ಆಡೇ ನಮ್ God: ಕೆ.ಎಚ್.ವಿಶ್ವನಾಥ್ ಸಾರಥ್ಯದ ಹೊಸ ಸಿನಿಮಾ ಟೈಟಲ್! » Dynamic Leader
October 31, 2024
ಸಿನಿಮಾ

ಆಡೇ ನಮ್ God: ಕೆ.ಎಚ್.ವಿಶ್ವನಾಥ್ ಸಾರಥ್ಯದ ಹೊಸ ಸಿನಿಮಾ ಟೈಟಲ್!

ವರದಿ: ಅರುಣ್ ಜಿ.,

ಹಿರಿಯ ನಿರ್ದೇಶಕ ಕೆ.ಎಚ್.ವಿಶ್ವನಾಥ್ ಸಾರಥ್ಯದ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ‘ಆಡೇ ನಮ್ God’ ಅಂತಿದ್ದಾರೆ ರಾಮ ರಾಮ ರೇ ನಟರಾಜ್.

ಬಿ.ಬಿ.ಆರ್ ಫಿಲ್ಮಂಸ್ ಹಾಗೂ ಎವರೆಸ್ಟ್ ಇಂಡಿಯಾ ಎಂಟರ್‌ಟೈನರ್ ಬ್ಯಾನರ್‌ನಡಿ ಪ್ರೊ.ಬಿ.ಬಸವರಾಜ್ ಹಾಗೂ ರೇಣುಕಾ ಬಸವರಾಜ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡ್ತಿರುವ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಪಂಚಮ ವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಸಿನಿಮಾಗಳ ಖ್ಯಾತಿ ಹಿರಿಯ ನಿರ್ದೇಶಕ ಕೆ.ಎಚ್.ವಿಶ್ವನಾಥ್ ಆಕ್ಷನ್ ಕಟ್ ಹೇಳ್ತಿರುವ ಚಿತ್ರಕ್ಕೆ ‘ಆಡೇ ನಮ್ God’ ಎಂಬ ಶೀರ್ಷಿಕೆ ಇಡಲಾಗಿದೆ.

ಇದನ್ನೂ ಓದಿ: ದರ್ಬಾರ್ ಪರಿಶುದ್ದ ಹಾಸ್ಯ ಚಿತ್ರ: ನಾಯಕ ಸತೀಶ್

ಮೂಡನಂಬಿಕೆ ಸುತ್ತ ಸಾಗುವ ಈ ಕಥೆಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಪಿಂಕಿ ಎಲ್ಲಿ ಚಿತ್ರದ ಅನೂಪ್ ಶೂನ್ಯ, ಸಾರಿಕ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಿ.ಸುರೇಶ್ ಸೇರಿದಂತೆ ಇತರರು ತಾರಾ ಬಳಗದಲ್ಲಿದ್ದಾರೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಬಿ.ಎಸ್,ಕೆಂಪರಾಜು ಸಂಕಲನ, ಸ್ವಾಮಿನಾಥನ್ ಸಂಗೀತ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ-ಸಹ ನಿರ್ದೇಶನ ‘ಆಡೇ ನಮ್ God’ ಚಿತ್ರಕ್ಕಿದೆ. ಸೆನ್ಸಾರ್ ಪಾಸಾಗಿರುವ ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Related Posts