“ಭಾರತೀಯ ಪ್ರಧಾನಿ ಮೋದಿಯವರೊಂದಿಗಿನ ಅದಾನಿಯವರ ಸ್ನೇಹದಿಂದಾಗಿಯೇ ಕೀನ್ಯಾದಲ್ಲಿ ಅದಾನಿ ವಿರುದ್ಧದ ಆಂದೋಲನ ನಡೆಯುತ್ತಿದೆ” – ಕಾಂಗ್ರೆಸ್
ಕಳೆದ ಕೆಲವು ವರ್ಷಗಳಿಂದ ಕೊರೊನಾ ಪ್ರಭಾವ, ರಷ್ಯಾ-ಉಕ್ರೇನ್ ಯುದ್ಧ ಇತ್ಯಾದಿಗಳಿಂದ ಜಾಗತಿಕವಾಗಿ ಆರ್ಥಿಕತೆಯಲ್ಲಿ ದೊಡ್ಡ ಕುಸಿತ ಕಾಣುತ್ತಿದೆ. ಇದರಿಂದಾಗಿ ವಿಶ್ವಾದ್ಯಂತ ಬಡ್ಡಿ ದರಗಳು ಹೆಚ್ಚಾಗಿದ್ದು, ಜನಸಾಮಾನ್ಯರಷ್ಟೇ ಅಲ್ಲ ಜೆಫ್ ಬೆಜೋಸ್ (Jeff Bezos), ಎಲಾನ್ ಮಸ್ಕ್ (Elon Musk), ಮಾರ್ಕ್ ಜುಕರ್ ಬರ್ಗ್ (Mark Zuckerberg) ರಂತಹ ಶ್ರೀಮಂತರ ಸಂಪತ್ತು 60 ಬಿಲಿಯನ್ ಡಾಲರ್‌ಗಳಷ್ಟು ಕುಸಿತವನ್ನು ಕಂಡಿದೆ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಈ ಆರ್ಥಿಕ ಪರಿಣಾಮ ಭಾರತದಲ್ಲೂ ಪ್ರತಿಧ್ವನಿಸಿದೆ. ಭಾರತೀಯ ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಆದರೆ ಈ ಹಾನಿಯು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಮತ್ತು ಅವರ ಆಸ್ತಿ ಮೌಲ್ಯವೂ ತೀವ್ರವಾಗಿ ಏರಿಕೆಯಾಗಿದೆ.
ಇದಕ್ಕೆ ಮುಖ್ಯ ಕಾರಣ, ಪ್ರಧಾನಿ ಮೋದಿ ಜತೆಗಿನ ಅದಾನಿ ನಿಕಟ ಒಡನಾಟವೇ ಇದಕ್ಕೆ ಕಾರಣ ಎನ್ನಲಾಗಿದೆ. ಮೋದಿಯವರ ವಿದೇಶ ಪ್ರವಾಸಗಳು ಅದಾನಿಯವರ ವ್ಯಾಪಾರ ಹಿತಾಸಕ್ತಿಗಾಗಿ ಎಂಬ ಟೀಕೆಯೂ ಇದೆ. ಈಗಾಗಲೇ ಶ್ರೀಲಂಕಾದ ವಿದ್ಯುತ್ ಯೋಜನೆಗಳನ್ನು ಅದಾನಿಗೆ ನೀಡುವಂತೆ ಭಾರತ ಸರ್ಕಾರ ಒತ್ತಡ ಹೇರಿತ್ತು ಎಂಬ ದೂರುಗಳಿವೆ.
ಈ ಹಿನ್ನೆಲೆಯಲ್ಲಿ, ಆಫ್ರಿಕಾದ ಕೀನ್ಯಾ ದೇಶದಲ್ಲೂ ಅದಾನಿ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕೀನ್ಯಾದ ರಾಜಧಾನಿ ನೈರೋಬಿ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಇದಕ್ಕೆ ಕಾರ್ಮಿಕರು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೇ ಅದಾನಿ ವಿರುದ್ಧ ಕೀನ್ಯಾದಲ್ಲಿ ಪ್ರತಿಭಟನೆ ಕೂಡ ಭುಗಿಲೆದ್ದಿದೆ. ಕೀನ್ಯಾ ಏರ್ಮೆನ್ ಅಸೋಸಿಯೇಷನ್ ಮುಷ್ಕರಕ್ಕೆ ಕರೆ ನೀಡಿದೆ. ಇದನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಪಕ್ಷ, “ಭಾರತೀಯ ಪ್ರಧಾನಿ ಮೋದಿಯವರೊಂದಿಗಿನ ಅದಾನಿಯವರ ಸ್ನೇಹದಿಂದಾಗಿ ಕೀನ್ಯಾದಲ್ಲಿ ಅದಾನಿ ವಿರುದ್ಧದ ಆಂದೋಲನವು ಭಾರತ ಮತ್ತು ಭಾರತ ಸರ್ಕಾರದ ವಿರುದ್ಧದ ಕೋಪವಾಗಿ ಸುಲಭವಾಗಿ ಬದಲಾಗಬಹುದು”ಎಂದು ಎಚ್ಚರಿಸಿದೆ.