ಅಮೆರಿಕದಲ್ಲಿ ಬಂದೂಕು ಸಂಸ್ಕೃತಿಯ ಕಾರಣದಿಂದಾಗಿ 2023ರಲ್ಲಿ ಬರೋಬ್ಬರಿ 42,000 ಅಮೆರಿಕನ್ನರು ಹತ್ಯೆಯಾಗಿದ್ದಾರೆ ಎಂದು ಗನ್ ವಯಲೆನ್ಸ್ ಆರ್ಕೈವ್‌ನ ಡೇಟಾ ತೋರಿಸುತ್ತದೆ.
ಅಮೆರಿಕದ ರಾಜಕೀಯವನ್ನು ದೇಶದ ಕಾರ್ಪೊರೇಟ್ ಗಳು, ವಿಶೇಷವಾಗಿ ಶಸ್ತ್ರಾಸ್ತ್ರ ಉದ್ಯಮಗಳು ನಿರ್ಧರಿಸುತ್ತದೆ. ಈ ಕಂಪನಿಗಳ ಪ್ರಾಬಲ್ಯದಿಂದಾಗಿ ಅಮೆರಿಕ ಹಲವು ದೇಶಗಳ ಮೇಲೆ ಯುದ್ಧ ಹೇರಿದೆ. ಇದರ ಹಿನ್ನೆಲೆಯಲ್ಲಿ ಅಮೆರಿಕದ ಆರ್ಥಿಕತೆಯಲ್ಲಿ (ಯುದ್ಧದ ಆರ್ಥಿಕತೆ) ಶಸ್ತ್ರಾಸ್ತ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ಈ ಶಸ್ತ್ರಾಸ್ತ್ರ ಆರ್ಥಿಕತೆಯ ಪಿಡುಗು ಅಮೆರಿಕವನ್ನೂ ಬಿಟ್ಟಿಲ್ಲ. ಪ್ರತಿ ವರ್ಷ ಅಮೆರಿಕದಲ್ಲಿ ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಠಾತ್ ಗುಂಡಿನ ದಾಳಿಗಳು ನಡೆಯುತ್ತಲೇ ಇವೆ. ಈ ಗುಂಡಿನ ದಾಳಿಯನ್ನು ನಿಯಂತ್ರಿಸಲು ಅಮೆರಿಕ ಸರ್ಕಾರ ಹರಸಾಹಸ ಪಡುತ್ತಿದೆ.
ಅಮೆರಿಕ ಗನ್ ವಯಲೆನ್ಸ್ ಆರ್ಕೈವ್‌ನ ಮಾಹಿತಿಯ ಪ್ರಕಾರ 2023ರಲ್ಲಿ ಬರೋಬ್ಬರಿ 42,000 ಜನರು ಬಂದೂಕು ಹಿಂಸಾಚಾರದಿಂದ ಸಾವನ್ನಪ್ಪಿದ್ದಾರೆ. ಇಂತಹ ಗುಂಡಿನ ದಾಳಿಯಲ್ಲಿ 17 ವರ್ಷದೊಳಗಿನ 1,600 ಮಕ್ಕಳು ಸಾವನ್ನಪ್ಪಿದ್ದಾರೆ. ಈ ಪೈಕಿ 23,760 ಮಂದಿ ಬಂದೂಕಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮತ್ತು ಯಾವುದೇ ಕಾರಣವಿಲ್ಲದೆ 18,507 ಜನರು ಆತ್ಮರಕ್ಷಣೆಗಾಗಿ ಹಾಗೂ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ.