾದ ಭೀಮಾಶಂಕರ್ ಗುಮತೆ, ವಿನೋಧ ರಾಥೋಡ್, ಕೃಷ್ಣಪ್ಪ ಮಾಚನಹಳ್ಳಿ, ಚಂದನ್ ಕುಮಾರ್ ಮತ್ತು ಠಾಣೆಯ ಪೊಲೀಸ್ ಸಿಬ್ಬಂದಿಗಳು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.