ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರು/ಬೆಳೆಗಾರರು ಸಾಲ ಮರುಪಾವತಿಸಲು OTS ಅವಕಾಶವಿದೆ‌! » Dynamic Leader
October 21, 2024
ರಾಜಕೀಯ

ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರು/ಬೆಳೆಗಾರರು ಸಾಲ ಮರುಪಾವತಿಸಲು OTS ಅವಕಾಶವಿದೆ‌!

ಕರ್ನಾಟಕ ಬ್ಯಾಂಕ್ ಸೇರಿದಂತೆ ಕೆಲ ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರು/ಬೆಳೆಗಾರರ ವಿಚಾರದಲ್ಲಿ ಬ್ಯಾಂಕ್‌ಗಳು ಮಾನವೀಯತೆಯಿಂದ ವರ್ತಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಖಾಸಗಿ ಬ್ಯಾಂಕ್‌ಗಳ ವಸೂಲಾತಿ ಕಿರುಕುಳದ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಇದು ರೈತರ ಆತ್ಮಹತ್ಯೆಯಂತಹ ಘಟನೆಗೆ ಕಾರಣವಾಗುತ್ತದೆ. ಖಾಸಗಿ ಬ್ಯಾಂಕುಗಳು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರು/ಬೆಳೆಗಾರರು ಸಾಲ ಮರುಪಾವತಿಸಲು OTS ಅವಕಾಶವಿದೆ‌. RBIನ ಕೂಲಿಂಗ್ ಆಫ್ ನಿಯಮದ ಪ್ರಕಾರ ಕಂತುಗಳ ರೂಪದಲ್ಲಿ ಸಾಲ ಮರುಪಾವತಿಸಲು 12 ತಿಂಗಳ ಕಾಲಾವಕಾಶವಿದೆ. ಆದರೆ ಕೆಲ ಖಾಸಗಿ ಬ್ಯಾಂಕುಗಳು ಸಮಯಾವಕಾಶ ಕೊಡದೆ ತಕ್ಷಣವೇ ಸಾಲ ಮರುಪಾವತಿಸಲು ಒತ್ತಡ ಹೇರುವುದು ಸರಿಯಲ್ಲ.

ಬ್ಯಾಂಕುಗಳ ಕಿರುಕುಳದಿಂದ ರೈತ/ಬೆಳೆಗಾರ ಆತ್ಮಹತ್ಯೆಗೆ ಶರಣಾದರೆ ಅದರ ಕಳಂಕವನ್ನು ಸರ್ಕಾರ ಹೊರಬೇಕು. ಸರ್ಫೇಸಿ ಕಾಯ್ದೆಯನ್ನೇ ಅಸ್ತ್ರವಾಗಿಸಿಕೊಂಡು ಖಾಸಗಿ ಬ್ಯಾಂಕ್‌ಗಳು ಬೆಳೆಗಾರರ ಜಮೀನನ್ನು ಹರಾಜಿಗೆ ಇಡುವುದು ಸೂಕ್ತವಲ್ಲ. ಯಾರು ಉದ್ದೇಶಪೂರ್ವಕ ಸುಸ್ತಿದಾರರಲ್ಲವೋ ಅಂತಹವರಿಗೆ ಸಾಲ ಮರು ಪಾವತಿಗೆ ಖಾಸಗಿ ಬ್ಯಾಂಕುಗಳು ಕಾಲಾವಕಾಶ ನೀಡಲಿ

ಅತಿವೃಷ್ಟಿಯಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಳೆಗಾರರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆನಷ್ಟದ ಪರಿಣಾಮ ಕೆಲ ಬೆಳೆಗಾರರಿಗೆ ಬ್ಯಾಂಕುಗಳ ಸಾಲ ಮರುಪಾವತಿಸಲು ಸಾಧ್ಯವಾಗಿರುವುದಿಲ್ಲ. ಸಾಲ ವಸೂಲಾತಿ ಮಾಡುವಾಗ ಖಾಸಗಿ ಬ್ಯಾಂಕುಗಳು ಈ ಅಂಶವನ್ನು ಪರಿಗಣಿಸಬೇಕು. ಖಾಸಗಿ ಬ್ಯಾಂಕ್ ಆಡಳಿತ ಮಂಡಳಿಗಳು ಈ ಬಗ್ಗೆ ಪರಾಮರ್ಶೆ ಮಾಡಬೇಕು ಎಂದು ಹೇಳಿದ್ದಾರೆ. ‌

Related Posts