ಸರ್ಕಾರವನ್ನು ಟೀಕಿಸುವ ಖಾತೆಗಳನ್ನು ನಿರ್ಬಂಧಿಸದಿದ್ದರೆ ಟ್ವಿಟರ್ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಲಾಗಿತ್ತು! ಜಾಕ್ ಡಾರ್ಸಿ » Dynamic Leader
October 21, 2024
ದೇಶ

ಸರ್ಕಾರವನ್ನು ಟೀಕಿಸುವ ಖಾತೆಗಳನ್ನು ನಿರ್ಬಂಧಿಸದಿದ್ದರೆ ಟ್ವಿಟರ್ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಲಾಗಿತ್ತು! ಜಾಕ್ ಡಾರ್ಸಿ

ಡಿ.ಸಿ.ಪ್ರಕಾಶ್ ಸಂಪಾದಕರು

ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿದ್ದ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ 2020ರಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ಭಾರತವನ್ನು ಸ್ಥಬ್ದಗೊಳಿಸಿತ್ತು. ಅದರಲ್ಲೂ ದೆಹಲಿಯ ಗಡಿಗೆ ಹೊಂದಿಕೊಂಡಿರುವ ಸಿಂಘು, ಟಿಕ್ರಿ ಮತ್ತು ಗಾಜಿಪುರ ಪ್ರದೇಶಗಳಲ್ಲಿ ಪಂಜಾಬ್, ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈತರು ಕೊರೊನಾ ವೈರಸ್ ಹರಡುವಿಕೆಯ ನಡುವೆಯೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಟ್ರಾಕ್ಟರ್ ರ‍್ಯಾಲಿ, ಚಕ್ಕಾ ಜಾಮ್ ಮತ್ತು ರಸ್ತೆ ತಡೆಗಳಂತಹ ಹಲವಾರು ಹಂತಗಳ ಪ್ರತಿಭಟನೆಗಳನ್ನು ನಡೆಸಿದರೂ ಕೇಂದ್ರ ಸರ್ಕಾರ ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರ್ಲಕ್ಷಿಸಿ ವಂಚಿಸುತ್ತಾ ಬಂದಿತು. ಮತ್ತು ಬಿಜೆಪಿ ಬೆಂಬಲಿಗರು ಅವರ ವಿರುದ್ಧ ಮಾನಹಾನಿ ಹರಡಲು ಹಲವು ಪ್ರಯತ್ನಗಳನ್ನು ಮಾಡಿದರು. ಸರಣಿ ಪ್ರತಿಭಟನೆಗಳ ಪರಿಣಾಮದಿಂದ ಮಣಿದ ಕೇಂದ್ರ ಸರ್ಕಾರ ಅಂತಿಮವಾಗಿ ರೈತ ವಿರೋಧಿ ಕಾಯ್ದೆಯನ್ನು ಹಿಂತೆಗೆದುಕೊಂಡಿತು.

ಅದೇ ಸಮಯದಲ್ಲಿ, ಮೋದಿಯವರ ಆಡಳಿತ ದೌರ್ಜನ್ಯವನ್ನು ಟೀಕಿಸಿದ ಅನೇಕ ಪತ್ರಕರ್ತರನ್ನು ಬಿಜೆಪಿ ಸರ್ಕಾರ ಬೆದರಿಸುತ್ತಲೇ ಬಂದಿತು. ಮತ್ತು ಕೇಂದ್ರ ಸರ್ಕಾರದಿಂದ ಕೆಲವು ಪತ್ರಕರ್ತರನ್ನು ಜೈಲಿಗಟ್ಟುವ ಕ್ರೌರ್ಯವೂ ನಡೆಯಿತು.

ಈ ಹಿನ್ನಲೆಯಲ್ಲಿ ಟ್ವಿಟರ್‌ನ ಮಾಜಿ ಸಿಇಒ ಜಾಕ್ ಡಾರ್ಸಿ ಅವರು, ‘ರೈತರ ಪ್ರತಿಭಟನೆಯ ಸುದ್ದಿ ನೀಡುವ ಖಾತೆಗಳನ್ನು ಮತ್ತು ಸರ್ಕಾರವನ್ನು ಟೀಕಿಸುವ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಭಾರತ ಸರ್ಕಾರ ಕೇಳಿತು’ ಎಂಬ ಆಘಾತಕಾರಿ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘2020-21ರ ರೈತರ ಪ್ರತಿಭಟನೆಯ ಖಾತೆಗಳನ್ನು ನಿರ್ಬಂಧಿಸಲು, ಭಾರತ ಸರ್ಕಾರದಿಂದ ಅನೇಕ ವಿನಂತಿಗಳು ಬಂದವು ಮತ್ತು ಸರ್ಕಾರವನ್ನು ಟೀಕಿಸುವ ಪತ್ರಕರ್ತರ ಖಾತೆಗಳನ್ನು ನಿರ್ಬಂಧಿಸುವಂತೆಯೂ ಭಾರತ ಸರ್ಕಾರ ಕೇಳಿತು’ ಎಂದು ಹೇಳಿದ್ದಾರೆ.

“ಅಲ್ಲದೆ, ಬೃಹತ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಟ್ವಿಟರ್ ಕಂಪನಿಯನ್ನು ಮುಚ್ಚುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು ಮತ್ತು ಖಾತೆಗಳನ್ನು ಬ್ಲಾಕ್ ಮಾಡದಿದ್ದರೆ ಟ್ವಿಟರ್ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಸುವುದಾಗಿ ಅವರು ಹೇಳಿದರು . ಅವರು ಹೇಳಿದಂತೆ ದಾಳಿ ನಡೆಸಲಾಗಿತ್ತು. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇದು ನಡೆಯುತ್ತಿದೆ” ಎಂದು ನೋವಿನಿಂದ ಹೇಳಿದ್ದಾರೆ. ಅವರ ಈ ಹೇಳಿಕೆ ಅಘಾತಕಾರಿಯಾಗಿದೆ.

Related Posts