ಬಕ್ರೀದ್‌ಗೂ ಮುನ್ನವೇ ಮೇಕೆಗಳ ಮಾರಾಟ ಜೋರಾಗಿದೆ!
ವೆಲ್ಲೂರು ಜಿಲ್ಲೆಯ ಕಾಟ್‌ಪಾಡಿ ಬಳಿ ಬಕ್ರೀದ್ ಹಬ್ಬದ ನಿಮಿತ್ತ ಮೇಕೆಗಳನ್ನು ಮಾರಾಟ ಮಾಡಲಾಗಿತ್ತು. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮೇಕೆಗಳನ್ನು ಖರೀದಿಸಿ, ಅದರ ಮಾಂಸವನ್ನು ಬಂಧು, ಮಿತ್ರರು ಮನೆಯವರಿಗೆಲ್ಲ ಹಂಚುತ್ತಾರೆ.
ಈ ಹಿನ್ನಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳ ರೈತರು, ಬಕ್ರೀದ್ ನಿಮಿತ್ತ ಕಾಟ್‌ಪಾಡಿ ಸಮೀಪದ ಕೆ.ವಿ.ಕುಪ್ಪಂ ಮೇಕೆ ಮಾರುಕಟ್ಟೆಗೆ ನೂರಾರು ಮೇಕೆಗಳನ್ನು ತಂದಿದ್ದರು. ಸಣ್ಣ ಮೇಕೆಗಳು ರೂ.10 ಸಾವಿರ ವರೆಗೆ ಮತ್ತು ದೊಡ್ಡ ಮೇಕೆಗಳು ರೂ.40 ಸಾವಿರದಿಂದ 50 ಸಾವಿರ ವರಗೆ ಮಾರಾಟವಾದವು.
ಅದರಲ್ಲೂ ಮೇಕೆ, ಕುರಿ, ನೆಲ್ಲೂರು ಕುರಿ ತಳಿ ಇತ್ಯಾದಿಗಳು ಭರ್ಜರಿಯಾಗಿ ಮಾರಾಟವಾದವು. ಜೂನ್ 29 ರಂದು ನಡೆಯಲಿರುವ ಬಕ್ರೀದ್ ಹಬ್ಬದ ಪ್ರಯುಕ್ತ ಕರ್ನಾಟಕ, ಆಂಧ್ರಪ್ರದೇಶ, ಚೆನ್ನೈ, ರಾಣಿಪೇಟೆ, ತಿರುಪತ್ತೂರಿನ ವ್ಯಾಪಾರಿಗಳು ಮೇಕೆಗಳನ್ನು ಖರೀದಿಸಿದರು.
ಕೆ.ವಿ.ಕುಪ್ಪಂ ಮಾರುಕಟ್ಟೆಗೆ ಬರುವಂತಹ ಮೇಕೆಗಳು, ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆದು, ಅಲ್ಲಿ ಬೆಳೆಯುವ ಗಿಡಗಳನ್ನು ತಿಂದು ಬೆಳೆಯುವುದರಿಂದ ಅವುಗಳ ಮಾಂಸಕ್ಕೆ ವಿಶೇಷ ರುಚಿ ಇರುವುದು ಗಮನಾರ್ಹ.